ಮೇಷ ರಾಶಿ
2025 ಮೇಷ ರಾಶಿಯವರಿಗೆ ಮಿಶ್ರ ಫಲ ಉಂಟು ಮಾಡಲಿದೆ. ಸ್ವ ಉದ್ಯೋಗದಿಂದ ಹೆಚ್ಚು ಲಾಭವನ್ನ ಕಾಣುವಿರಿ. ಆರಂಭದಲ್ಲಿ ಕೊಂಚ ಸಮಸ್ಯೆಗಳು ಎದುರಾದರು ಇದನ್ನೆಲ್ಲ ಧೈರ್ಯದಿಂದ ಎದುರಿಸಿ ದೊಡ್ಡ ಸಾಧನೆಗೆ ಆರಂಭ ಆಗಲಿದೆ . ಫೆಬ್ರವರಿ ತಿಂಗಳಲ್ಲಿ ನಿಮ್ಮ ಸಾಲದ ಅರ್ಧ ಭಾಗವನ್ನ ನಿಮ್ಮ ಕುಟುಂಬದವರೇ ತೀರಿಸುತ್ತಾರೆ. ಹಾಗೇ ನಿಮ್ಮ ಸಂಗಾತಿ ನಿಮ್ಮ ಕೆಲಸದಲ್ಲೂ ಭಾಗಿಯಾಗಿ ಯಶಸ್ಸು ತಂದು ಕೊಡಲಿದ್ದಾರೆ. ಜೂನ್ ವೇಳೆಯಲ್ಲಿ ಉದ್ಯೋಗಿಗಳು ನಿಮ್ಮನ್ನ ಬಿಟ್ಟು ಹೋಗಿ ಸ್ವಲ್ಪ ಸಮಸ್ಯೆಯನ್ನೇ ಎದುರಿಸಬೇಕಾಗುತ್ತದೆ.
ವೃಷಭ ರಾಶಿ
2025 ವರ್ಷ ನಿಮಗೆ ಶುಭ ಫಲವೂ ಹೆಚ್ಚಾಗಿ ಲಭಿಸಲಿದೆ. ಹಿಂದಿನ ಎಲ್ಲ ಕಷ್ಟಗಳು ಈಗ ಒಂದೊಂದಾಗಿಯೇ ಪರಿಹಾರವನ್ನ ಕಾಣಲಿದೆ. ಇನ್ನೂ ನಿಮ್ಮ ತಾಯಿ ಮೂಲಕ ನಿಮಗೆ ಮಾನಸಿಕ ,ಹಣಕಾಸಿನ ನೆರವು ಸಿಗಲಿದೆ. ಉದ್ಯೋಗದಲ್ಲಿ ಬಡ್ತಿಯೂ ನಿಮಗೆ ಲಭ್ಯವಾಗಲಿದೆ. ಇನ್ನೂ , ವಿದ್ಯಾರ್ಥಿಗಳು ವೃತ್ತಿಪರ ಕೋರ್ಸ್‌ಗಳನ್ನ ಪಡೆದು ಕಲಿಕೆ ಶುರು ಮಾಡುವುದು ಉತ್ತಮವಾಗಿರುತ್ತದೆ. ಏಪ್ರಿಲ್ ಹೆಚ್ಚು ಲಾಭ ನೀಡುವ ತಿಂಗಳಾಗಿರುತ್ತದೆ.
ಮಿಥುನ ರಾಶಿ
2025 ಶನಿ ಆರ್ಶಿವಾದ ಈ ವರ್ಷದಲ್ಲಿ ಆಗಲಿದ್ದು , ಮೊದಲ ಎರಡು ತಿಂಗಳ ಬಳಿಕ ಹೆಚ್ಚು ಕಾರ್ಯಗಳು ಕೈಗೂಡಲಿದೆ. ಆರೋಗ್ಯದಲ್ಲಿನ ಸಣ್ಣ - ಪುಟ್ಟ ಸಮಸ್ಯೆಗಳು ಬಗೆಹರಿಯುತ್ತದೆ. ನಿಮ್ಮ ಕುಟುಂಬಕ್ಕೆ ಹೊಸ ವ್ಯಕ್ತಿ ಸೇರ್ಪಡೆ ಆಗಲಿದ್ದಾರೆ. ಮೇ ತಿಂಗಳಲ್ಲಿ ಖರ್ಚು ವೆಚ್ಚಕ್ಕೂ ಸಂಬಂಧ ಇಲ್ಲದಂತೆ ಆರ್ಥಿಕ ತೊಂದರೆಯೂ ತಲೆದೋರಬಹುದಾಗಿದೆ.
