ಕರ್ನಾಟಕ

ಸಿದ್ದರಾಮಯ್ಯ ಅವರೇ ಸಿಎಂ ಆಗಿ ಮುಂದುವರೆಯುತ್ತಾರೆ : ಸಚಿವ ಸತೀಶ್ ಜಾರಕಿಹೊಳಿ‌

ಸುಪ್ರೀಂ ಕೋರ್ಟ್ ಗೂ ಹೋಗ ಬಹುದು. ಮುಖ್ಯಮಂತ್ರಿ ಯಾವ ರೀತಿ ಡಿಸೈಡ್ ತಗೊಳ್ತಾರೆ ನೋಡಬೇಕು. ತನಿಖೆ ಆದ್ರೂ ಸಿಎಂ ಆಗಿ ಸಿದ್ದರಾಮಯ್ಯ ಮುಂದುವರೆಯುತ್ತಾರೆ. ನೈತಿಕತೆ ಬಂದಾಗ ನೋಡೋಣ. ನಾಳೆಯ ಶಾಸಕಾಂಗ ಸಭೆಯಲ್ಲಿ ಸಿಎಂ ಅವರ ಜೊತೆಗೆ ನಾವೀರ್ತೇವಿ ಅಂತಾ ಹೇಳಲಾಗುತ್ತೆ ಎಂದು ತಿಳಿಸಿದ್ದಾರೆ.

ಬೆಳಗಾವಿ :  ಸಿಎಂ ಸಿದ್ದರಾಮಯ್ಯ ವಿರುದ್ದ ಕೋರ್ಟ್ ತಿರ್ಪು ನೀಡಿದ ಬೆನ್ನಲ್ಲೆ ಬೆಳಗಾವಿಯ ಕಾಂಗ್ರೆಸ್ ಭವನದಲ್ಲಿ ಸಚಿವ ಸತೀಶ್ ಜಾರಕಿಹೊಳಿ‌ ಅವರು ಸುದ್ಧಿಗೋಷ್ಠಿ ನಡೆಸಿದ್ದು, ತೀರ್ಪು ಬಂದಿದೆ ತನಿಖೆ ಮುಂದುವರೆಸಬೇಕು ಅಂತಾ ಹೇಳಿದ್ದಾರೆ. ರಾಜ್ಯಪಾಲರ ಆದೇಶವನ್ನ ಕೋರ್ಟ್ ಮುಂದುವರೆಸಿ ಅಂದಿದೆ. ತನಿಖೆ ಆಗಬೇಕು ಅಂತಾ ಕೋರ್ಟ್ ಹೇಳಿದೆ. ತನಿಖೆ ಆಗಿ ಸಾಭೀತಾಗಬೇಕು ಎರಡನೇ ಸ್ಟೇಪ್. ತನಿಖೆ ಆದ ತಕ್ಷಣ ಮುಖ್ಯಮಂತ್ರಿ ಎಲ್ಲಾ ಜವಾಬ್ದಾರಿ ಆಗಲ್ಲ. ಯಾವ ರೀತಿ ತನಿಖೆ ಆಗುತ್ತೆ ಅನ್ನೋದರ ಮೇಲೆ ಡಿಸೈಡ್ ಆಗುತ್ತೆ. ತನಿಖೆ ಪೂರ್ಣಗೊಂಡು ಇಂತವರು ಭಾಗಿಯಾಗಿದ್ದಾರೆ ಅಂತಾ ಮುಂದಿನ ಚರ್ಚೆ ನಡೆಯುತ್ತದೆ ಎಂದು ಹೇಳಿದ್ದಾರೆ.

