ಮೇಷ ರಾಶಿ
2024 ವರ್ಷದ ಕಡೆಯ ತಿಂಗಳು ಡಿಸೆಂಬರ್. ಈ ವೇಳೆಯಲ್ಲಿ ಮಹತ್ತರವಾದ ಬದಲಾವಣೆಯನ್ನು ಕಾಣುವಿರಿ. ಮುಂದಿನ ವರ್ಷದ ದಿಕ್ಸೂಚಿಯಾಗಲಿದೆ. ಈ ತಿಂಗಳು ನಿಮ್ಮ ಆರೋಗ್ಯವೂ ಸುಧಾರಿಸಲಿದು , ಶೀಘ್ರವೇ ಉದ್ಯೋಗ ಬೆಳವಣಿಗೆಯತ್ತ ಗಮನ ಕೊಡಿ. ನಿಮ್ಮೆ ಕೆಲಸವನ್ನ ಮೇಲಾಧಿಕಾರಿಗಳು ಗಮನಿಸುತ್ತಿದ್ದು, ಇದರ ಫಲವಾಗಿ ಮುಂದಿನ ವರ್ಷದಲ್ಲಿ ನಿಮಗೆ ಯಶಸ್ಸು ದಕ್ಕಲಿದೆ. ಇನ್ನೂ , ಕುಟುಂಬದಲ್ಲಿ ಸಮಯ ನೀಡುತ್ತಿಲ್ಲ ಎಂದು ಕಿರಿಕಿರಿ ಇದ್ದರೂ , ಆರ್ಥಿಕವಾಗಿ ಎಲ್ಲವನ್ನ ನಿಭಾಯಿಸುತ್ತಿದ್ದೀರಾ ಎಂದು ಪ್ರಶಂಸೆ ನಿಮ್ಮದಾಗಲಿದೆ.
ವೃಷಭ ರಾಶಿ
ಎಲ್ಲ ಸವಾಲುಗಳನ್ನ ಎದುರಿಸಲು ನೀವು ಸಮರ್ಥರಾಗಿದ್ದರೂ ಸಹ ನೋಡುಗರ ಕಣ್ಣಲ್ಲಿ ನೀವು ಸೋಮಾರಿ ಎಂದು ಬಿಂಬಿತವಾಗುತ್ತಿರಾ. ಇಷ್ಟು ದಿನಗಳು ಕಳೆದ ಸುಖದ ಸಮಯಕ್ಕೆ ಕೊಂಚ ಧಕ್ಕೆ ಬರಲಿದೆ. ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಬೇಕಾದರೆ ಕೊಂಚ ಹೆಚ್ಚಿನ ಶ್ರಮ ಹಾಕಬೇಕಿದೆ. ಆಹಾರ ಕ್ರಮದಲ್ಲಿ ಎಚ್ಚರ ವಹಿಸಿಕೊಳ್ಳಿ. ತಿಂಗಳ ಕೊನೆಯ ಭಾಗದಲ್ಲಿ ಕೊಂಚ ಹೊಟ್ಟೆ ಸಮಸ್ಯೆ ಕಾಡಬಹುದಾಗಿದೆ.
ಮಿಥುನ ರಾಶಿ
ಈ ಹಿಂದೆ ನಿಮ್ಮನ್ನ ಹೀಯಾಳಿಸದವರು ನಿಮ್ಮ ಬಳಿಯೇ ಸಹಾಯ ಕೇಳಲು ಬರಬಹುದು. ಇದೊಂದು ದೊಡ್ಡ ನಾಟಕವಾಗಿರುತ್ತದೆ. ಯಾರೇ ಏನೇ ಹೇಳಿದರೂ ತಪ್ಪದೇ ಪರಿಶೀಲಿಸಿಯೇ ನಿರ್ಧಾರ ಕೈಗೊಳ್ಳಿರಿ. ಸದ್ಯಕ್ಕೆ ನಿಮ್ಮ ಮಾನಸಿಕ ನೆಮ್ಮದಿ ಕೊಂಚ ನಿರಾಳವಾಗಿರುತ್ತದೆ. ಅದನ್ನ ಕಂಡು ಶತ್ರುಗಳಿಗೆ ಕೊಂಚ ಕಸಿವಿಸಿಯಾಗಿ ತೊಂದರೆ ಕೊಡಲು ಪ್ರಯತ್ನ ಪಟ್ಟರು ನವಗ್ರಹಗಳ ಆರಾಧನೆ ಮೂಲಕ ಈ ಸಮಸ್ಯೆಗೆ ಪರಿಹಾರ ಕಂಡು ಕೊಳ್ಳಿರಿ.
