ವೈರಲ್

ಸಿದ್ದರಾಮಯ್ಯ '16 ನೇ ಲೂಯಿ' ಇದ್ದಂಗೆ ಕಾಂಗ್ರೆಸ್ ನ ಉಳಿಸಲ್ಲ- ವಿಶ್ವನಾಥ್

ಕಾಂಗ್ರೆಸ್ ಗೆ ಯೋಗೇಶ್ವರ್ ರೈಟ್ ಪರ್ಸನ್ ಅಲ್ಲ. ಗೆಲ್ಲಿಸೋದು ಜನರು, ರಾಜಕಾರಣದಲ್ಲಿ ಅನಿವಾರ್ಯ ಸೃಷ್ಟಿ ಆಗ್ತಿದೆ. ರಾಜಕಾರಣಿಗಳು ಸೃಷ್ಟಿ ಮಾಡ್ತಿದ್ದಾರೆ. ಪಕ್ಷ ರಾಜಕಾರಣ ಹೋಗಿದೆ ವ್ಯಕ್ತಿ ರಾಜಕಾರಣ ಆಗ್ತಿದೆ. ಸಿದ್ದರಾಮಯ್ಯ ಕಾಂಗ್ರೆಸ್ ನ ಉಳಿಸಲ್ಲ.

ಮೈಸೂರು :  ಸಿ.ಪಿಯೋಗೇಶ್ವರ್ ಕಾಂಗ್ರೆಸ್ ಸೇರ್ಪಡೆಯಿಂದ ಕಾಂಗ್ರೆಸ್ ಸೋತಿದೆ. ಸ್ವಂತ ಮಗಳು ಯೋಗೇಶ್ವರ್ ಮರ್ಯಾದೆ ಹರಾಜು ಹಾಕ್ತೀನಿ ಅಂತ ಕೂತಿದ್ದಾರೆ. ಇಂತಹ ಪರಿಸ್ಥಿತಿ ಕಾಂಗ್ರೆಸ್ ಗೆ ಬರಬಾರದು. ಸಿದ್ದರಾಮಯ್ಯ ಮನಸ್ಥಿತಿ ಹೇಗಿದೆ ಅಂದ್ರೆ. ಕಾಂಗ್ರೆಸ್ ನಾ ಹಾಳು ಮಾಡಿ ಹೋಗಿ ಬಿಡೋಣ ಅಂತ ಇದ್ದಾರೆ. ಸಿಎಂ ವಿರುದ್ಧ  ಎಂ.ಎಲ್.ಸಿ ವಿಶ್ವನಾಥ್ ಕಿಡಿಕಾರಿದ್ದಾರೆ.

ಮುಡಾ ಹಗರಣ 2024,ನನ್ನ ಹೆಂಡತಿಗೊಂದು ನ್ಯಾಯ, ಸಿದ್ದರಾಮಯ್ಯ ಹೆಂಡತಿಗೊಂದು ನ್ಯಾಯವೇ?:  ಮುಡಾ ವಿಚಾರದಲ್ಲಿ ವಿಶ್ವನಾಥ್ ವಾದವೇನು? - mlc h vishwanath clarification about  muda site scam ...

ಕುಮಾರಸ್ವಾಮಿ ಯೋಗೇಶ್ವರ್ ಟಿಕೆಟ್ ಕೊಡದ ವಿಚಾರದ ಬಗ್ಗೆ ಮಾತನಾಡಿದ ಅವರು, ಜೆಡಿಎಸ್ ನಿಂದ ಕುಮಾರಸ್ವಾಮಿ ಅಫರ್ ಮಾಡಿದ್ರು. ಅದನ್ನು ಯೋಗೇಶ್ವರ್ ಕೇಳಿಲ್ಲ, ಯೋಗೇಶ್ವರ್ ಬಿಜೆಪಿ ವ್ಯಕ್ತಿ ಆಗಿದ್ರು
ಅದಕ್ಕೆ ಒಪ್ಪಲಿಲ್ಲ, ಕಾಂಗ್ರೆಸ್ ಗೆ ಯೋಗೇಶ್ವರ್ ರೈಟ್ ಪರ್ಸನ್ ಅಲ್ಲ. ಗೆಲ್ಲಿಸೋದು ಜನರು,  ರಾಜಕಾರಣದಲ್ಲಿ ಅನಿವಾರ್ಯ ಸೃಷ್ಟಿ ಆಗ್ತಿದೆ. ರಾಜಕಾರಣಿಗಳು ಸೃಷ್ಟಿ ಮಾಡ್ತಿದ್ದಾರೆ. ಪಕ್ಷ ರಾಜಕಾರಣ ಹೋಗಿದೆ
ವ್ಯಕ್ತಿ ರಾಜಕಾರಣ ಆಗ್ತಿದೆ. ಸಿದ್ದರಾಮಯ್ಯ ಕಾಂಗ್ರೆಸ್ ನ ಉಳಿಸಲ್ಲ. ಸಿದ್ದರಾಮಯ್ಯ 16 ನೇ ಲೂಯಿ ಆಗಿದ್ದಾರೆ. ತಮ್ಮ ನಂತರ ಯಾರು ಬರಬಾರದು ಎಂಬ ಮನಸ್ಥಿತಿ ಸಿದ್ದರಾಮಯ್ಯದು ಎಂದು   ಮೈಸೂರಿನಲ್ಲಿ ಎಂ.ಎಲ್.ಸಿ ವಿಶ್ವನಾಥ್ ಹೇಳಿದ್ದಾರೆ.