ಇದೇ ವೇಳೆ ಮಾತನಾಡಿದ ಅವರು, ಇನ್ನು ಮುಂದೆ ಬಹಳ ದೊಡ್ಡ ಕಾನೂನು ಹೋರಾಟ ಇದೆ. ಸುಪ್ರೀಂ ಕೋರ್ಟ್ ಗೂ ಹೋಗ ಬಹುದು. ಮುಖ್ಯಮಂತ್ರಿ ಯಾವ ರೀತಿ ಡಿಸೈಡ್ ತಗೊಳ್ತಾರೆ ನೋಡಬೇಕು. ತನಿಖೆ ಆದ್ರೂ ಸಿಎಂ ಆಗಿ ಸಿದ್ದರಾಮಯ್ಯ ಮುಂದುವರೆಯುತ್ತಾರೆ. ನೈತಿಕತೆ ಬಂದಾಗ ನೋಡೋಣ. ನಾಳೆಯ ಶಾಸಕಾಂಗ ಸಭೆಯಲ್ಲಿ ಸಿಎಂ ಅವರ ಜೊತೆಗೆ ನಾವೀರ್ತೇವಿ ಅಂತಾ ಹೇಳಲಾಗುತ್ತೆ ಎಂದು ತಿಳಿಸಿದ್ದಾರೆ.

ಈ ಕುರಿತು ಸಚಿವ ಸತೀಶ್ ಜಾರಕಿಹೊಳಿ‌ ಅವರು ಬೆಳಗಾವಿಯಲ್ಲಿ ಮಾತನಾಡಿ, ಬೇರೆಯವರನ್ನ ಮುಖ್ಯಮಂತ್ರಿ ಮಾಡುವ ಪ್ರಶ್ನೆ ಬರಲ್ಲ. ಅವರೇ ಇರ್ತಾರೆ ಸಿದ್ದರಾಮಯ್ಯ ಅವರೇ ಸಿಎಂ ಆಗಿ ಇರ್ತಾರೆ. ಬೇರೆ ರಾಜ್ಯಗಳಲ್ಲಿ ಚುನಾವಣೆ ಆದ್ರೇ ಪರಿಣಾಮ ಬೀರಲ್ಲ. ಸಿಎಲ್‌ ಪಿ ಉದ್ದೇಶ ಸಿದ್ದರಾಮಯ್ಯ ಮುಂದುವರೆಯಬೇಕು ಅಂತಾ ಹೇಳುವುದು. ಬಿಜೆಪಿಯವರು ರಾಜೀನಾಮೆ ಕೊಡಬೇಕು ಅಂತಾ ಮಾಡ್ತಾರೆ. ಶಾಸಕಾಂಗ ಸಭೆ ಕರೆದಿದ್ದು ಅವರ ಮೇಲೆ ವಿಶ್ವಾಸ ಇಟ್ಟು ಮುಂದುವರೆಯಲಿ ಅಂತಾ ಎಂದು ತಿಳಿಸಿದ್ದಾರೆ.

ಈ ಬಗ್ಗೆ ಮಾತನಾಡಿದ ಅವರು, ವಿಚಾರಣೆ ನಡೆಯಲಿ ತಪ್ಪಿತಸ್ಥರು ಆದ ಮೇಲೆ ನೋಡೋಣ. ಬರೀ ತನಿಖೆಗೆ ಆದೇಶ ಆದ್ರೆ ರಾಜೀನಾಮೆ ಸರಿಯಲ್ಲ. ಸರ್ಕಾರ ಸೇಫ್ ಇದೆ ಸರ್ಕಾರಕ್ಕೆ ಎನೂ ಆಗುವುದಿಲ್ಲ. ವಾಲ್ಮೀಕಿ ಹಗರಣಕ್ಕೂ ಇದಕ್ಕೂ ವ್ಯತ್ಯಾಸ ಇದೆ. ಇದು ಬೇರೆ ಅದು ಹಣಕಾಸಿನ ಅವ್ಯವಹಾರ ಆಗಿದೆ. ಇಲ್ಲಿ ಹಣದ ದುರುಪಯೋಗ ಇಲ್ಲ ಅಧಿಕಾರದ ದುರುಪಯೋಗ ಅನ್ನೋದಷ್ಟೇ. ಸರ್ಕಾರ ಬಂದಾಗಿನಿಂದಲೂ ಷಡ್ಯಂತ್ರ ನಡೆಯುತ್ತಲೇ ಇರುತ್ತೆ ಎಂದು ಹೇಳಿದ್ದಾರೆ.