ಕನ್ನಡ ಚಿತ್ರರಂಗದ ಹಿರಿಯ ಹಾಸ್ಯ ಕಲಾವಿದ ಸರಿಗಮ ವಿಜಿ ಇತ್ತೀಚೆಗಷ್ಟೇ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೇ ನಿಧನ ಹೊಂದಿದ್ದು ಕುಟುಂಬಸ್ಥರು ಹಾಗೂ ಕನ್ನಡ ಚಿತ್ರರಂಗ ಕಂಬನಿ ಮಿಡಿದಿದೆ.
ಇತ್ತೀಚೆಗಷ್ಟೇ ಸರಿಗಮ ವಿಜಿ ಅವರು ಅನಾರೋಗ್ಯ ಕಾರಣದಿಂದ, ಬೆಂಗಳೂರಿನ ಯಶವಂತಪುರದಲ್ಲಿರುವ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದರು. ಕಫ ಹೆಚ್ಚಾಗಿದ್ದರಿಗೆ ನೆಬ್ಯುಲೈಸೇಷನ್ ಮಾಡಲಾಗಿತ್ತು. ಆಗ ಕಫ ಕರಗಿ ಲಂಗ್ಸ್‌ಗೆ ಸೇರಿತ್ತು. ಇದರಿಂದ ಇವರ ಆರೋಗ್ಯದ ಸ್ಥಿತಿ ಗಂಭೀರವಾಗಿತ್ತು.