ಕಟಕ ರಾಶಿ
ಸಮಾಜದಲ್ಲಿ ಹೆಚ್ಚು ಮನ್ನಣೆ ಗಳಿಸಲು ಯಾರಿಗೆ ತೊಂದರೆ ಕೊಟ್ಟಿದ್ದೀರಾ ಅವರು ಈಗ ನಿಮ್ಮ ಎದುರಾಳಿಯಾಗಿದ್ದಾರೆ. ವೆಂಕಟೇಶ್ವರ ಪೂಜೆಯ ಫಲವಾಗಿ ಈ ರಾಶಿಯವರಿಗೆ ಸದ್ಯ ಲಕ್ಷ್ಮೀ ಕಟಾಕ್ಷ ಚೆನ್ನಾಗಿದೆ. ಅಪ್ಪಿ - ತಪ್ಪಿಯೂ ಮನಸ್ಸಿನ ಗೊಂದಲಗಳನ್ನ ಪೈಪೋಟಿ ಸ್ಥಳಗಳಲ್ಲಿ ತೊರಿಸಿಕೊಳ್ಳಬೇಡಿ. ನಿಮ್ಮ ಗಮನ ಸದಾ ಹೊಸ ಕೆಲಸ ಆರಂಭದ ಕಡೆಯೇ ಇರಲಿ.
ಸಿಂಹ ರಾಶಿ
ಹಣಕಾಸು ಖರ್ಚು ಮೊದಲಿಗಿಂತಲೂ ಹೆಚ್ಚಾಗಿರುತ್ತದೆ. ಆದಾಯ ಕಡಿಮೆಯಾಗಿದ್ದರೂ ಆರ್ಥಿಕ ತೊಂದರೆಗಂತೂ ಅವಕಾಶ ಇಲ್ಲ. ಹೊಸ ಹೊಸ ಕ್ಷೇತ್ರಗಳಲ್ಲಿ ಅವಕಾಶಗಳು ನಿಮ್ಮನ್ನ ಹುಡುಕಿಕೊಂಡು ಬರಲಿದೆ. ಇನ್ನು ತಿಂಗಳ ಮಧ್ಯಭಾಗದಲ್ಲಿ ಕೆಲವು ಗಣ್ಯ ವ್ಯಕ್ತಿಗಳ ಭೇಟಿ ಮಾಡಲು ಅವಕಾಶ ಇದೆ. ಹೀಗಾಗಿ ಕೂಡಲೇ ಈ ಅವಕಾಶಗಳನ್ನ ನಿಮ್ಮ ವೃತ್ತಿ ಅಭಿವೃದ್ಧಿಗೆ ಬಳಸಿಕೊಳ್ಳಿರಿ. ಹೆಚ್ಚಿನ ಫಲ ಸಿದ್ಧಿಗಾಗಿ ಲಕ್ಷ್ಮೀ ದೇವಿಯನ್ನ ಆರಾಧಿಸಿ.
ಕನ್ಯಾ ರಾಶಿ
ಈ ತಿಂಗಳು ನಿಮಗೆ ಅನುಕೂಲಕರವಾಗಿದು, ಬಹುತೇಕ ನಿಮ್ಮ ಮನಸ್ಸಿನ ಎಲ್ಲ ಇಚ್ಛೆಗಳು ಈಡೇರಲಿದೆ. ಮನೆ ನಿರ್ಮಾಣ ಆಸೆ ಹೊಂದಿದವರು ಈ ಕಾಲದಲ್ಲಿ ಕೆಲಸ ಆರಂಭಿಸಲು ಶುಭ ಸಮಯ ಇದಾಗಿರುತ್ತದೆ. ಹಣದ ಕೊರತೆ ಇದ್ದರೂ ಅನಿರೀಕ್ಷಿತ ಮೂಲಗಳಿಂದ ಹೆಚ್ಚು ಅವಶ್ಯಕ ಎಲ್ಲ ಖರ್ಚುಗಳನ್ನ ನಿಭಾಯಿಸಲು ಶಕ್ತರಾಗಿರುತ್ತೀರಾ.
