ದೇಶ

ಬಾಂಗ್ಲಾ ಪದಚ್ಯುತ ಪ್ರಧಾನಿ ಶೇಖ್‌ ಹಸೀನಾ ʼವೀಸಾʼ ವಿಸ್ತರಣೆ..?

ಶೇಖ್‌ ಹಸೀನಾ ಹಸ್ತಾಂತರಕ್ಕಾಗಿ ಬಾಂಗ್ಲಾದೇಶದ ಮಧ್ಯಂತರ ಸರ್ಕಾರದಿಂದ ಹೆಚ್ಚುತ್ತಿರುವ ಒತ್ತಾಯದ ಮಧ್ಯೆಯೂ ವೀಸಾ ವಿಸ್ತರಣೆ ಮಾಡಲಾಗಿದೆ..

ಕಳೆದ ವರ್ಷ ಆಗಸ್ಟ್‌ನಿಂದ ಭಾರತದಲ್ಲಿ ನೆಲೆಸಿರುವ ಬಾಂಗ್ಲಾದೇಶದ ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಅವರ ವೀಸಾವನ್ನು ಭಾರತ ವಿಸ್ತರಿಸಿದೆ ಎನ್ನಲಾಗಿದೆ.. ಶೇಖ್‌ ಹಸೀನಾ ಹಸ್ತಾಂತರಕ್ಕಾಗಿ ಬಾಂಗ್ಲಾದೇಶದ ಮಧ್ಯಂತರ ಸರ್ಕಾರದಿಂದ ಹೆಚ್ಚುತ್ತಿರುವ ಒತ್ತಾಯದ ಮಧ್ಯೆಯೂ ವೀಸಾ ವಿಸ್ತರಣೆ ಮಾಡಲಾಗಿದೆ.. ಈಗಾಗಲೇ ಬಾಂಗ್ಲಾದೇಶ ಕೋರ್ಟ್ 77 ವರ್ಷದ ಶೇಖ್‌ ಹಸೀನಾ ವಿರುದ್ಧ ಎರಡನೇ ಬಂಧನ ವಾರಂಟ್ ಹೊರಡಿಸಿದೆ.  ಬಾಂಗ್ಲಾದೇಶದಲ್ಲಿ ವಿದ್ಯಾರ್ಥಿಗಳ ಹಿಂಸಾತ್ಮಕ ಪ್ರತಿಭಟನೆಯ ನಡುವೆ ಆಗಸ್ಟ್ 5 ರಂದು ಢಾಕಾದಿಂದ ಪಲಾಯನ ಮಾಡಿದ ನಂತರ ಭಾರತಕ್ಕೆ ಬಂದಿದ್ದಾರೆ.. ನೊಬೆಲ್ ಪ್ರಶಸ್ತಿ ಪುರಸ್ಕೃತ ಮುಹಮ್ಮದ್ ಯೂನಸ್ ನೇತೃತ್ವದ ಬಾಂಗ್ಲಾದೇಶದ ಮಧ್ಯಂತರ ಸರ್ಕಾರವು ಡಿಸೆಂಬರ್ 23ರಂದು ಹಸೀನಾ ಅವರನ್ನ ಹಸ್ತಾಂತರಿಸುವಂತೆ ಮನವಿ ಮಾಡಿತ್ತು.. ಈ ಮಧ್ಯೆ ಭಾರತದ ವಿದೇಶಾಂಗ ಇಲಾಖೆ ಅಧಿಕಾರಿಗಳು ಪ್ರತಿಕ್ರಿಯೆ ನೀಡಿದ್ದು, ಶೇಕ್‌ ಹಸೀನಾ ಅವರಿಗೆ ಭಾರತ ಆಶ್ರಯ ನೀಡಿಲ್ಲ ಎಂದಿದ್ದಾರೆ.. ಈ ಮಧ್ಯೆ ಇದೀಗ ಬಾಂಗ್ಲಾದೇಶದ ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಅವರ ವೀಸಾವನ್ನು ಭಾರತ ವಿಸ್ತರಿಸಿದೆ ಎನ್ನಲಾಗಿದೆ