ಕಟಕ ರಾಶಿ
2025 ಏಪ್ರಿಲ್ ನಂತರ ನಿಮ್ಮ ರಾಶಿಯಲ್ಲಿ ರಾಹುವಿನ ಸಂಚಾರ ಮಂದಗತಿಯಾಗಲಿದೆ. ಇದರಿಂದ ನಿಮ್ಮಲ್ಲಿದ ಎಲ್ಲ ಗೊಂದಲಗಳಿಗೆ ಸ್ವಲ್ಪ ಬ್ರೇಕ್ ಬಿದ್ದಂತೆ ಆಗಲಿದೆ. ಇನ್ನೂ , ಮದುವೆಗಾಗಿ ಹುಡುಕಾಟದಲ್ಲಿ ಇರುವವರಿಗೆ ಈಗ ಮದುವೆ ಯೋಗವೂ ಒಲಿದು ಬರಲಿದೆ. ಭವಿಷ್ಯದ ಉತ್ತಮ ಫಲಕ್ಕೆ ಈ ವರ್ಷವೇ ನೀವು ತಳಹದಿ ಹಾಕಿಕೊಳ್ಳುತ್ತೀರಾ. ನಿಮ್ಮ ಪ್ರೀತಿ ಪಾತ್ರರಿಂದ ದೂರ ಇರಬೇಕಾದ ಸ್ಥಿತಿ ಎದುರಾಗಬಹುದಾಗಿದೆ. ಈ ವರ್ಷವೂ ಮಿಶ್ರ ಫಲವನ್ನ ಹೊಂದಿದೆ.
ಸಿಂಹ ರಾಶಿ
2025 ಯಶಸ್ಸು ನಿಮ್ಮನ್ನ ಹುಡುಕಿಕೊಂಡು ಬರಲಿದೆ. ಜನವರಿಯಿಂದಲೇ ನೀವು ಮಾಡಲು ಎಲ್ಲ ಕೆಲಸಗಳಲ್ಲೂ ಜಯ ಸಿಗಲಿದೆ. ನಿಮ್ಮ ಮಾತಿನ ಮೇಲೆ ಹಿಡಿತ ಇರಲಿ, ಇಷ್ಟು ವರ್ಷ ಕಷ್ಟ ಪಟ್ಟು ಸಾಧಿಸಿದ ಎಲ್ಲ ಸಾಧನೆ ನಿಮ್ಮ ಲಘು ಮಾತಿಂದ ವ್ಯರ್ಥ ಆಗದಿರಲಿ. ಈ ವರ್ಷದಲ್ಲಿ ಗುರುವು ಸಂಪತ್ತು ನೀಡುವ ಸ್ಥಾನದಲ್ಲಿದ್ದು , ನೀವು ಇದರ ಬಳಕೆ ಮಾಡಿಕೊಳ್ಳಿ. ಶನಿ ಪ್ರಭಾವವೂ ಕಡಿಮೆ ಇದ್ದು , ಗುರುಗಳ ಆರ್ಶಿವಾದದಿಂದ ನಿಮಗೆ ನೂತನ ಅನುಭವಗಳು ದೊರೆಯಲಿದೆ.