ತುಲಾ ರಾಶಿ
ಕಳೆದುಕೊಂಡ ಗೌರವ ಮತ್ತೆ ಸಿಗಲಿದೆ. ನಿಮ್ಮ ಸಂಬಂಧಿಕರಿಂದಲೇ ಸಹಾಯ ಪಡೆಯುತ್ತಿದ್ದ ನೀವು ಈಗ ಎಲ್ಲರಿಗೂ ಸಹಾಯ ಮಾಡುವ ಹಂತಕ್ಕೆ ತಲುಪುತ್ತೀರಾ. ಈ ತಿಂಗಳು ನಿಮ್ಮ ಕಷ್ಟ - ಕಾರ್ಪಣ್ಯಕ್ಕೆ ಕೊಂಚ ವಿರಾಮ ದೊರೆಯಲಿದೆ. ಒಂದೇ ಕಡೆ ಕೆಲಸ ಮಾಡುವವರಿಗೆ ಕೊಂಚ ವಿರಾಮ ಸಿಕ್ಕಿ ಸುತ್ತಾಡಲು ಅವಕಾಶ ಬರುವುದು. ಹಲ್ಲಿನ ಬಾದೆ ಈ ತಿಂಗಳಲ್ಲಿ ಕಡಿಮೆ ಆಗಲಿದೆ.
ವೃಶ್ಚಿಕ ರಾಶಿ
ತಿಂಗಳ ಮೊದಲ ವಾರದಲ್ಲಿ ಅನಾರೋಗ್ಯ ಸಮಸ್ಯೆ ಕಾಡಲಿದೆ. ಮನಸ್ಸು ಬಯಸಿದ್ದ ಕೆಲಸ ಮಾಡಲು ಅವಕಾಶ ಇದ್ದರೂ ಸೋಮಾರಿತನವಿದೆ. ಆರೋಗ್ಯದಲ್ಲಿ ಏರುಪೇರು ಆಗಲಿದೆ. ಆರ್ಥಿಕವಾಗಿ ಸಮಸ್ಯೆ ಸ್ವಲ್ಪ ಮಟ್ಟಿಗೆ ಬಾಧಿಸಲಿದೆ. ವೃತ್ತಿಯಲ್ಲಿ ಉತ್ತಮ ವಾತಾವರಣ ಇದ್ದು, ಮುಂದಿನ ಸವಾಲುಗಳಿಗೆ ತಯಾರಿಗೆ ಸೋಮಾರಿತನ ಬಿಡಬೇಕಿದೆ.
ಧನು ರಾಶಿ
ಕುಟುಂಬದ ಎಲ್ಲ ಗಲಾಟೆಗಳಿಗೆ ಈಗ ಬಿಡುವು ಸಿಗಲಿದೆ. ವಿದ್ಯುತ್ ಉಪಕರಣ ಬಳಕೆ ಮಾಡುವಾಗ ಎಚ್ಚರ ಇರಲಿ. ಶೀತದ ಬಾಧೆ ಕಾಡಿ ವೈದ್ಯರನ್ನ ಕಾಣಲೇಬೇಕು ಎನ್ನುವ ಸ್ಥಿತಿ ಎದುರಾಗುತ್ತದೆ. ನಿಮ್ಮ ಸತ್ಯದ ಮಾತುಗಳಿಗೆ ಯಾವುದೇ ಬೆಲೆ ಇರುವುದಿಲ್ಲ. ಬದಲಾಗಿ ನಿಮ್ಮನ್ನ ಸತ್ಯ ಹೇಳಿದಕ್ಕೆ ದೂಷಿಸುವವ ಜನರೇ ಹೆಚ್ಚಾಗಿರುತ್ತಾರೆ. ಆದಾಯಕ್ಕಿಂತ ಹೆಚ್ಚು ಖರ್ಚು ಮಾಡಬೇಡಿ.
