ಮಂಡ್ಯ : ಶಕ್ತಿ ಯೋಜನೆಯನ್ನು ಯಾವುದೇ ಕಾರಣಕ್ಕೂ ನಿಲ್ಲಿಸಲ್ಲ ಎಂದು ಮಂಡ್ಯದಲ್ಲಿ ಸಚಿವ ಎನ್. ಚಲುವರಾಯಸ್ವಾಮಿ ಹೇಳಿದ್ದಾರೆ. ಶಕ್ತಿ ಯೋಜನೆ ಕಾಂಗ್ರೆಸ್‌ಗೆ ಶಕ್ತಿ ಕೊಟ್ಟಿದೆ. ಸಿಎಂ ಸಹ ಈ ಬಗ್ಗೆ ಸ್ಪಷ್ಟನೆ ಮಾಡಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಕೂಡ ಸ್ಪಷ್ಟನೆ ಕೊಟ್ಟಿದ್ದಾರೆ. ಕೆಲವು ಮಹಿಳೆಯರು ನಮಗೆ ಬೇಡಾ ಎಂದಿದ್ರು. ಅದನ್ನು ಪರಿಶೀಲನೆ ಮಾಡುತ್ತೇವೆ ಎಂದಿದ್ದೆವು. ಇದರ ಬಗ್ಗೆ ಡಿಸಿಎಂ ಸಹ ಸ್ಪಷ್ಟನೆ ನೀಡಿದ್ದಾರೆ ಎಂದರು.

ಈ ಕುರಿತು ಮಾತನಾಡಿದ ಅವರು, ನಾವು ನಮ್ಮ 5 ಗ್ಯಾರಂಟಿಯನ್ನು ನಿಲ್ಲಿಸಲ್ಲ. ವಿರೋಧ ಪಕ್ಷದವರು ರಾಜಕೀಯವಾಗಿ ಮಾತಾಡುತ್ತಾರೆ. ನಾವು ನಮ್ಮ ಯೋಜನೆಗಳನ್ನು ನಿಲ್ಲಿಸಲ್ಲ. ದೇಶದಲ್ಲಿ ಎಲ್ಲಾ ಪ್ರಮುಖ ಯೋಜನೆ ಬಂದಿರೋದು ಕಾಂಗ್ರೆಸ್ ಕಾಲದಲ್ಲಿ. ಹಿಂದಿನ ಐದು ವರ್ಷ ಏನೇಲ್ಲಾ ಆಗಿದೆ ಎಂದು ನೋಡಿ. ನಮ್ಮ ಆಡಳಿತದಲ್ಲಿ ಏನೇಲ್ಲಾ ಆಗಿದೆ ಎಂದು ನೋಡಿ ಎಂದರು.
ಇದೇ ವೇಳೆ ಮಾತನಾಡಿದ ಸಚಿವ ಎನ್. ಚಲುವರಾಯಸ್ವಾಮಿ ಅವರು, ಐದು ಗ್ಯಾರಂಟಿಯನ್ನು ಯಶಸ್ಸಿಯಾಗಿ ನಡೆಸುತ್ತಿದ್ದೇವೆ. ಯಾವ ಕಾರ್ಯಕ್ರಮವನ್ನು ನಾವು ನಿಲ್ಲಿಸಿಲ್ಲ. ಇನ್ನೂ ಹೆಚ್ಚಿನ ಯೋಜನೆಗಳನ್ನು ಕೊಟ್ಟಿದ್ದೇವೆ. ಬರಗಾಲದ ಸಂದರ್ಭದಲ್ಲಿ ಸರಿಯಾಗಿ ನಿರ್ವಹಣೆ ಮಾಡಿದ್ದೇವೆ. ಸುಪ್ರೀಂ ಕೋರ್ಟ್ ಮೂಲಕ ಕೇಂದ್ರ ಸರ್ಕಾರಕ್ಕೆ ಚಾಟಿ ಬೀಸಿದ್ದೇವೆ. ಬಳಿಕ ಬರಗಾಲದ ಪರಿಹಾರ ನೀಡಿದ್ದೇವೆ. ಮಂಡ್ಯ ಜಿಲ್ಲೆಯ ಅಭಿವೃದ್ಧಿಯೂ ಹೆಚ್ಚು ನಮ್ಮ ಕಾಲದಲ್ಲಿಯೇ ಆಗಿರೋದು. ಭಾವನಾತ್ಮಕವಾಗಿ ಮಾತಾಡಿದಾಗ ಇದೆಲ್ಲಾ ಮರೆತು ಹೋಗ್ತಾರೆ. ನಾನು ಅಲ್ಪ ತೃಪ್ತನಾಗಿದ್ದೇನೆ. ನಾನು ಎಲ್ಲಾ ಅಧಿಕಾರ ಅನುಭವಿಸಿದ್ದೇನೆ. ಅಭಿವೃದ್ಧಿ ಮಾಡುವ ಕಡೆ ನನ್ನ ಗಮನವಿದೆ.