ಕರ್ನಾಟಕ

ಅಬಕಾರಿಯಲ್ಲಿ ಭ್ರಷ್ಟಾಚಾರ ನಡೆದಿದ್ರೆ ನಾನು ಸಿಎಂ ಸ್ಥಾನ ಬಿಡ್ತೀನಿ; ಮೋದಿಗೆ ಸಿಎಂ ಸವಾಲ್..!

ಅಬಕಾರಿಯಲ್ಲಿ ಒಂದೇ ಒಂದು ಪೈಸ ಭ್ರಷ್ಟಾಚಾರ ಮಾಡಿದ್ರೆ ನಾನು ರಾಜಕೀಯ ಬಿಡ್ತೀನಿ ಎಂದು, ಪ್ರಧಾನಿ ಮೋದಿಗೆ ಸಿಎಂ ಸಿದ್ದರಾಮಯ್ಯ ಸವಾಲ್ ಹಾಕಿದ್ದಾರೆ.

ಅಬಕಾರಿಯಲ್ಲಿ ಒಂದೇ ಒಂದು ಪೈಸ ಭ್ರಷ್ಟಾಚಾರ ಮಾಡಿದ್ರೆ ನಾನು ರಾಜಕೀಯ ಬಿಡ್ತೀನಿ ಎಂದು, ಪ್ರಧಾನಿ ಮೋದಿಗೆ ಸಿಎಂ ಸಿದ್ದರಾಮಯ್ಯ ಸವಾಲ್ ಹಾಕಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು, ಆರೋಪ ಸುಳ್ಳಾದ್ರೆ ಮೋದಿ ಪಿಎಂ ಸ್ಥಾನ ಬಿಡ್ತಾರಾ ಎಂದು ಪ್ರಶ್ನಿಸಿದ್ದಾರೆ.

ಅಲ್ಲದೇ ಬಿಜೆಪಿಯವರು ಬರೀ ಭ್ರಷ್ಟಾಚಾರ ಎಂದು ಸುಳ್ಳು ಹೇಳುತ್ತಿದ್ದಾರೆ. ಪ್ರಧಾನಿಗಳು ಅದನ್ನೇ ಮಾಡುತ್ತಿದ್ದಾರೆ. ಬಿಜೆಪಿ ಅವಧಿಯಲ್ಲಿ ಕೋವಿಡ್ ವೇಳೆ ನಡೆದ ಭ್ರಷ್ಟಾಚಾರ ಬಗ್ಗೆ ಪ್ರಧಾನಿ ಏನು ಹೇಳುತ್ತಾರೆ‌.ಪ್ರಧಾನಿ ಮೋದಿಗೆ ಕರ್ನಾಟಕ ಮತ್ತು ಸಿದ್ದರಾಮಯ್ಯ ಇಬ್ಬರು ಟಾರ್ಗೆಟ್. ಕರ್ನಾಟಕ ಅತಿ ದೊಡ್ಡ ರಾಜ್ಯವಾಗಿದೆ. ಇಲ್ಲಿ ನಾವು 136 ಸ್ಥಾನ ಗೆದಿದ್ದೇವೆ‌. ಹೀಗಾಗಿ ನಮ್ಮನ್ನೇ ಟಾರ್ಗೆಟ್ ಮಾಡುತ್ತಿದ್ದಾರೆ. ನಮ್ಮಲ್ಲಿ ಯಾವ ಭ್ರಷ್ಟಾಚಾರವೂ ಇಲ್ಲ. ಭ್ರಷ್ಟಾಚಾರ ನಡೆಯುವುದಕ್ಕೂ ಬಿಡುವುದಿಲ್ಲ ಎಂದು ಹೇಳಿದ್ದಾರೆ.