ಮಕರ ರಾಶಿ
ನೀವು ನಂಬಿದ್ದವರಿಗೆ ನಿಮಗೆ ವಂಚಿಸಲು ಯತ್ನ ಮಾಡುತ್ತಿರುತ್ತಾರೆ. ನಿಮ್ಮ ಬೆನ್ನ ಹಿಂದೆ ನಡೆಯುತ್ತಿರುವ ಎಲ್ಲ ಷಡ್ಯಂತ್ರಗಳು ಈಗ ಬೆಳಕಿಗೆ ಬರಲಿದೆ. ಶತ್ರುಗಳು ಕಣ್ಣ ಮುಂದೆ ಇದ್ದರೂ ಪ್ರಶ್ನಿಸಲು ಆಗದಂತಹ ಅನಿವಾರ್ಯ ಸೃಷ್ಟಿಯಾಗಲಿದೆ. ನಿಮ್ಮ ಮಕ್ಕಳು ನಿಮ್ಮನ್ನ ಗೌರವದಿಂದ ಕಾಣುತ್ತಾರೆ. ನಿಮ್ಮ ಬಾಳ ಸಂಗಾತಿ ನಿಮಗೆ ಉತ್ತಮ ಉಡುಗೊರೆ ಕೊಡಲು ತಯಾರಿ ಮಾಡುತ್ತಾರೆ.
ಕುಂಭ ರಾಶಿ
ಈ ತಿಂಗಳು ನಿಮಗೆ ಮಿಶ್ರ ಫಲ ದೊರೆಯಲಿದೆ. ನಿಮ್ಮ ಸಂಪಾದನೆ ಬಗ್ಗೆ ಸಾಕಷ್ಟು ಊಹಾ - ಪೋಹಾಗಳು ಸೃಷ್ಟಿಯಾಗಲಿದೆ. ಸ್ನೇಹಿತರೇ ತಾವು ಅಧಿಕಾರ ಪಡೆಯಲು ನಿಮ್ಮನ್ನ ಮೇಲಿಂದ ಕೆಳಗೆ ಬೀಳಿಸಲು ಹೊಂಚು ಹಾಕುತ್ತಾರೆ. ನಿಮ್ಮ ಶತ್ರುಗಳೇ ಕಷ್ಟದ ಸಮಯದಲ್ಲಿ ಕೈ ಹಿಡಿಯುತ್ತಾರೆ. ಮನೆಯಲ್ಲಿ ಹಣಕ್ಕಾಗಿ ಮಾತುಕತೆ ಆಗಲಿದು, ಈ ಸಮಯದಲ್ಲಿ ಸುಮ್ಮನೆ ಇದ್ದರೆ ಮಾತ್ರ ಒಳಿತು.
ಮೀನ ರಾಶಿ
ರಿಯಾಯಿತಿಗಳನ್ನ ನಂಬಿ ಯಾವುದೇ ಹಣ ಹೂಡಿಕೆ ಬೇಡ. 2024 ರಲ್ಲಿ ಆರ್ಥಿಕ ಕಷ್ಟ ಇರಲಿಲ್ಲ. ಆದರೆ 2025 ರಲ್ಲಿ ನಿಮಗೆ ಹಣ ಕೊರತೆ ಕಾಡಲಿದೆ. ನಿಮ್ಮ ಭವಿಷ್ಯಕ್ಕಾಗಿ ಯೋಜನೆಗಳನ್ನ ಈಗಾಗಲೇ ಸಿದ್ಧಪಡಿಸಿಕೊಳ್ಳಿರಿ. ಮನೆಯ ಹಿರಿಯರು , ಮಕ್ಕಳ ಆರೋಗ್ಯದಲ್ಲಿ ಏರುಪೇರು ಆಗಲಿದೆ. ಇಷ್ಟೆಲ್ಲ ಕಷ್ಟಗಳ ನಡುವೆಯೂ ಹೊಸ ವಸ್ತುಗಳ ಖರೀದಿ ಕಡೆ ಹೆಚ್ಚು ಗಮನ ಹರಿಸುತ್ತೀರಾ.