ದಕ್ಷಿಣ ಕನ್ನಡ ಜಿಲ್ಲೆಯ ಸರ್ಕಾರಿ ಶಾಲೆ ಮಕ್ಕಳಿಗೆ, ಓದು-ಬರಹ, ಆಟದ ಜೊತೆ ಕೃಷಿ ಜ್ಞಾನವನ್ನೂ ತುಂಬುತ್ತಿರುವುದಕ್ಕೆ ಸಾಕ್ಷಿಯಾಗಿದೆ. ಗಿಡ-ಮರಗಳ ಮಧ್ಯೆ ಇರುವ ಶಾಲೆಯಲ್ಲಿಪ್ರತಿ ಬಾರಿಯೂ ಪರಿಸರಕ್ಕೆ ಸಂಬಂಧಿಸಿದ ವಿಷಯಗಳನ್ನು, ಮಕ್ಕಳಿಗೆ ತರಗತಿಯಲ್ಲೇ ಕಲಿಸುತ್ತಾರೆ. ಹಾಗೇನೆ ಈ ಬಾರಿಯೂ ಶಾಲೆ ಆವರಣದಲ್ಲಿ, ಮಕ್ಕಳಿಂದ ಭತ್ತದ ಗದ್ದೆ ಮಾಡಿಸಿದ್ದಾರೆ.
ಆಟದ ಮೈದಾನದಲ್ಲಿ ಭತ್ತದ ಕೃಷಿ.!
ಎಲ್ಲಾ ತರಗತಿಗಳಲ್ಲಿ ಆಹಾರ ಬೆಳೆಗಳನ್ನು ಬೆಳೆಸೋದು ಹೇಗೆ ಎಂಬುದರ ಬಗ್ಗೆ ಪಠ್ಯ ಇರುತ್ತವೆ. ಆ ಕಾರಣಕ್ಕಾಗಿ ಭ್ರಮಾಲೋಕದಲ್ಲೇ ಆಹಾರವನ್ನು ಈ ರೀತಿ ಬೆಳೆಸಬಹುದು, ಈ ರೀತಿಯಲ್ಲಿ ಕಟಾವು ಮಾಡಬೇಕು, ಸಂಸ್ಕರಣೆ ಹೇಗೆ ಮಾಡಬೇಕು ಎನ್ನುವ ವಿಚಾರವನ್ನು ಮಾತ್ರವೇ ಮಕ್ಕಳು ತಿಳಿದಿರುತ್ತಾರೆ. ಆದರೆ ಮಕ್ಕಳನ್ನು ಆ ಭ್ರಮಾಲೋಕದಿಂದ ವಾಸ್ತವದ ಕಡೆಗೆ ಕರೆ ತರಬೇಕು ಎನ್ನುವ ಉದ್ಧೇಶದಿಂದ, ಮಕ್ಕಳ ಆಟದ ಮೈದಾನದಲ್ಲಿ ಭತ್ತದ ಗದ್ದೆ ಮಾಡಿಸಲಾಗಿದೆ.
ಮಳೆಗಾಲದಲ್ಲಿ ಈ ಮೈದಾನ ಕೆಸರಿನಿಂದ ತುಂಬಿ ಮಕ್ಕಳಿಗೆ ಆಟವಾಡಲು ಸಾಧ್ಯವಾಗದ ಹಿನ್ನಲೆ, ಈ ಬಾರಿ ಮೈದಾನದಲ್ಲಿ ಭತ್ತದ ಬೆಳೆ ಬೆಳೆಸಲು ನಿರ್ಧರಿಸಿದ್ದಾರೆ. ಸಗಣಿ, ಬೂದಿ ಮತ್ತು ಸೊಪ್ಪು ಹಾಕಿ ಗದ್ದೆಯನ್ನು ಹದಮಾಡಲಾಗಿದ್ಧು, ಬಳಿಕ ನುರಿತ ಭತ್ತದ ಬೇಸಾಯ ಮಾಡುವವರನ್ನು ಕೆರಸಿ, ಅವರೊಂದಿಗೆ ಮಕ್ಕಳನ್ನೂ ಸೇರಿಸಿಕೊಂಡು ಭತ್ತದ ನಾಟಿ ಮಾಡಿದ್ದಾರೆ.