ಬೆಂಗಳೂರು - ನಿವೃತ್ತ ಲೋಕಾಯುಕ್ತ ಸಂತೋಷ್ ಹೆಗಡೆ 3 ಮಾಜಿ ಮುಖ್ಯಮಂತ್ರಿಗಳ ವಿರುದ್ಧ ಭ್ರಷ್ಟಚಾರದ ಆರೋಪ ಸಂಬಂಧ ವರದಿ ಸಲ್ಲಿಸಿದರು. ಈಗ ನಿವೃತ್ತರಾಗಿದ್ದಾರೆ. ಸದ್ಯ ಅವರ ಆರ್ಥಿಕ ಸ್ಥಿತಿ ಹೇಗಿದೆ ಅಂತಾ ತಿಳಿಯಲು ಎಲ್ಲರಿಗೂ ಕುತೂಹಲ ಇದೆ.
ಇವರು ಸುಪ್ರೀಂ ಕೋರ್ಟ್ ನಲ್ಲೂ ನ್ಯಾಯಾಧೀಶರಾಗಿದ್ದರು. ನಂತರ ಲೋಕಾಯುಕ್ತದಲ್ಲಿ 5 ವರ್ಷ ಸೇವೆ ಸಲ್ಲಿಸಿದ್ದಾರೆ. ಸದ್ಯ ನಿವೃತ್ತರಾಗಿದ್ದಾರೆ. ಸಮಾಜದಲ್ಲಿ ಇಷ್ಟೆಲ್ಲ ಗೌರವನ್ವಿತ ಹುದ್ದೆ ಅಲಂಕರಿಸಿದ ಮೇಲೆ ಇವರ ಮನೆ ಹೇಗಿರಬಹುದು ಎಂಬ ಲೆಕ್ಕಚಾರ ಎಲ್ಲರಿಗೂ ಇದೆ. ಹಾಗೂ ಇವರ ಆರ್ಥಿಕ ಸ್ಥಿತಿ ತಿಳಿಯುವ ಆಸಕ್ತಿಯೂ ಇರುತ್ತದೆ. ಇಂತಹವರಿಗಾಗೇ ಈ ಆಸಕ್ತಿದಾಯಕ ವರದಿಯಾಗಿದೆ.
ಸಂತೋಷ್ ಹೆಗ್ಡೆ ಅವರಿಗೆ ಬೆಂಗಳೂರಿನಲ್ಲಿ ಒಂದು ಫ್ಲಾಟ್ ಇದೆ. 1800 ಸ್ಕ್ಯಾಯರ್ ಫೀಟ್ ಇರುವ ಈ ಫ್ಲಾಟ್ನಲ್ಲಿ ಮೂರು ರೂಂಗಳು , ಒಂದು ಅಡುಗೆ ಮನೆ , ಒಂದು ಕಾಮನ್ ಹಾಲ್ ಕಮ್ ಡಿನ್ನರ್ ಟೇಬಲ್ ಇರುವ ಜಾಗವಿದೆ. ಇದನ್ನ ಬಿಟ್ಟರೆ ಎರಡು ವಾಶ್ ರೂಮ್ ಇದೆ. 10 ಸಣ್ಣ ಹೂ ಕುಂಡ ಇಡುವಷ್ಟ ಜಾಗದ ಒಂದು ಬಾಲ್ಕನಿ ಇದೆ. ಒಂದು ರೂಂನಲ್ಲಿ ಕಚೇರಿಯೂ ಇದೆ.
ಇದನ್ನ ಬಿಟ್ಟರೆ ನಿವೃತ್ತಿ ಪಿಂಚಣಿ 3 ಲಕ್ಷ ರೂ ಬರುತ್ತಿದ್ದು , ತಮ್ಮ ಎಲ್ಲ ಖರ್ಚು ವೆಚ್ಚವನ್ನ ನಿರ್ವಹಿಸಿ ತಮ್ಮ ಪತ್ನಿಯೊಂದಿಗೆ ಜೀವನ ಸಾಗಿಸಲು ಕೋರ್ಟ್ ಕಡೆಯಿಂದ ಬರುವ ಮಧ್ಯಸ್ಥಿಕೆ ಕೇಸ್ಗಳನ್ನ ಆನ್ ಲೈನ್ ನಲ್ಲಿ ನಡೆಸುತ್ತಿದ್ದಾರೆ.
ಇದನ್ನ ಬಿಟ್ಟರೆ ಬೇರೆನು ಆಸ್ತಿ ಇಲ್ಲ. ಅಷ್ಟೇ ಅಲ್ಲ , ತಮ್ಮ ಬದುಕನ್ನ ಯುವ ಪೀಳಿಗೆಯೊಂದಿಗೆ ಕಳೆಯಲು ನಿತ್ಯ ಆಹ್ವಾನಿತ ಶಾಲೆ - ಕಾಲೇಜಿಗೆ ಭೇಟಿ ನೀಡುತ್ತಾರೆ. ಈ ಪ್ರಕಾರ ಸದ್ಯ 1800 ಶಾಲೆಗಳಿಗೆ ಭೇಟಿ ನೀಡಿದ್ದಾರೆ. ಇದಕ್ಕೆ ಹೇಳುವುದು ಇರೊದ್ರಲ್ಲಿ ಖುಷಿಯಾಗಿರು ಅಂತಾ.