ಕರ್ನಾಟಕ

ಅಮೆರಿಕದಿಂದ ಬೆಂಗಳೂರಿಗೆ ಮರಳಿದ ಶಿವಣ್ಣಗೆ ಅಭಿಮಾನಿಗಳಿಂದ ಅದ್ಧೂರಿ ಸ್ವಾಗತ

ಏರ್​ಪೋರ್ಟ್ ರಸ್ತೆ, ಶಿವಣ್ಣ ಅವರ ಮನೆಯ ಬಳಿ ಶಿವರಾಜ್‌ ಕುಮಾರ್‌ ಅವರ ಕಟೌಟ್​ಗಳು ರಾರಾಜಿಸುತ್ತಿವೆ. ಶಿವಣ್ಣ ಗುಣಮುಖರಾಗಿ ಬಂದಿರುವುದಕ್ಕೆ ಶುಭ ಕೋರಿ ಹಲವಾರು ಮಂದಿ ಶುಭ ಸಂದೇಶಗಳನ್ನು ಕಟೌಟ್​ ಮಾಡಿ ಹಾಕಿಸಿದ್ದಾರೆ.

1 ತಿಂಗಳಿಂದ ಅಮೆರಿಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ  ನಟ ಶಿವರಾಜ್‌ಕುಮಾರ್‌ ಬೆಂಗಳೂರಿಗೆ ಮರಳಿದ್ದಾರೆ. ಬೆಂಗಳೂರಿಗೆ ವಾಪಸ್‌ ಆದ ಶಿವಣ್ಣ ದಂಪತಿಗೆ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಭವ್ಯ ಸ್ವಾಗತವನ್ನ ಕೋರಲಾಗಿದೆ. ಅನಾರೋಗ್ಯದಿಂದ ಗುಣಮುಖರಾಗಿ ರಾಜ್ಯಕ್ಕೆ ವಾಪಸ್ಸಾದ ಶಿವಣ್ಣಗೆ ಅಭಿಮಾನಿಗಳು, ಸಿನಿಮಾ ಪ್ರೇಮಿಗಳು ಅದ್ಧೂರಿಯಾಗಿ ಬರಮಾಡಿಕೊಂಡಿದ್ದಾರೆ. 

ಏರ್ಪೋರ್ಟ್ ರಸ್ತೆ, ಶಿವಣ್ಣ ಅವರ ಮನೆಯ ಬಳಿ ಶಿವರಾಜ್‌ ಕುಮಾರ್‌ ಅವರ ಕಟೌಟ್ಗಳು ರಾರಾಜಿಸುತ್ತಿವೆ. ಶಿವಣ್ಣ ಗುಣಮುಖರಾಗಿ ಬಂದಿರುವುದಕ್ಕೆ ಶುಭ ಕೋರಿ ಹಲವಾರು ಮಂದಿ  ಶುಭ ಸಂದೇಶಗಳನ್ನು ಕಟೌಟ್ ಮಾಡಿ ಹಾಕಿಸಿದ್ದಾರೆ. ಶಿವರಾಜ್ ಕುಮಾರ್ ಅವರ ಜೊತೆಗೆ ಇಂದು ಶಿವಣ್ಣ ಮರಳಿದ ಹಿನ್ನೆಲೆ ರಾಜ್ಯದ ಹಲವೆಡೆ ಅಭಿಮಾನಿಗಳು ಅನ್ನ ಸಂತರ್ಪಣೆ ಸಹ ಆಯೋಜನೆ ಮಾಡಿದ್ದಾರೆ.