ಇಂದೋರ್: ಕರ್ನಾಟಕದ ತಂಡದ ಲೆಗ್ ಸ್ಪಿನ್ನರ್ ಶ್ರೇಯಸ್ ಗೋಪಾಲ್ ಸಯ್ಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಪಾಂಡ್ಯ ಸಹೋದರರನ್ನು ಔಟ್ ಮಾಡುವ ಮೂಲಕ ಹ್ಯಾಟ್ರಿಕ್ ಸಾಧನೆ ವಿಕೆಟ್ ಸಾಧನೆ ಮಾಡಿದಾರೆ.
ಇಂದೋರ್ ನಲ್ಲಿ ಬರೋಡಾ ವಿರುದ್ಧ ನಡೆದ ಪಂದ್ಯದಲ್ಲಿ ಶ್ರೇಯಸ್ ಗೋಪಾಲ್ ಆರಂಭಿಕ ಆಟಗಾರ ಶಾಶ್ವತ್ ರಾವತ್ ರನ್ನು ಔಟ್ ಮಾಡಿದರು. ನಂತರದ ಎರಡು ಎಸೆತಗಳಲ್ಲಿ ಕೃಣಾಲ್ ಪಾಂಡ್ಯ ಮತ್ತು ಹಾರ್ದಿಕ್ ಪಾಂಡ್ಯರನ್ನು ಔಟ್ ಮಾಡುವ ಮೂಲಕ ಹ್ಯಾಟ್ರಿಕ್ ವಿಕೆಟ್ ಪಡೆದ ಸಾಧನೆ ಮಾಡಿದರು. ಈ ಟೂರ್ನಿಯಲ್ಲಿ ಹಾರ್ದಿಕ್ ಪಾಂಡ್ಯ ಉತ್ತಮ ಫಾರ್ಮ್ ನಲ್ಲಿ ಎರಡು ಬಾರಿ ಓವರ್ ಒಂದರಲ್ಲಿ 25 ಕ್ಕೂ ಹೆಚ್ಚು ರನ್ ಗಳಿಸಿದಾರೆ.
2023-24ರ ಸಾಲಿನಲ್ಲಿ ಕೇರಳ ಪರ ಆಡಿದ್ದ ಶ್ರೇಯಸ್ ಗೋಪಾಲ್, ಈ ಸಾಲಿನಲ್ಲಿ ಕರ್ನಾಟಕ ತಂಡಕ್ಕೆ ಮರಳಿದ್ದಾರೆ. ಸಯ್ಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡುತ್ತಿರುವ ಶ್ರೇಯಸ್ ಆಡಿರುವ ಎಲ್ಲಾ 6 ಪಂದ್ಯಗಳಲ್ಲೂ ಉತ್ತಮ ಬೌಲಿಂಗ್ ಮಾಡಿದಾರೆ. ಬರೋಡಾ ವಿರುದ್ಧದ ಪಂದ್ಯದಲ್ಲಿ ಶ್ರೇಯಸ್ 4 ಓವರ್ ಗಳಲ್ಲಿ 19 ರನ್ ನೀಡಿ 4 ವಿಕೆಟ್ ಪಡೆದರು. ಶ್ರೇಯಸ್ ಗೋಪಾಲ್‌ರ ಹ್ಯಾಟ್ರಿಕ್ ವಿಕೆಟ್ ಹೊರತಾಗಿಯೂ ಕರ್ನಾಟಕ ತಂಡ 4 ವಿಕೆಟ್ ಅಂತರದ ಸೋಲನುಭವಿಸಿತು.
ಶ್ರೇಯಸ್ ಗೋಪಾಲ್ ಇಂದಿನ ಪಂದ್ಯದಲ್ಲಿ ಪಡೆದ 4 ವಿಕೆಟ್ ಸೇರಿ ಟೂರ್ನಿಯಲ್ಲಿ ಒಟ್ಟು 14 ವಿಕೆಟ್ ಪಡೆಯುವ ಮೂಲಕ ಹೆಚ್ಚು ವಿಕೆಟ್ ಪಡೆದವರ ಸಾಲಿನಲ್ಲಿ ಅಗ್ರಸ್ಥಾನದಲ್ಲಿದಾರೆ. ಕಳೆದ ವಾರ ನಡೆದಿದ್ದ 2025ರ ಐಪಿಎಲ್ ಟೂರ್ನಿಯ ಮೆಗಾ ಹರಾಜಿನಲ್ಲಿ ಶ್ರೇಯಸ್ ಗೋಪಾಲ್ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್ ಮೂಲ ಬೆಲೆ 30 ಲಕ್ಷ ರೂ. ಗಳಿಗೆ ಖರೀದಿಸಿತ್ತು.