ಕನ್ಯಾ ರಾಶಿ
2025 ಗುರು ಹಾಗೂ ಶನಿಯ ಚಲನೆ ಸಮಾನಾಗಿ ಸಾಗಲಿದೆ . ಮೊದಲ ಆರು ತಿಂಗಳು ಗುರು ಹಾಗೂ ನಂತರ ಮೂರು ತಿಂಗಳು ಶನಿಯ ಚಲನೆಯಿಂದಾಗಿ ಮಿಶ್ರಫಲ ನಿಮ್ಮದಾಗಲಿದೆ. ನಿಮ್ಮ ಓದಿನಲ್ಲಿ ಹೆಚ್ಚಿನ ಯಶಸ್ಸು ಪರಿಶ್ರಮದ ಫಲವಾಗಿರುತ್ತದೆ. ಆದರೆ , ಆರ್ಥಿಕವಾಗಿ ಬಲ ಬರಲು ಮಾತ್ರ ಶನಿ ಅವಕಾಶ ನೀಡುವುದಿಲ್ಲ. 2025 ರ ಜುಲೈ ತಿಂಗಳಲ್ಲಿ ಕೊಂಚ ನಿರಾಳವಾಗಿ ಸಮಯವನ್ನ ಕಳೆಯಲು ಅವಕಾಶ ಸಿಗುತ್ತದೆ.
ತುಲಾ ರಾಶಿ
2025 ನೀವು ಕಳೆದುಕೊಂಡ ಎಲ್ಲವನ್ನು ಹಿಂತಿರುಗಿಸಿ ಸಿಗುವಂತೆ ಮಾಡಲಿದೆ. ಏಪ್ರಿಲ್ ತಿಂಗಳಲ್ಲಿ ತಪ್ಪದೇ ಗುರು ಆರಾಧನೆ ಮಾಡಿರಿ. ಇದರಿಂದಾಗಿ ಮಾಡುವ ಎಲ್ಲ ಕೆಲಸಗಳಲ್ಲೂ ಯಶಸ್ಸು ಸಿಗಲಿದೆ. ಇನ್ನು , ಕುಟುಂಬದಲ್ಲಿ ನಿಮಗೆ ಸದಾ ಆರ್ಥಿಕ ಸಹಾಯದ ಕೈ ಆಗಿದ್ದ ನಿಮ್ಮ ಪೋಷಕರು ನಿಮ್ಮಿಂದ ದೂರವಿದ್ದರೂ ನಿಮಗೆ ಬೇಕಾದ ಎಲ್ಲ ಅಗತ್ಯಗಳನ್ನ ಪೂರೈಸುತ್ತಾರೆ. ಇನ್ನೂ , ಈ ವರ್ಷ ದುಡ್ಡು ಗಳಿಸಲು ಹಲವು ಮೂಲಗಳು ಕಾಣಿಸುತ್ತದೆ. ಅದನ್ನ ಬಳಸಿಕೊಂಡು ನಂತರ ಮನೆ ನಿರ್ಮಾಣ ಮಾಡುವ ನಿಮ್ಮ ಕನಸನ್ನ ನನಸು ಮಾಡಿಕೊಳ್ಳಿ
ವೃಶ್ಚಿಕ ರಾಶಿ
2025 ಕಳೆದ ೨ ವರೆ ವರ್ಷಗಳ ಎಲ್ಲ ಕಹಿ ಕಲಿತ ಅನುಭವಗಳು ಈಗ ನಿಮಗೆ ಉಪಯೋಗ ಬರಲಿದೆ. ಈ ವರ್ಷವೂ ಆದಾಯಕಾರವಾಗಿದು, ಶುಭ ಫಲವನ್ನೇ ನೀಡಲಿದೆ. ಈ ರಾಶಿಯವರು ಜನವರಿ ತಿಂಗಳಿಂದಲೇ ನಿಮ್ಮ ಕೆಲಸಗಳಲ್ಲಿ ತೊಡಗಿಕೊಳ್ಳಬೇಕು. ಆಗಾಗಿ ಕಾಣಿಸಿಕೊಳ್ಳುವ ಅನಾರೋಗ್ಯ ಸಮಸ್ಯೆಯನ್ನ ತಕ್ಷಣವೇ ಸರಿಪಡಿಸಿಕೊಳ್ಳಲು ಗಮನ ಕೊಡಿ. ಕೆಲಸದ ಜೊತೆಗೆ ಕುಟುಂಬದ ಎಲ್ಲ ಸದಸ್ಯರ ಕಾಳಜಿ ವಹಿಸುವುದು ನಿಮ್ಮ ಮೊದಲ ಆಯ್ಕೆಯಾಗಿರಲಿದೆ. ಅಧಿಕಾರಕ್ಕಾಗಿ ನೀವು ಯಾರ ಹಿಂದೆಯೂ ಹೋಗಬೇಕಾಗಿಲ್ಲ. ಬದಲಾಗಿ ಅಧಿಕಾರವೇ ನೀವು ಮಾಡುವ ಕೆಲಸದಲ್ಲಿ ಸಿಗುವಂತೆ ಅನುಕೂಲ ಆಗಲಿದೆ.
