ವೈರಲ್

ದುನಿಯಾ ವಿಜಯ್​ ಸಿನಿಮಾಗೆ ಬಿಗ್ ಶಾಕ್! ಇನ್ನೋವಾ ಕಾರು ಜಪ್ತಿ ಮಾಡ್ಕೊಂಡ RTO

ವಾಣಿಜ್ಯ ಉದ್ದೇಶಕ್ಕೆ ಬಳಸುವ ಎಲ್ಲೋ ಬೋರ್ಡ್ ಬದಲು ವೈಟ್ ಬೋರ್ಡ್ ಕಾರು ಬಳಕೆ ಮಾಡಿದ್ದು, ನಟ, ನಟಿಯರು, ಸಿಬ್ಬಂದಿ ಪಿಕ್ ಅಪ್, ಡ್ರಾಪ್ ಗೆ ವೈಟ್ ಬೋರ್ಡ್ ಕಾರುಗಳನ್ನು ಬಳಕೆ ಮಾಡಿದ್ದಾರೆ. ಇದೇ ವೇಳೆ ತುಮಕೂರು ಆರ್ ಟಿಓ ಅಧಿಕಾರಿಗಳಿಂದ ಇನ್ನೋವಾ ಕಾರು ಜಪ್ತಿ ಮಾಡಿದ್ದಾರೆ.

ತುಮಕೂರು : ಚೌಡಯ್ಯ ಚಿತ್ರತಂಡಕ್ಕೆ ತುಮಕೂರು ಆರ್ ಟಿಓ ಶಾಕ್ ಕೊಟ್ಟಿದೆ. ದುನಿಯಾ ವಿಜಯ್, ರಚಿತಾ ರಾಮ್ ಅಭಿನಯದ ಚೌಡಯ್ಯ ಸಿನಿಮಾ ಶೂಟಿಂಗ್ ನಡೆಯುತ್ತಿದೆ. ಆರ್ ಟಿಓ ನಿಯಮ ಉಲ್ಲಂಘಿಸಿದ್ದಕ್ಕೆ ಚಿತ್ರತಂಡಕ್ಕೆ ಬಿಗ್ ಶಾಕ್ ಎದುರಾಗಿದೆ. ವಾಣಿಜ್ಯ ಉದ್ದೇಶಕ್ಕಾಗಿ ಸಾರಿಗೆಯೇತರ ವಾಹನವನ್ನ ಚಿತ್ರತಂಡ ಬಳಕೆ ಮಾಡ್ತಿದ್ದಕ್ಕೆ ಆರ್ಟಿಓ ಶಾಕ್ ಕೊಟ್ಟಿದೆ.

ವಾಣಿಜ್ಯ ಉದ್ದೇಶಕ್ಕೆ ಬಳಸುವ ಎಲ್ಲೋ ಬೋರ್ಡ್ ಬದಲು ವೈಟ್ ಬೋರ್ಡ್ ಕಾರು ಬಳಕೆ ಮಾಡಿದ್ದು,  ನಟ, ನಟಿಯರು, ಸಿಬ್ಬಂದಿ ಪಿಕ್ ಅಪ್, ಡ್ರಾಪ್ ಗೆ ವೈಟ್ ಬೋರ್ಡ್ ಕಾರುಗಳನ್ನು ಬಳಕೆ ಮಾಡಿದ್ದಾರೆ. ಇದೇ ವೇಳೆ ತುಮಕೂರು ಆರ್ ಟಿಓ ಅಧಿಕಾರಿಗಳಿಂದ ಇನ್ನೋವಾ ಕಾರು ಜಪ್ತಿ ಮಾಡಿದ್ದಾರೆ. ತುಮಕೂರಿನ ಕೈದಾಳದ ಶೂಟಿಂಗ್ ಸ್ಪಾಟ್ ಬಳಿಯಿಂದ ಇನ್ನೋವಾ ಕಾರು ಜಪ್ತಿಯಾಗಿದೆ. ಆರ್ ಟಿಓ ಇನ್ ಸ್ಪೆಕ್ಟರ್ ಷರೀಫ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ. ಕರ್ನಾಟಕ ಟೂರಿಸ್ಟ್ ಡ್ರೈವರ್ಸ್ ಅಸೋಸಿಯೆಷನ್ ನೀಡಿದ್ದ ದೂರನ್ನ ಆಧರಿಸಿದೆ. ತುಮಕೂರು ಆರ್ ಟಿಓ ಕಾರ್ಯಾಚರಣೆ ನಡೆಸಿದ್ದಾರೆ. 

ನಾಯಕ ನಟಿ ರಚಿತಾ ರಾಮ್ ಅಸಿಸ್ಟೆಂಟ್ ಇನ್ನೋವಾ ಕಾರು ಬಳಸುತ್ತಿದ್ದರು. ಕೆಎ 04 ಎಂಎಸ್ 7938 ಸಂಖ್ಯೆಯ ಇನ್ನೋವಾ ಕಾರು ಜಪ್ತಿ ಮಾಡಲಾಗಿದೆ. ಈ ಕಾರು ಬೆಂಗಳೂರು ರಾಜರಾಜೇಶ್ವರಿ ನಗರದಿಂದ ಬಂದಿದ್ದು,  ಮಂಜೇಶ್ ಎಂಬುವವರಿಗೆ ಸೇರಿದೆ. ಕಾರಿನಲ್ಲಿ ಚಲನಚಿತ್ರ ವಾಹನ ಚಾಲಕರ ಸಂಘದ ಬಿಲ್ ಪತ್ತೆಯಾಗಿದೆ. ಕಳೆದ ಮೂರ್ನಾಲ್ಕು ದಿನಗಳಿಂದ ಇನ್ನೋವಾ ಕಾರು  ಓಡಾಡ್ತಿದೆ. ಇಂದು ಖಚಿತ ಮಾಹಿತಿಯ ಮೇರೆಗೆ  ಆರ್ ಟಿಓ ಕಾರ್ಯಾಚರಣೆ ನಡೆಸಿ ಕಾರನ್ನ ಜಪ್ತಿ ಮಾಡಿದೆ. ಸದ್ಯ ಇನ್ನೋವಾ ಕಾರು ಜಪ್ತಿ ಮಾಡಿ ಕ್ರಮ ಜರುಗಿಸಲು ಆರ್ ಟಿಓ ಮುಂದಾಗಿದೆ.