ದೇವರ ಹುಂಡಿಯಲ್ಲಿ ತಮ್ಮ ಬೇಡಿಕೆಗಳನ್ನು ಬರೆದು ಹಾಕೋದು ಸಾಮಾನ್ಯ. ಆದ್ರೆ ಇಲ್ಲೊಬ್ಬಳು ಮಹಿಳೆ, ಒಂದು ಇಪ್ಪತ್ತು ರೂಪಾಯಿ ನೋಟಿನ ಮೇಲೆ, ನಮ್ಮ ಅತ್ತೆ ಬೇಗ ಸಾಯಬೇಕು ಎಂದು ಬರೆದು ಹುಂಡಿಯಲ್ಲಿ ಹಾಕಿದ್ದಾಳೆ.. ಈ ಹಣದ ನೋಟು ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಘತ್ತರಗಿ ಗ್ರಾಮದಲ್ಲಿರುವ ಭಾಗ್ಯವಂತಿ ದೇವಿ ದೇಗುಲದ ಹುಂಡಿಯಲ್ಲಿ ಸಿಕ್ಕಿದೆ. ಭಾಗ್ಯವಂತಿ ದೇವಿ ದೇಗುಲದ ಹುಂಡಿ ಎಣಿಕೆ ಕಾರ್ಯದ ವೇಳೆ ಈ ನೋಟು ಸಿಕ್ಕಿದೆ. ಇನ್ನು ದೇವಸ್ಥಾನದ ಹುಂಡಿಯಲ್ಲಿ ಅರವತ್ತು ಲಕ್ಷ ನಗದು ಹಾಗೂ ಒಂದು ಕೆ.ಜಿ ಬೆಳ್ಳಿ ಮತ್ತು ಇನ್ನೂರು ಗ್ರಾಂ ಚಿನ್ನ ಸಿಕ್ಕಿದೆ.