ದೇಶ

ಗೌರಿಯನ್ನು ಮತಾಂತರ ಮಾಡಿದ್ರಾ ಶಾರುಖ್‌ ಖಾನ್‌ : ಈ ಫೋಟೋದ ಅಸಲಿಯತ್ತೇನು?

ಡೀಪ್‌ಫೇಕ್ ಪ್ರಕರಣಗಳು ಭಾರತದಲ್ಲಿ ಬೆಳಕಿಗೆ ಬಂದಿದ್ದು, ರಶ್ಮಿಕಾ ಮಂದಣ್ಣ, ಕತ್ರಿನಾ ಕೈಫ್ ಮತ್ತು ಅಮೀರ್ ಖಾನ್ ಅವರ ಫೇಕ್ ವೀಡಿಯೊಗಳು ‌ ಸೋಶಿಯಲ್‌ ಮೀಡಿಯಾದಲ್ಲಿ ಹರಿದಾಡಿದ್ದವು. ಈಗ ಈ ಸಾಲಿಗೆ ಶಾರುಖ್‌ ಖಾನ್‌ ಅವರ ಪತ್ನಿ ಕೂಡ ಸೇರಿದ್ದಾರೆ.

AI ಕೃತಕ ಬುದ್ದಿಮತ್ತೆಯ ವ್ಯಪಕ ಬಳಕೆ ಇಂದು ಜಗತ್ತನ್ನೇ ಆವರಿಸಿಕೊಂಡಿದೆ. ಎಐ ತಂತ್ರಜ್ಞಾನವನ್ನ ಉತ್ತಮ ಕಾರ್ಯಗಳಿಗೆ ಬಳಸಿಕೊಳ್ಳುವುದಕ್ಕಿಂತ ಡೀಪ್‌ಫೇಕ್‌ಗಾಗಿ ಬಳಕೆ ಮಾಡಿಕೊಳ್ಳುತ್ತಿದ್ದು, ತೀವ್ರ ಕಳವಳವನ್ನ ಉಂಟುಮಾಡಿದೆ. ಡೀಪ್‌ಫೇಕ್ ಪ್ರಕರಣಗಳು ಭಾರತದಲ್ಲಿ ಬೆಳಕಿಗೆ ಬಂದಿದ್ದು, ರಶ್ಮಿಕಾ ಮಂದಣ್ಣ, ಕತ್ರಿನಾ ಕೈಫ್ ಮತ್ತು ಅಮೀರ್ ಖಾನ್ ಅವರ ಫೇಕ್ ವೀಡಿಯೊಗಳು ‌ ಸೋಶಿಯಲ್‌ ಮೀಡಿಯಾದಲ್ಲಿ ಹರಿದಾಡಿದ್ದವು. ಈಗ ಈ ಸಾಲಿಗೆ ಶಾರುಖ್‌ ಖಾನ್‌ ಅವರ ಪತ್ನಿ ಕೂಡ ಸೇರಿದ್ದಾರೆ.

ಹೌದು, ಜಗತ್ತೇ ಇಂದು ಡೀಪ್‌ ಫೇಕ್‌ಗೆ ಬಲಿಯಾಗುತ್ತಿದ್ದು, ಗುರಿ ಶಾರುಖ್ ಖಾನ್ ಅವರು ತಮ್ಮ ಪತ್ನಿ ಗೌರಿ ಮತ್ತು ಮಗ ಆರ್ಯನ್‌ನೊಂದಿಗೆ ಮೆಕ್ಕಾದಲ್ಲಿರುವ ಫೋಟೋವೊಂದು ವೈರಲ್‌ ಆಗಿತ್ತು. ಇದರಲ್ಲಿ ಗೌರಿ ಖಾನ್‌ ಅವರು ಹಿಜಾಬ್‌ ತೊಟ್ಟಿದ್ದು, ಮಗ ಹಾಗೂ ಪತಿಯಜೊತೆಗಿದ್ದರು. ಈ ಫೋಟೋವನ್ನ ಕಂಡ ಶಾರುಖ್‌ ಅಭಿಮಾನಿಗಳು ಗೌರಿ ಖಾನ್‌ ಅವರು ಮತಾಂತರವಾಗಿದ್ದಾರೆ. ಹಾಗಾಗಿ ಹೊಸ ವರ್ಷಕ್ಕೆ ಮೆಕ್ಕಾದಲ್ಲಿನ ಗ್ರ್ಯಾಂಡ್ ಮಸೀದಿಗೆ ಹೋಗಿದ್ದಾರೆ ಎಂದೆಲ್ಲಾ ಕಮೆಂಟ್‌ ಮಾಡಿದ್ರೆ, ಮತ್ತೊಂದಿಷ್ಟು ಮಂದಿ ಶಾರುಖ್ ಅವರು ಗೌರಿಯನ್ನು ಮೆಕ್ಕಾಗೆ ಕರೆದೊಯ್ದು ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಆದರೆ ಇವುಗಳು ಎಐನಿಂದ ಸೃಷ್ಟಿಯಾದ ಡಿ ಫೇಕ್‌ ಫೋಟೋಗಳಾಗಿವೆ.