ಧನು ರಾಶಿ
2025 ಉತ್ತಮ ಫಲವನ್ನ ನೀಡಲಿದೆ. ವೈರಾಗ್ಯ ಭಾವ ಹೆಚ್ಚು ನಿಮ್ಮನ್ನ ಅವರಿಸಲಿದೆ. ಧಾರ್ಮಿಕ ಕ್ಷೇತ್ರಗಳಿಗೆ ಸುತ್ತಾಟ ಮಾಡುವ ಸ್ಥಿತಿ ಎದುರಾಗುತ್ತದೆ. ಖರ್ಚಿಗಾಗಿ ಕೂಡಿಟ್ಟ ಎಲ್ಲ ಸಂಪತ್ತನ್ನ ಖರ್ಚು ಮಾಡದೇ ನಿರ್ವಹಣೆ ಮಾಡಲು ಪ್ರಯತ್ನ ಪಡುತ್ತೀರಾ. ನಿಮ್ಮ ಖುಷಿಗಾಗಿ ಹೊಸ ಉದ್ಯೋಗವನ್ನ ಆರಂಭಿಸುತ್ತೀರಾ. ಯಾವುದೇ ನಷ್ಟ ಇಲ್ಲದೇ , ಅದನ್ನ ಶೀಘ್ರವೇ ಮುಚ್ಚುತ್ತೀರಾ. ನಿಮ್ಮನ್ನ ನಂಬಿ ನಿಮ್ಮ ಬಳಿ ಕೆಲಸ ಮಾಡಲು ಸಾಕಷ್ಟು ಜನರು ಕೈ ಜೋಡಿಸುತ್ತಾರೆ.
ಮಕರ ರಾಶಿ
2025 ನಿಮ್ಮ ಆದಾಯದ ಮೂಲವೂ ಹೆಚ್ಚಾಗಲಿದೆ. ಈ ವರ್ಷದಲ್ಲಿ ಮೇ ತಿಂಗಳ ನಂತರ ನಿಮ್ಮ ಕುಟುಂಬದ ಎಲ್ಲ ಸದಸ್ಯರು ನಿಮ್ಮ ಸಹಾಯದಿಂದಲೇ ದುಡ್ಡಿನ ಕಾಸಿನ ಅನುಕೂಲ ಪಡೆದುಕೊಳ್ಳಲಿದ್ದಾರೆ. ಏಪ್ರಿಲ್ ತಿಂಗಳಲ್ಲಿ ಮಕ್ಕಳಿಗೆ ಸ್ವಲ್ಪ ಖರ್ಚು ಮಾಡಬೇಕಾಗುತ್ತದೆ. ನಿಮ್ಮ ಸಂಗಾತಿಯೂ ಆರೋಗ್ಯಕ್ಕಾಗಿ ನಿಮ್ಮ ಇಷ್ಟದ ತಿಂಡಿಗಳನ್ನ ಮಾಡಿಕೊಡಲಿದ್ದಾರೆ. ನಿಮಗೆ 2024 ರಲ್ಲಿ ಮೋಸ ಮಾಡಿದವರು ಸಮಸ್ಯೆಗೆ ಸಿಲುಕಿರುವುದು ನಿಮಗೆ ತಿಳಿಯುತ್ತದೆ. ನಿಮ್ಮ ಯಶಸ್ಸು ಎಲ್ಲ ಸುತ್ತಮುತ್ತಲಿನವರಿಗೂ ತಿಳಿಯುವ ಮೂಲಕ ನಿಮಗೆ ಸಂತೋಷ ಹೆಚ್ಚಾಗಲಿದೆ.
