ಭಾರತೀಯ ಕ್ರಿಕೆಟ್‌ನ ಅತ್ಯುತ್ತಮ ಆರಂಭಿಕ ಆಟಗಾರರಲ್ಲಿ ಒಬ್ಬರಾಗಿದ್ದ ವೀರೇಂದ್ರ ಸೆಹ್ವಾಗ್ ಸದ್ಯ ವೈಯಕ್ತಿಕ ಜೀವನ ಹಾಗೂ ತಮ್ಮ ಆದಾಯದ ಮೂಲಕ ಸುದ್ದಿಯಲ್ಲಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸೆಹ್ವಾಗ್ ಕುರಿತಾದ ವದಂತಯೊಂದು ಶುರುವಾಗಿದ್ದು, 20 ವರ್ಷಗಳ ದಾಂಪತ್ಯದ ನಂತರ ಸೇಹ್ವಾಗ್ ತಮ್ಮ ಪತ್ನಿ ಆರತಿ ಅಹ್ಲಾವತ್‌ಗೆ ವಿಚ್ಛೇದನ ನೀಡ್ತಾರೆ ಎನ್ನಲಾಗುತ್ತಿದೆ. ಇನ್ನೂ ಇ ಸುದ್ದಿ ಬೆನ್ನಲ್ಲೇ ಈಗ ಸೆಹ್ವಾಗಹ್ ಅವರ ಆಸ್ತಿ ವಿಚಾರ ಕೂಡ ಮುನ್ನೆಲೆಗೆ ಬಂದಿದೆ.
104 ಟೆಸ್ಟ್ ಮತ್ತು 251 ODIಗಳನ್ನು ಆಡಿರುವ ವೀರೇಂದ್ರ ಸೆಹ್ವಾಗ್ ಅವರು ಡಿಸೆಂಬರ್, 2004 ರಲ್ಲಿ ಆರತಿ ಅವರನ್ನು ವಿವಾಹವಾದರು. ದಂಪತಿಗೆ 2007 ರಲ್ಲಿ ಜನಿಸಿದ ಆರ್ಯವೀರ್ ಮತ್ತು 2010 ರಲ್ಲಿ ಜನಿಸಿದ ವೇದಾಂತ್ ಎಂಬ ಇಬ್ಬರು ಗಂಡು ಮಕ್ಕಳಿದ್ದಾರೆ. ಆದಾಗ್ಯೂ ಇವರ ಬಗ್ಗೆ ಕೆಲ ವದಂತಿಗಳು ಬಿತ್ತರವಾಗುತ್ತಿದ್ದು, ದಂಪತಿಗಳ ನಡುವೆ ಎಲ್ಲವೂ ಸರಿಯಾಗಿಲ್ಲ ಎನ್ನಲಾಗುತ್ತಿದೆ.
ಸೆಹ್ವಾಗ್ ಎಷ್ಟು ಕೋಟಿಯ ಒಡೆಯ ಗೊತ್ತಾ?
ಇನ್ನೂ ಸೆಹ್ವಾಗ್ ಕ್ರಿಟೆಟ್‌ನಿಂದ ನಿವೃತ್ತಿಯನ್ನ ಹೊಂದಿದ್ದರೂ ಕೂಡ, ಅದೇ ಕ್ರಿಕೆಟ್‌ನಿಂದಲೇ ಸಾಕಷ್ಟು ಕೋಟಿ ಹಣವನ್ನ ಸಂಪಾದಿಸುತ್ತಾರೆ. ಸೆಹ್ವಾಗ್ ಮಾಧ್ಯಮಗಳ ವರದಿಗಳ ಪ್ರಕಾರ 2024ರಲ್ಲಿ 30 ಕೋಟಿ ಹಣ ಗಳಿಸಿದ್ದು, ಸೆಹ್ವಾಗ್ ಅವರ ಒಟ್ಟು ಸಂಪತ್ತು 370 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ.
ಸ್ವೆಹಾಗ್ ಕ್ರಿಕೆಟ್ ಪಂದ್ಯಗಳ ಸಮಯದಲ್ಲಿ ಟಿವಿಯಲ್ಲಿ ಕಾಮೆಂಟರಿ ಮತ್ತು ಕ್ರಿಕೆಟ್ ಪರಿಣಿತರಾಗಿ ವಿಶ್ಲೇಷಣೆ ಮಾಡುತ್ತಾರೆ. ಅಲ್ಲದೇ ಬೇರೆ ಬೇರೆ ಟಿವಿ ಕಾರ್ಯಕ್ರಮಗಳಿಂದಲೂ ಸಂಪಾದನೆ ಮಾಡುತ್ತಾರೆ. ಸೋಶಿಯಲ್ ಮೀಡಿಯಾಗಳಾದ ಯೂಟ್ಯೂಬ್, ಇನ್‌ಸ್ಟಾಗ್ರಾಮ್ ಮೂಲಕ ಸುಮಾರು 26 ಕೋಟಿ ಸಂಪಾದನೆ ಮಾಡುತ್ತಾರೆ.