ರಾಜ್ಯದಲ್ಲಿ ಮುಡಾ ಸಂಚಲನ ಜೋರಾಗಿದೆ. ತಮ್ಮ ಪತ್ನಿಗೆ ಇ.ಡಿ ನೋಟಿಸ್ ಕೊಟ್ಟಿರುವ ವಿಚಾರದ ಬಗ್ಗೆ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ. ಇ.ಡಿ ನೋಟಿಸ್ ನೀಡಿರುವುದು ರಾಜಕೀಯ ಪ್ರೇರಿತವೇ ಎಂಬುದಕ್ಕೆ ಉತ್ತರಿಸಿದ ಸಿಎಂ, ಮುಡಾ ಕೇಸೇ ರಾಜಕೀಯ ಪ್ರೇರಿತ ಎಂದು ಹೇಳಿದ್ದಾರೆ. ಅಲ್ಲದೇ ಸಿಬಿಐಗೆ ತನಿಖೆ ಕೊಡೋ ಬಗ್ಗೆ ಆತಂಕವೇ ಎಂಬ ಪ್ರಶ್ನೆಗೆ ಉತ್ತರಿಸಿ, ನ್ಯಾಯಾಧೀಶರು ಏನು ಮಾಡ್ತಾರೆ ಗೊತ್ತಿಲ್ಲ..ಇ.ಡಿಯವರು ನೋಟಿಸ್ ಕೊಟ್ಟಿದ್ದಾರೆ, ಅದಕ್ಕೆ ಹೈಕೋರ್ಟ್ ಸ್ಟೇ ತಂದಿದೆ. ನ್ಯಾಯಾಧೀಶರು ಹೇಳಿದ್ದಾರೆ ಯಾಕೆ ಇಷ್ಟು ಆತುರ ಅಂತ..ತನಿಖೆ ನಡೆಯುತ್ತಿದೆ..ಸಿಬಿಐ ಗೆ ಕೊಡಬೇಕಾ? ಬೇಡ್ವಾ ಚರ್ಚೆ ಆಗ್ತಿದೆ. ಅದರ ಬಗ್ಗೆ ಆದೇಶ ಕಾಯ್ದಿರಿಸಿದೆ..ನನಗೆ ನ್ಯಾಯ ಸಿಗುತ್ತದೆ ಎಂಬ ಭರವಸೆ ಇದೆ ಎಂದಿದ್ದಾರೆ.