ತೆಲುಗು ಬಿಗ್ ಬಾಸ್‌ನಲ್ಲಿ ತನ್ನ ರೋಷಾವೇಶದಿಂದಲೇ ಹೆಸರು ಮಾಡಿದ್ದ, ಕನ್ನಡದ ಹುಡುಗಿ ಶೋಭಾ ಶೆಟ್ಟಿ. ಇದೀಗ ಕನ್ನಡ ಬಿಗ್‌ಬಾಸ್‌ನಲ್ಲೂ ಧೂಳೆಬ್ಬಿಸುತ್ತೇನೆ ಎಂದು ಬಂದು, ಸಖತ್ ಸೈಲೆಂಟ್ ಆಗಿ ಹೋಗಿದ್ದಾರೆ. ಮೊದಲ ವಾರದಲ್ಲಿ ತನ್ನ ಹವಾ ಏನು ಕಮ್ಮಿ ಇಲ್ಲ ಎಂದು ಗುಡುಗಿದ್ದ ಶೋಭಾ, ಎರಡನೇ ವಾರದಷ್ಟೊತ್ತಿಗೆ ನನ್ನಿಂದ ಆಗೋದೇ ಇಲ್ಲ ಅನ್ನುವ ಮಟ್ಟಕ್ಕೆ ಬಂದಿದ್ದಾರೆ.ಮನೆಯಿಂದ ಆಚೆ ಬರ್ತೇನೆ ಅಂತಾ ಕಣ್ಣೀರು ಹಾಕಿರೋ ಪ್ರೋಮೊ, ಬಿಗ್‌ಬಾಸ್‌ನ ವೀಕೆಂಡ್ ಎಲಿಮಿನೇಷನ್‌ಗೆ ಟ್ವಸ್ಟ್ ಕೊಟ್ಟಿದೆ..
ಈ ವಾರ ಕನ್ನಡದ ಬಿಗ್‌ಬಾಸ್ ಮನೆಯಿಂದ ಯಾರು ಹೊರಹೋಗ್ತಾರೆ ಅನ್ನೋದು ಭಾರಿ ಕುತೂಹಲ ಕೆರಳಿಸಿದೆ.. ಏಕೆ ಅಂದ್ರೆ ಎಲಿಮಿನೇಷನ್ ಎಪಿಸೋಡಲ್ಲಿ ಶೋಭಾಶೆಟ್ಟಿ ಮನೆಯಿಂದ ಹೋಗ್ತೇನೆ ಅಂತಾ ಹೇಳ್ತಾ ಬಿಕ್ಕಿಬಿಕ್ಕಿ ಅತ್ತಿದ್ದಾರೆ, ಅದಕ್ಕೆ ಕಿಚ್ಚ ಸುದೀಪ್ ಕೂಡ ರಿಯಾಕ್ಟ್ ಮಾಡಿದ್ದು ಮನೆ ಬಾಗಿಲು ತೆಗೆಸಿ, ಡೋರ್ ಕಡೆ ಕೈ ಮಾಡಿರುವ ಎಪಿಸೋಡ್‌ನ ಪ್ರೋಮೋ ಹಲವು ಕುತೂಹಲಕ್ಕೆ ಕಾರಣವಾಗಿದೆ..
ಕಳೆದ ವಾರದ ರಾಜ-ರಾಣಿ ಟಾಸ್ಕ್ ವೀಕ್ಷಕರಿಗೆ ಸಖತ್ ಕಿಕ್ ಕೊಟ್ಟಿತ್ತು.. ಆದ್ರೆ ಈ ಟಾಸ್ಕ್‌ನಲ್ಲಿ ಕಳಪೆ ಬೋರ್ಡ್ ಶೋಭಾಶೆಟ್ಟಿ ಕೊರಳ ಸೇರಿತ್ತು.. ವೈಲ್ಡ್‌ಕಾರ್ಡ್ ಮೂಲಕ ದೊಡ್ಮನೆ ಸೇರಿದ್ದ ಶೋಭಾಶೆಟ್ಟಿ ಮೇಲೆ ನಿರೀಕ್ಷೆ ತುಂಬಾನೇ ಇತ್ತು.. ಆದ್ರೆ ಮೊದಲ ವಾರದ 2-3 ದಿನ ಸಖತ್ ಸೌಂಡ್ ಮಾಡಿದ್ದ ಶೋಭಾ ನಂತ್ರ, ಫುಲ್ ಡಲ್ ಹೊಡಿದಿದ್ರು, ಇಂಥದ್ರಲ್ಲಿ ಎಲಿಮಿನೇಷನ್ ಎಪಿಸೋಡಲ್ಲಿ ಶೋಭಾ ಮನೆಯಿಂದ ಹೊರಹೋಗುವ ಸುಳಿವು ಹೊರಬಿದ್ದಿದೆ..
ಸರ್.. ಎಲ್ಲೋ ಒಂದು ಕಡೆ ನನಗೆ ಇಲ್ಲಿ ಇರೋಕಾಗ್ತಿಲ್ಲ ಅಂತ ಅನಿಸ್ತಾ ಇದೆ.. ಬಿಗ್‌ಬಾಸ್ ಕಂಟಿನ್ಯೂ ಮಾಡೋಕೆ ಆಗ್ತಿಲ್ಲ ಶೋಭಾಶೆಟ್ಟಿ ಕಣ್ಣೀರು ಹಾಕ್ತಾನೇ ಹೇಳಿದ್ದಾರೆ.. ಇದಕ್ಕೆ ಉತ್ತರಿಸಿದ ಕಿಚ್ಚ ಸುದೀಪ್,, ಅರ್ಥ ಮಾಡ್ಕೊಳ್ಳಿ ಯಾಕೆ ಒಳಗೆ ಹೋಗಿದ್ದಿರಿ ಅಂತಾ ಕೇಳಿದ್ದಾರೆ.. ನಿಮ್ಮನ್ನು ಸೇವ್ ಮಾಡಿದವರ ನಂಬಿಕೆ ಮೇಲೆ ಹೀಗೆ ಮಾಡೋಕಾಗಲ್ಲ ಎಂದಿದ್ದಾರೆ.. ಜನರ ಎಕ್ಸ್ಪೆಕ್ಟೇಷನ್ ರೀಚ್ ಆಗೋಕಾಗಲ್ಲ ಅನಿಸ್ತಿದೆ ಅಂತಾ ಶೋಭಾಶೆಟ್ಟಿ ಎಂದಿದ್ದಾರೆ.. ಇದಕ್ಕೆ ಉತ್ತರಿಸಿದ ಕಿಚ್ಚ ಸುದೀಪ್, ಹೊರಗಡೆ ಹೋಗಬೇಕಾ? ಐ ಯಾಮ್ ಓಪನಿಂಗ್ ಡೋರ್ ಫಾರ್ ಯು ಎಂದು ಬಾಗಿಲಿನತ್ತ ಕೈ ತೋರಿಸಿದ್ದಾರೆ..