ಕುಂಭ ರಾಶಿ
2025 ರಲ್ಲಿ ಶನಿ , ರಾಹು , ಕೇತುವಿನ ಪ್ರಭಾವವನ್ನ ಕಾಣಬಹುದಾಗಿದೆ. ಈ ವರ್ಷವೂ ಮಿಶ್ರ ಫಲವನ್ನ ಕಾಣಬಹುದು. ಸವಾಲುಗಳ ಎದುರಾದವರು ಸೌಮ್ಯವಾಗಿ ಪರಿಹಾರವನ್ನ ಕಾಣಬಹುದಾಗಿದೆ. 2024 ರಲ್ಲಿ ಗಳಿಸಿದ ಹಣವೂ ಈಗ ವೆಚ್ಚವಾಗಲಿದೆ. ನಿಮ್ಮ ಕುಟುಂಬದಲ್ಲಿ ಏಪ್ರಿಲ್ ಸಮಯದಲ್ಲಿ ಕೇತುವಿನಿಂದಾಗಿ ಸಮಸ್ಯೆ ಎದುರಾಗುತ್ತದೆ. ಕೂಡಲೇ ಸರಿಪಡಿಸಿಕೊಳ್ಳಿ ಇಲ್ಲವಾದರೆ ದೊಡ್ಡ ಕಂದಕವೇ ಸೃಷ್ಟಿಯಾಗುವ ಸಾಧ್ಯತೆ ಇರುತ್ತದೆ. ಶನಿ ಪ್ರಭಾವ ಮಾರ್ಚ್ ನಲ್ಲಿ ಕಡಿಮೆ ಆಗಿದ್ದು , ಹಣದ ಒಳಹರಿವಿಗೆ ಯಾವುದೇ ತೊಂದರೆ ಇರುವುದು. ಆದರೆ ರಾಹುವಿನ ಪ್ರಭಾವದಿಂದಾಗಿ ನಿತ್ಯ ಮಾಡಿದ ತಪ್ಪುಗಳ ನೆನೆದು ಬಾಧಿಸುವುದು ಮಾತ್ರ ತಪ್ಪುವುದಿಲ್ಲ.
ಮೀನ ರಾಶಿ
2025 ಅದೃಷ್ಟದ ವರ್ಷವಾಗಿದೆ. ನಿಮ್ಮ ಅಜಾಗರೂಕತೆಯಿಂದಾಗಿ ಕುಟುಂಬ ತೊರೆದು ದೂರ ಇರಬೇಕಾಗುತ್ತದೆ. ಆದರೂ ಹೋದ ಕಡೆಯೆಲ್ಲ ಯಶಸ್ಸು ನಿಮಗೆ ದೊರೆಯಲಿದೆ. ಈ ವರ್ಷದಿಂದಲೇ ನಿಮ್ಮಲ್ಲಿನ ನಿಜವಾದ ಶ್ರಮ ಮತ್ತಷ್ಟು ಹೆಚ್ಚಳವಾಗಲಿದೆ. ನಿಮ್ಮ ಶ್ರಮಕ್ಕೆ ತಕ್ಕ ಫಲ ಎಂಬಂತೆ ಶಿಕ್ಷಣ ಕ್ಷೇತ್ರದಲ್ಲಿ ದೊಡ್ಡ ಗೆಲುವು ನಿಮಗೆ ದೊರೆಯಲಿದೆ. ಕಡೆಗೆ ಕ್ರೀಡಾ ಅಭಿರುಚಿಯಿಂದಾಗಿ ಈ ಕ್ಷೇತ್ರದಲ್ಲೂ ನಿಮಗೆ ಮನ್ನಣೆ ದೊರೆಯಲಿದೆ.