ಸಿನಿಮಾ

ಮಹಾಕುಂಭ ಮೇಳದಲ್ಲಿ ಸಾನ್ಯಾ ಅಯ್ಯರ್‌ ಪುಣ್ಯ ಸ್ನಾನ..!

ನಾವೆಲ್ಲರೂ ಕೇವಲ ಮಾನವ ಜೀವನವನ್ನು ಅನುಭವಿಸುತ್ತಿರುವ ಆಧ್ಯಾತ್ಮಿಕ ಜೀವಿಗಳು, ನೀವೆಲ್ಲರೂ ಉನ್ನತ ಕ್ಷೇತ್ರಗಳಿಗೆ ಏರಬಹುದು. ಮನುಷ್ಯರು ಭೂಮಿಯ ಮೇಲಿನ ನಿಮ್ಮ ಉದ್ದೇಶವು ಈಡೇರಲಿ ಎಂದು ಬರೆದುಕೊಂಡಿದ್ದಾರೆ.

ಪುಟ್ಟಗೌರಿ ಮದುವೆ ಖ್ಯಾತಿಯ ಸಾನ್ಯಾ ಅಯ್ಯರ್‌ ಪ್ರಯಾಗ್‌ ರಾಜ್ಯಗ್‌ ಭೇಟಿ ನೀಡಿದ್ದಾರೆ. ಪ್ರಯಾಗ್‌ ರಾಜ್‌ಗೆ ಮಹಾಕುಂಭಮೇಳ ನಡೆಯುತ್ತಿದ್ದು, ತ್ರಿವೇಣಿ ಸಂಗಮಕ್ಕೆ ಭಕ್ತ ಸಾಗರವೇ ಹರಿದು ಬರುತ್ತಿದೆ. ಈ ಸಾಲಿಗೆ ನಟಿ ಸಾನ್ಯಾ ಅಯ್ಯರ್‌ ಕೂಡ ಸೇರಿದ್ದಾರೆ. 

ಹೌದು ಪ್ರಯಾಗ್‌ ರಾಜ್‌ಗೆ ಭೇಟಿ ನೀಡಿದ ಸಾನ್ಯಾ ಅಯ್ಯರ್‌ ಅವರು, ನಾಗಾಸಾಧುಗಳ ಆಶೀರ್ವಾದವನ್ನ ಪಡೆದಿದ್ದಾರೆ. ಮೊದಲಿನಿಂದಲೂ ಆದ್ಯಾತ್ಮ, ದೇವರ ಮೇಲೆ ಹೆಚ್ಚಿನ ನಂಬಿಕೆ ಹೊಂದಿರುವ ಸಾನ್ಯ ತಾಯಿಯ ಜೊತೆ ಕುಂಬಮೇಳಕ್ಕೆ ತೆರಳಿದ್ದಾರೆ. 

ಮಹಾ ಕುಂಭಮೇಳಕ್ಕೆ ತರಳಿರುವ ಸಾನ್ಯಾ ಅಯ್ಯರ್ ತಮ್ಮ ಇನ್ಸ್ಟಗ್ರಾಮ್ ಖಾತೆಯಲ್ಲಿ ವಿಡಿಯೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ. ಸಂಗಮದಲ್ಲಿ ಮೌನಿ ಅಮಾವಾಸ್ಯೆಯ ಶಾಹಿ ಸ್ನಾನವು ನನ್ನ ಅಂತರಂಗದಲ್ಲಿ ಆಧ್ಯಾತ್ಮದ ಅಲೆಯನ್ನೇ ಎಬ್ಬಿಸಿತು. ಇದು ನನಗೆ ಪುನರ್ಜನ್ಮವಲ್ಲದೆ ಬೇರೇನೂ ಅಲ್ಲ ಎಂದು ನಾನು ಭಾವಿಸಿದೆ ಮತ್ತು ನನ್ನ ಮುಂದಿನ ಹೊಸ ಪ್ರಯಾಣಕ್ಕಾಗಿ ನನ್ನ ಎಲ್ಲಾ ಪಿತೃಗಳು / ಪೂರ್ವಜರಿಂದ ಆಶೀರ್ವಾದವನ್ನು ಕೋರಿದೆ. 

ನಾವೆಲ್ಲರೂ ಕೇವಲ ಮಾನವ ಜೀವನವನ್ನು ಅನುಭವಿಸುತ್ತಿರುವ ಆಧ್ಯಾತ್ಮಿಕ ಜೀವಿಗಳು, ನೀವೆಲ್ಲರೂ ಉನ್ನತ ಕ್ಷೇತ್ರಗಳಿಗೆ ಏರಬಹುದು. ಮನುಷ್ಯರು ಭೂಮಿಯ ಮೇಲಿನ ನಿಮ್ಮ ಉದ್ದೇಶವು ಈಡೇರಲಿ ಎಂದು ಬರೆದುಕೊಂಡಿದ್ದಾರೆ.