ಕರ್ನಾಟಕ

ಶಿರೂರು ಗುಡ್ಡ ಕುಸಿತದಲ್ಲಿ ದುರಂತಕ್ಕೊಳಗಾದ ಹೋಟೆಲ್​ ಮಾಲೀಕನ ಪುತ್ರಿಗೆ BHEL ನಲ್ಲಿ ಉದ್ಯೋಗ; ಕೊಟ್ಟ ಮಾತಿನಂತೆ ನಡೆದ ಕುಮಾರಸ್ವಾಮಿ

ಕೈಗಾ ಅಣು ವಿದ್ಯುತ್ ಸ್ಥಾವರದ ಬಿಹೆಚ್​ಇಎಲ್​ನಲ್ಲಿ ಕೆಲಸ ಕೊಡಿಸುವುದಾಗಿ ಹೆಚ್​ಡಿ ಕುಮಾರಸ್ವಾಮಿ ಅವರು ದೂರವಾಣಿ ಕರೆಯ ಮೂಲಕ ಕೃತಿಯವರಿಗೆ ಭರವಸೆಯನ್ನ ನೀಡಿದ್ದರು. ಸದ್ಯ ಕೊಟ್ಟ ಮಾತಿನಂತೆ ಕುಮಾರಸ್ವಾಮಿಯವರು ಕೃತಿಗೆ ಕೆಲಸವನ್ನ ನೀಡಿದ್ದಾರೆ.

ಉತ್ತರ ಕನ್ನಡ : ಅಂಕೋಲ ತಾಲೂಕಿನ ಶಿರೂರು ಗುಡ್ಡ ಕುಸಿತದಿಂದ ದುರಂತಕ್ಕೊಳಗಾಗಿದ್ದ ಹೋಟೆಲ್ ಮಾಲೀಕ ಜಗನಾಥ್ ಅವರ ಪುತ್ರಿ ಎನ್. ಕೃತಿ ಅವರಿಗೆ ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿಯವರು ಉದ್ಯೋಗವನ್ನ ಕಲ್ಪಸಿದ್ದಾರೆ. 

ಮಂಡ್ಯದ ಸರ್ಎಂ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಉದ್ಯೋಗ ಮೇಳದಲ್ಲಿ ಕುಮಾರಸ್ವಾಮಿಯವರು ಕೃತಿಕಾ ಅವರಿಗೆ BHEL ನಲ್ಲಿ ಉದ್ಯೋಗ ಕಲ್ಪಿಸಿ ನೇಮಕಾತಿ ಪತ್ರವನ್ನ ವಿತರಿಸಿದ್ದಾರೆ. 
ಈ ಹಿಂದೆ ಕೈಗಾ ಅಣು ವಿದ್ಯುತ್ ಸ್ಥಾವರದ ಬಿಹೆಚ್ಇಎಲ್ನಲ್ಲಿ ಕೆಲಸ ಕೊಡಿಸುವುದಾಗಿ ಹೆಚ್ಡಿ ಕುಮಾರಸ್ವಾಮಿ ಅವರು ದೂರವಾಣಿ ಕರೆಯ ಮೂಲಕ ಕೃತಿಯವರಿಗೆ ಭರವಸೆಯನ್ನ ನೀಡಿದ್ದರು. ಸದ್ಯ ಕೊಟ್ಟ ಮಾತಿನಂತೆ ಕುಮಾರಸ್ವಾಮಿಯವರು ಕೃತಿಗೆ ಕೆಲಸವನ್ನ ನೀಡಿದ್ದಾರೆ.