ದೇಶ

ಯಶ್‌ ನನ್ನ ಫ್ರೆಂಡ್‌ ಎಂದ ಶಾರುಖ್‌.. ಸೌತ್‌ ಸೂಪರ್‌ಸ್ಟಾರ್‌ಗಳಿಗೆ ಬಾಲಿವುಡ್‌ ಖಾನ್‌ ರಿಕ್ವೆಸ್ಟ್‌

ದುಬೈನಲ್ಲಿ ಸಾವಿರಾರು ಜನರ ಮುಂದೆ ಶಾರುಖ್‌ಖಾನ್‌ ಮಾಡಿರುವ ರಿಕ್ವೆಸ್ಟ್‌ ಏನು ಅನ್ನೋದನ್ನೇ ಹೇಳ್ತೀವಿ ನೋಡಿ. ಸೌತ್‌ ಇಂಡಿಯಾ ಸ್ಟಾರ್ಸ್‌ ತುಂಬಾ ಫಾಸ್ಟ್ ಆಗಿ ಡ್ಯಾನ್ಸ್ ಮಾಡ್ತಾರೆ. ಅವರೊಂದಿಗೆ ನನಗೆ ಪೈಪೋಟಿ ಮಾಡೋದು ಕಷ್ಟವಾಗುತ್ತದೆ, ಹೀಗಾಗಿ ವೇಗವಾಗಿ ಡ್ಯಾನ್ಸ್‌ ಮಾಡೋದು ನಿಲ್ಲಿಸಿ ಎಂದು ಹೇಳಿರೋದು ವೈರಲ್‌ ಆಗ್ತಿದೆ.

ಇಂಡಿಯನ್‌ ಫಿಲ್ಮ್‌ ಇಂಡಸ್ಟಿ ಅಂದ್ರೆ ಬಾಲಿವುಡ್‌ ಅನ್ನೋ ಕಾಲ ಒಂದಿತ್ತು.. ಹಿಂದಿ ಚಿತ್ರರಂಗದ ನಟ-ನಟಿಯರಿಗೆ ಇನ್ನಿಲ್ಲದ ಮನ್ನಣೆ ನೀಡಲಾಗ್ತಿತ್ತು. ಆದ್ರೆ ಇದೀಗ ಸೀನ್‌ ಕಂಪ್ಲೀಟ್‌ ಚೇಂಜ್‌. ಸಿನಿಮಾ ಕ್ಷೇತ್ರಕ್ಕೆ ನಾವೇ ಕಿಂಗ್‌ ಅಂತಿದ್ದವರು, ಈಗ ಅಂಗಲಾಚುತ್ತಿದ್ದಾರೆ. ಖಾನ್‌ಗಳದ್ದೇ ಹವಾ ಎನ್ನುತ್ತಿದ್ದ ಹಿಂದಿ ಚಿತ್ರರಂಗ,, ಈಗ ಬಾಲ ಸುಟ್ಟ ಬೆಕ್ಕಿನಂತಾಗಿದೆ. ಅಷ್ಟಕ್ಕೂ ಬಾಲಿವುಡ್‌ ಕಂಗಾಲಾಗಿರೋದು ಬೇರೆ ಏನಕ್ಕೂ ಅಲ್ಲ. ಸೌತ್‌ ಸಿನಿಮಾ ಹವಾ ಕಂಡು. ದಕ್ಷಿಣ ಭಾರತದ ಸಿನಿಮಾಗಳು ಅಂದ್ರೆ ಇದೀಗ ಬಾಲಿವುಡ್‌ನ ಖ್ಯಾತ ನಟರು ನಿದ್ದೆಯಲ್ಲೂ ನಡುಗ್ತಾರೆ.. ಏಕೆಂದರೆ ಸೌತ್‌ ಸಿನಿಮಾಗಳ ಕಲೆಕ್ಷನ್‌ ಆಗಿದೆ.

