ವಿಜಯನಗರದಲ್ಲಿ ಕತ್ತೆ ಖರೀದಿ ಭರಾಟೆ ಜೋರಾಗಿದ್ದು, ಕತ್ತೆ ಹಾಲಿನ ಲಾಭ ನೋಡಿದ ಈಗ ರೈತರು ಕತ್ತೆಗಳ ಖರೀದಿಗೆ ಮುಂದಾಗಿದ್ದಾರೆ. ಈ ಹಾಲಿನಿಂದ ತಿಂಗಳಿಗೆ 60 ರಿಂದ 70 ಸಾವಿರ ಲಾಭ ಪಡೆಯಬಹುದಾಗಿದೆ. ಜನ್ನಿ ಮಿಲ್ಕ್ ಎಂಬ ಕಂಪನಿ 3 ಲಕ್ಷ ಕೊಟ್ಟರೆ ಮೂರು ಕತ್ತೆಗಳು ಮತ್ತು ಮೂರು ಕತ್ತೆ ಮರಿ ಮಾರಾಟ ಮಾಡುತ್ತಿದೆ.
ಹೌದು, ಕತ್ತೆ ಹಾಲನ್ನು ಮಕ್ಕಳಿಗೆ ಕುಡಿಸಿದರೆ ಬುದ್ಧಿ ಚುರುಕಾಗುತ್ತೆ. ಹೀಗಾಗಿ ಕತ್ತೆ ಹಾಲಿನ ಲಾಭ ನೋಡಿ ರೈತರು ಕತ್ತೆಗಳ ಖರೀದಿಗೆ ಮುಗಿಬಿದ್ದಿದ್ದಾರೆ. ಜನ್ನಿ ಮಿಲ್ಕ್ ಕಂಪನಿಯ ರಾಜ್ಯದ ಏಕೈಕ ಕಚೇರಿ ಹೊಸಪೇಟೆಯಲ್ಲಿದೆ. ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯಲ್ಲಿ ಮೂಲ ಕಚೇರಿ ಹೊಂದಿದ್ದು, ಈ ಕಂಪನಿ 500 ರೂ. ಬಾಂಡ್ ಮೇಲೆ ಅಗ್ರಿಮೆಂಟ್ ಮಾಡಿಸಿಕೊಂಡು 3 ಲಕ್ಷಕ್ಕೆ ಮೂರು ಕತ್ತೆಗಳು 3 ಮರಿ ಕತ್ತೆಗಳನ್ನು ನೀಡುತ್ತಿದೆ.
ಒಂದು ಕತ್ತೆ ದಿನಕ್ಕೆ ಎರಡು ಲೀಟರ್ ಹಾಲು ಕೊಡುತ್ತಿದ್ದು, ಒಂದು ಲೀಟರ್ ಕತ್ತೆ ಹಾಲಿನ ಬೆಲೆ 2736 ರೂ. ಒಂದು ಕತ್ತೆ ದಿನಕ್ಕೆ ಎರಡು ಲೀಟರ್ ಹಾಲು ಕೊಡುತ್ತದೆ. ತಿಂಗಳಿಗೆ 60-70 ಸಾವಿರ ರೂಪಾಯಿ ಲಾಭ ಬರುತ್ತಿದೆ ಎಂದು ರೈತರು ತಿಳಿಸಿದ್ದಾರೆ. ಮೂರು ಕತ್ತೆಗಳು, ಮೂರು ಕತ್ತೆ ಮರಿಗಳು ಸೇರಿ ಒಂದು ಯೂನಿಟ್ ಅಂತ ಹೇಳ್ತಾರೆ. ಇದ್ರಂತೆ 20 ಯುನಿಟ್ ಈಗಾಗಲೇ ಮಾರಾಟ ಮಾಡಲಾಗಿದೆ. ಸದ್ಯ ಕತ್ತೆ ಹಾಲಿನ ಲಾಭ ನೋಡಿ, ರೈತರು ಕತ್ತೆಗಳ ಖರೀದಿಗೆ ಮುಂದಾಗಿದ್ದಾರೆ.