ಸ್ಪೆಷಲ್ ಸ್ಟೋರಿ

ಸಂತೋಷ್​ ಹೆಗ್ಡೆ ಮನೆಯಲ್ಲಿರುವ ಬೆಲೆ ಬಾಳುವ ವಸ್ತುಗಳು ಗೊತ್ತಾ ?

ನೋಡಿದರೆ ಅಚ್ಚರಿಯಾಗುತ್ತೆ

ಬೆಂಗಳೂರು - ಅವಶ್ಯಕತೆಗಳು ಪೂರ್ಣವಾದ ಮೇಲೆ ಶುರುವಾಗುವುದೇ ಐಷಾರಾಮಿ ಬದುಕು. ಸುಪ್ರೀಂ ಕೋರ್ಟ್ ಮಾಜಿ ಜಡ್ಜ್ , ಲೋಕಾಯುಕ್ತ 5 ವರ್ಷ ಸೇವೆ , ಇದಕ್ಕೂ ಮುನ್ನ ನ್ಯಾಯವಾದಿ ವೃತ್ತಿ ಮತ್ತೆ ಎಷ್ಟೆಲ್ಲ ಐಷಾರಾಮಿ ಇರಬಾರದು ಹೇಳಿ. ಅದನ್ನ ನೋಡಲು ಎಲ್ಲರೂ ಕಾತುರರಾಗಿರುತ್ತಾರೆ. 

ಯೆಸ್ , ನಿವೃತ್ತ ಲೋಕಾಯುಕ್ತ ಸಂತೋಷ್ ಹೆಗಡೆ ಅವರ ನಿವಾಸ ಬೆಂಗಳೂರಿನ ಕುಮಾರಕೃಪ ಸಮೀಪವಿದೆ. ಅವರ ನಿವಾಸದಲ್ಲಿ ಅಲಂಕಾರಿಕ ವಸ್ತುಗಳು ಹೆಚ್ಚು ಆಕರ್ಷಣೀಯವಾಗಿದೆ. ಇದೆಲ್ಲ ಸಾವಿರ , ಲಕ್ಷ , ಕೋಟಿ ನೀಡಿ ಖರೀದಿ ಮಾಡಿಲ್ಲ . ಬದಲಾಗಿ ಉಡುಗೊರೆಯಾಗಿ ಬಂದ ವಸ್ತುಗಳೇ ಇವರ ಮನೆಗೆ ಹೆಚ್ಚು ಮೆರಗು ನೀಡಿದೆ.

ಭಿನ್ನ ರೂಪದಲ್ಲಿ , ವಿಭಿನ್ನ ನೃತ್ಯ ಭಂಗಿಯಲ್ಲಿರುವ ದೇವರ ವಿಗ್ರಹಗಳು , ಪ್ರಕೃತಿ ಸೌಂದರ್ಯ ವರ್ಣಿಸುವ ಪೇಂಟಿಂಗ್ಗಳು , ಗ್ಲಾಸ್ ಶೀಲ್ಡ್ಗಳು , ವಿದ್ಯಾಭ್ಯಾಸದ ವೇಳೆ ಸಿಕ್ಕ ಪದಕ , ಶೀಲ್ಡ್ಗಳೇ ಹೆಚ್ಚು ಕಾಣ ಸಿಗುತ್ತದೆ. 

ಬಂದ ಅತಿಥಿಗಳು ಕುಳಿತು ಕೊಳ್ಳಲು 4 ಕುರ್ಚಿ, 6 ಜನ ಕುಳಿತುಕೊಳ್ಳುವ ಡಿನ್ನರ್ ಸೆಟ್ , ಅಪ್ಪ - ಅಮ್ಮ , ಕುಟುಂಬಸ್ಥರು ಮೂರು ಫೋಟೊ , ನ್ಯಾಯ ಕೇಳಿ ಬರುವ ಕೆಲವು ಕೇಸ್ಗಳ ಕಂತೆ ಕಂತೆ ದಾಖಲೆಗಳು ಮಾತ್ರ ರಾಶಿ ರಾಶಿ ಇದೆ. 

ಬರೀ ಮಾತನಾಡೊದಲ್ಲ , ಹೇಳಿದಂತೆ ಬದುಕುವುದೆಂದರೆ ಇದೆ.