ಹೌದು.. ಸಾವಿರ ಕೋಟಿ ಕಲೆಕ್ಷನ್‌ ಅನ್ನೋದು ಈಗ ದಕ್ಷಿಣ ಭಾರತದ ಸಿನಿಮಾಗಳಿಗೆ ಕಾಮನ್‌. ಕನ್ನಡ, ತೆಲುಗು, ತಮಿಳು, ಮಲಯಾಳಂ ಚಿತ್ರಗಳ ಮುಂದೆ ಹಿಂದಿ ಫಿಲ್ಮ್‌ಗಳು ಉಸಿರಾಡೋಕು ಕಷ್ಟಪಡ್ತಿವೆ.. ಹೀಗಾಗಿಯೇ ಬಾಲಿವುಡ್‌ ನಟರಿಗೆ ದಕ್ಷಿಣ ಭಾರತದಲ್ಲಿ ದೊಡ್ಡ ಗೆಲುವು ಬೇಕು ಅಂದ್ರೆ ಸೌತ್‌ ಇಂಡಿಯಾ ಸ್ಟಾರ್‌ಗಳ ಜಪ ಮಾಡ್ಲೇಬೇಕು ಅನ್ನೋ ಹಾಗಾಗಿದೆ. ಅದಕ್ಕೆ ಜಸ್ಟ್‌ ಎಕ್ಸಾಂಪಲ್‌ ಅಂದ್ರೆ ಶಾರುಖ್‌ ಖಾನ್‌.

ಬಾಲಿವುಡ್ ಕಿಂಗ್, ಹಿಂದಿ ಚಿತ್ರರಂಗದ ಬಾದ್‌ಶಾ ಎಂತಲೇ ಖ್ಯಾತಿ ಪಡೆದಿರುವ ಶಾರುಖ್ ಖಾನ್, ಭಾರತದಲ್ಲಿ ಮಾತ್ರವಲ್ಲ ಫಾರಿನ್‌ನಲ್ಲಿಯೂ ಫೇಮಸ್‌. ಇದೇ ಬಾಲಿವುಡ್ ಕಿಂಗ್ ಶಾರುಖ್ ಖಾನ್, ರಾಕಿಂಗ್ ಸ್ಟಾರ್ ಯಶ್ ಸೇರಿ ದಕ್ಷಿಣ ಭಾರತದ ಸೂಪರ್‌ಸ್ಟಾರ್‌ಗಳನ್ನ ಹಾಡಿ ಹೊಗಳಿದ್ದಾರೆ.. ಅಷ್ಟೇ ಅಲ್ಲ ಸೌತ್‌ ಇಂಡಿಯನ್‌ ನಟರಿಗೆ ರಿಕ್ವೆಸ್ಟ್‌ ಕೂಡ ಮಾಡಿದ್ದಾರೆ.

ದುಬೈನಲ್ಲಿ ಸಾವಿರಾರು ಜನರ ಮುಂದೆ ಶಾರುಖ್‌ಖಾನ್‌ ಮಾಡಿರುವ ರಿಕ್ವೆಸ್ಟ್‌ ಏನು ಅನ್ನೋದನ್ನೇ ಹೇಳ್ತೀವಿ ನೋಡಿ. ಸೌತ್‌ ಇಂಡಿಯಾ ಸ್ಟಾರ್ಸ್‌ ತುಂಬಾ ಫಾಸ್ಟ್ ಆಗಿ ಡ್ಯಾನ್ಸ್ ಮಾಡ್ತಾರೆ. ಅವರೊಂದಿಗೆ ನನಗೆ ಪೈಪೋಟಿ ಮಾಡೋದು ಕಷ್ಟವಾಗುತ್ತದೆ, ಹೀಗಾಗಿ ವೇಗವಾಗಿ ಡ್ಯಾನ್ಸ್‌ ಮಾಡೋದು ನಿಲ್ಲಿಸಿ ಎಂದು ಹೇಳಿರೋದು ವೈರಲ್‌ ಆಗ್ತಿದೆ.

