ದಿವಂಗತ ಪುನೀತ್ ರಾಜ್ ಕುಮಾರ್ ಹೆಸರಿನಲ್ಲಿ ಓಟದ ಸ್ಪರ್ಧೆ ಏರ್ಪಡಿಸಿ, ಅಪರಿಚಿತ ವ್ಯಕ್ತಿಯೊಬ್ಬ ವಂಚನೆಗೆ ಮುಂದಾಗಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ. ರಾಷ್ಟ್ರ ಮಟ್ಟದ ಪಯರಯಷರ ಹಾಗೂ ಮಹಿಳೆಯರ ಓಟದ ಸ್ಪರ್ಧೆ ಏರ್ಪಡಿಸಿರುವ ಕರಪತ್ರ ಬಿಡುಗಡೆ ಮಾಡಿದ್ದು, ದೊಡ್ಡ ಮೊತ್ತದ ನಗದು ನೀಡಲಾಗುವುದು ಎಂದು ಬರೆಯಲಾಗಿದೆ. ಓಟದ ಸ್ಪರ್ಧೆಯಲ್ಲಿ ಪ್ರಥಮ 5ಲಕ್ಷ, ದ್ವಿತೀಯ 4ಲಕ್ಷ, ತೃತೀಯ 3, ಚತುರ್ಥ 2 ಹಾಗೂ ಪಂಚಮಿ ಬಹುಮಾನ 1 ಲಕ್ಷ ಎಂದು ನಮೂದು ಮಾಡಿರುವ ಪೋಸ್ಟರ್ ವಾಟ್ಸಾಪ್ ಗ್ರೂಪ್ ಗಳಲ್ಲಿ ಹರಿದಾಡುತ್ತಿದೆ.

ನಕಲಿ ಪೋಸ್ಟರ್ ನಲ್ಲಿ ಡಾ.ಪುನೀತ್ ರಾಜಕುಮಾರ್ ಅಭಿಮಾನಿ ಬಳಗ ಮಳವಳ್ಳಿ, ಮಂಡ್ಯ ಜಿಲ್ಲೆ ಎಂದು ನಮೂದಾಗಿದ್ದು, ರಾಶಿಪುರ ಸೇನಾ ಸಮಿತಿಯಿಂದ ಮಳವಳ್ಳಿ ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಳಲಿಸಲಾಗಿದೆ. ಡಾ.ರಾಜ್ ಕುಮಾರ್ ಅವರ ಕುಟುಂಬಕ್ಕೆ ಹಾಗೂ ಮಳವಳ್ಳಿಗೂ ಅವಿನಾಭಾವದ ಸಂಬಂಧ ಇದೆ. ರಾಜ್ಯದಲ್ಲೇ ಮೊಟ್ಟಮೊದಲ ಬಾರಿಗೆ ಡಾ.ರಾಜ್ ಕುಮಾರ್ ಕಲಾ ಸಂಘವನ್ನು 1976ರಲ್ಲಿ ಮಳವಳ್ಳಿಯಲ್ಲಿ ಸ್ಥಾಪನೆ ಮಾಡಲಾಗಿದೆ. ಸ್ಪರ್ಧೆ ಆಯೋಜನೆ ಮಾಡಿರುವ ವ್ಯಕ್ತಿ ಬಗ್ಗೆ ಮಾಹಿತಿ ಇಲ್ಲ, ಕರ ಪತ್ರವನ್ನು ಮುಧೋಳದಲ್ಲಿ ಪ್ರಿಂಟ್ ಮಾಡಲಾಗಿದೆ. ಸ್ಪರ್ಧಾಳುಗಳಿಗೆ ಹಣದ ಆಸೆ ತೋರಿಸಿ ವಂಚನೆ ಮಾಡ್ತಿದ್ದಾನೆ ಎಂದು ಆರೋಪ ಮಾಡಲಾಗಿದೆ.