ವೈರಲ್

ಕಡಿಮೆ ಬೆಲೆಯಲ್ಲಿ ಚಿನ್ನ ನೀಡುವುದಾಗಿ ವಂಚನೆ; ಎಸ್ಕೇಪ್ ಆಗಿದ್ದ ಗ್ಯಾಂಗ್ ಅರೆಸ್ಟ್

5 ಲಕ್ಷ 50 ಸಾವಿರ ಹಣ ಪಡೆದು ಚಿನ್ನ ನೀಡುವುದಾಗಿ ನಂಬಿಸಿ ಎಸ್ಕೇಪ್ ಆಗಿದ್ದ ಗ್ಯಾಂಗ್ ಅರೆಸ್ಟ್ ಕಡಿಮೆ ಬೆಲೆಯಲ್ಲಿ ಚಿನ್ನ ನೀಡುವುದಾಗಿ ನಂಬಿಸಿ ಎಸ್ಕೇಪ್

ತುಮಕೂರು : ಕಡಿಮೆ ಬೆಲೆಯಲ್ಲಿ ಚಿನ್ನ ನೀಡುವುದಾಗಿ ನಂಬಿಸಿ ಎಸ್ಕೇಪ್ ಆಗಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. 5 ಲಕ್ಷ 50 ಸಾವಿರ ಹಣ ಪಡೆದು ಚಿನ್ನ ನೀಡುವುದಾಗಿ ನಂಬಿಸಿ ಎಸ್ಕೇಪ್ ಆಗಿದ್ದ ಗ್ಯಾಂಗ್ ಅರೆಸ್ಟ್ ಆಗಿದ್ದಾರೆ. ಸೆಪ್ಟೆಂಬರ್ 28 ರಂದು ತುಮಕೂರು ಜಿಲ್ಲೆ, ಕೊರಟಗೆರೆ ತಾಲೂಕಿನ ಜಿ. ನಾಗೇನಹಳ್ಳಿ ಬಳಿ ಈ ಘಟನೆ ನಡೆದಿತ್ತು. 

ಈ ನಾಲ್ವರ ಗ್ಯಾಂಗ್ ಆಂಧ್ರ ಮೂಲದ ಶಾಶವಲಿ ಎಂಬುವರಿಗೆ ವಂಚಿಸಿದ್ದರು. ಕೊರಟಗೆರೆ ಪಿಎಸ್ ಐ ಚೇತನ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ. ಬಂಧಿತರಿಂದ 5.5 ಲಕ್ಷ ರೂಪಾಯಿ ನಗದು ಹಾಗೂ ಒಂದು ಬೈಕ್ ವಶ ಪಡಿಸಿಕೊಂಡಿದ್ದಾರೆ. ರಾನ ಯುವರಾಜ್ ನಾಯಕ್ (22) ಹಕ್ಕಿಪಿಕ್ಕಿ ಕಾಲೋನಿ, ಕನ್ವೇಶ (45) ಹಕ್ಕಿಪಿಕ್ಕಿ‌ ಕಾಲೋನಿ, ಹಾಗೂ ರಾಜು (34) ಹಕ್ಕಿ ಪಿಕ್ಕಿ ಕಾಲೋನಿ ನಿವಾಸಿಗಳು ಬಂಧಿತ ಆರೋಪಿಗಳಾಗಿದ್ದಾರೆ. 

ಇನ್ನೂ ಸಂದಿಲ್ ಎಂಬುವವನಿಗೆ ಪೊಲೀಸರ ಶೋಧ ಕಾರ್ಯ ನಡೆಸಿದ್ದು, ಈ ಘಟನೆ ಸಂಬಂಧ ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.