ಕೇಳಿಸಿಕೊಂಡ್ರಲ್ಲ. ಶಾರುಖ್‌ ಖಾನ್‌.. ಇಷ್ಟನ್ನೇ ಹೇಳಿ ಮುಗಿಸಿಲ್ಲ. ದಕ್ಷಿಣ ಭಾರತದಲ್ಲಿ ನನಗೆ ಹಲವು ಸ್ನೇಹಿತರಿದ್ದಾರೆ. ಕೇರಳ, ಆಂಧ್ರ, ತಮಿಳುನಾಡು, ಕರ್ನಾಟಕದಲ್ಲಿ ಫ್ರೆಂಡ್ಸ್‌ಗಳಿದ್ದಾರೆ. ಅಲ್ಲು ಅರ್ಜುನ್, ಪ್ರಭಾಸ್, ರಾಮ್ ಚರಣ್, ಯಶ್, ಮಹೇಶ್ ಬಾಬು, ವಿಜಯ್ ದಳಪತಿ, ರಜನಿಕಾಂತ್ ಸರ್, ಕಮಲ್ ಹಾಸನ್ ಸರ್.. ಹೀಗೆ ಹಲವು ಸ್ನೇಹಿತರನ್ನು ಹೊಂದಿದ್ದೇನೆ. ಇವರೆಲ್ಲರಿಗೂ ನನ್ನ ವಿಶೇಷ ವಿನಂತಿ ಏನೆಂದರೆ, ದಯವಿಟ್ಟು ವೇಗವಾಗಿ ನೃತ್ಯ ಮಾಡುವುದನ್ನು ನಿಲ್ಲಿಸಿ, ಏಕೆಂದ್ರ ನನಗೆ ನಿಮ್‌ ಜೊತೆ ಕಾಂಪಿಟ್‌ ಮಾಡೋಕೆ ಆಗಲ್ಲ ಎಂದಿರೋ ವಿಡಿಯೋ, ಸೌತ್‌ ಸಿನಿಮಾಗಳ ತಾಕತ್‌ ಏನು ಅನ್ನೋದನ್ನ ತೋರಿಸ್ತಿದೆ.

ಒಂದು ಕಾಲದಲ್ಲಿ ದಕ್ಷಿಣ ಭಾರತದ ಸಿನಿಮಾ ಅಂದ್ರೆ ಮುಖ ತಿರುಗಿಸುತ್ತಿದ್ದವರು, ನಮ್ಮ ನಟರ ಹೆಸರನ್ನ ಜಪ ಮಾಡ್ತಿದ್ದಾರೆ. ನಿಮಗೆ ಗೊತ್ತಿರಲಿ.. ರಾಕಿಂಗ್‌ ಸ್ಟಾರ್‌ ಯಶ್‌ ಅಭಿನಯದ ಬ್ಲಾಕ್‌ಬಸ್ಟರ್‌ ಮೂಮಿ ಕೆಜಿಎಫ್‌ ಎದುರು ಶಾರುಖ್‌ ನಟನೆಯ ಜೀರೋ ಸಿನಿಮಾ ರಿಲೀಸ್‌ ಆಗಿತ್ತು. ಈ ಫಿಲ್ಮ್‌ ಕಂಡು ಕೇಳರಿಯದ ರೀತಿ ಅಟ್ಟರ್‌ ಫ್ಲಾಪ್‌ ಆಗಿತ್ತು.. ನಂತರ ಕನ್ನಡ ಸೇರಿ ತೆಲುಗು, ತಮಿಳು ಸಿನಿಮಾಗಳ ಉತ್ತರ ದಂಡಯಾತ್ರೆ ಮುಂದುವರೆದೇ ಇದೆ. ಅದರಲ್ಲಿಯೂ ಪುಷ್ಫ-2 ಕಲೆಕ್ಷನ್‌ ಕಂಡು, ಬಾಲಿವುಡ್‌ ಮಂದಿ ಅವಕ್ಕಾಗಿದ್ದಾರೆ. ಯಾವಾಗ ಸೌತ್‌ ಹಿಂದಿ ಸಿನಿಮಾಗಳ ಮಾರ್ಕೆಟ್‌ ಬಿತ್ತು. ಆಗ ಬಾಲಿವುಡ್‌ ನಟರು ದಕ್ಷಿಣದತ್ತ ಮುಖ ಮಾಡ್ತಿದ್ದಾರೆ. ಇಲ್ಲಿನ ನಟರ ಜೊತೆ ಪಾರ್ಟಿ, ಸಿನಿಮಾ ಪ್ರಮೋಷನ್‌ಗಳಲ್ಲಿ ಕಾಣಿಸಿಕೊಳ್ತಿದ್ದಾರೆ. ಇದೀಗ ಬಾಲಿವುಡ್‌ ಕಿಂಗ್‌ ಎಂದೇ ಕರೆಸಿಕೊಳ್ಳುವ ಶಾರುಖ್‌ಖಾನ್‌, ಯಶ್‌ ಸೇರಿ ಸೌತ್‌ ಇಂಡಿಯನ್‌ ನಟರಿಗೆ ಮನವಿ ಮಾಡಿರೋ ವಿಡಿಯೋ ವೈರಲ್‌ ಆಗ್ತಿದೆ..