ಕರ್ನಾಟಕ

ಸಿದ್ದರಾಮಯ್ಯ ನವ್ರು ಬುಟ್ಟಿಯಲ್ಲಿ ಹಲ್ಲಿಲ್ಲದ ಹಾವು ಇಟ್ಕೊಂಡು ಕಚ್ಚುತ್ತೆ ಅಂತಿದ್ದಾರೆ- V. ಸೋಮಣ್ಣ

ವರದಿ ಅವೈಜ್ಞಾನಿಕವಾಗಿದೆ‌ ಅಂತ ನಾವು ಹೇಳ್ತಿಲ್ಲ, ಕಾಂಗ್ರೆಸ್ ನವರೇ ಹೇಳ್ತಿದ್ದಾರೆ. ಪ್ರತಿಷ್ಟೆಯಾಗಿ ತೆಗೆದುಕೊಳ್ಳುದು ಯಾಕೆ, ವರದಿ ಬಂದು ಎಷ್ಟು ವರ್ಷ ಆಯ್ತು. ಅವತ್ತೇ ಮಾಡಬೇಕಿತ್ತು, ಏನೋ‌ ಗೊಂದಲ ಬಂದಿದೆ ಅದನ್ನ ಡೈವರ್ಟ್ ಮಾಡೊಕ್ಕೆ ಹೀಗೆ ಮಾಡ್ತಾರೆ. ಬುಟ್ಟಿಯಲ್ಲಿ ಹಲ್ಲಿಲ್ಲದ ಹಾವು ಇಟ್ಕೊಂಡು ಕಚ್ಚುತ್ತೆ ಕಚ್ಚುತ್ತೆ ಅಂತಿದ್ದಾರೆ. ದೇಶದಲ್ಲಿ ಜನಗಣತಿ ನಡೆಯುತ್ತಿದೆ.

ತುಮಕೂರು : ಜಾತಿಗಣತಿ ವರದಿ ಜಾರಿ ವಿಚಾರಕ್ಕೆ ಸಂಬಂಧಿಸಿದಂತೆ ತುಮಕೂರಿನಲ್ಲಿ ಕೇಂದ್ರ ಸಚಿವ ವಿ.ಸೋಮಣ್ಣ ಪ್ರತಿಕ್ರಿಯೆ ನೀಡಿದ್ದು, ಈ ವಿಚಾರದಲ್ಲಿ ಅವರಲ್ಲೇ ಗೊಂದಲವಿದೆ. ಏನೇನೋ ಮಾಡೊದಕ್ಕೆ ಹೋಗ್ತಾ ಇದ್ದಾರೆ. ಸಿದ್ದರಾಮಯ್ಯ ಕಾಲಿಗೆ ಗಾಯ ಮಾಡಿಕೊಂಡಿದ್ದಾರೆ. ಆ ಗಾಯ ಕೆರ್ಕೊಂಡು.. ಕೆರ್ಕೊಂಡು ಮೈಯೆಲ್ಲ ಗಾಯ ಆಗಿದೆ. ಸಿದ್ದರಾಮಯ್ಯಗೆ ನಮ್ಮಗಿಂತ ಜಾಸ್ತಿ ಶತ್ರುಗಳು ಅವರ ಪಾರ್ಟಿಯವ್ರೆ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ದ ಕಿಡಿಕಾರಿದ್ದಾರೆ.

Karnataka's representative in Union Cabinet: V Somanna profile

ಇದೇ ವೇಳೆ ಮಾತನಾಡಿದ ಅವರು, ವರದಿ ಅವೈಜ್ಞಾನಿಕವಾಗಿದೆ‌ ಅಂತ ನಾವು ಹೇಳ್ತಿಲ್ಲ, ಕಾಂಗ್ರೆಸ್ ನವರೇ ಹೇಳ್ತಿದ್ದಾರೆ. ಪ್ರತಿಷ್ಟೆಯಾಗಿ ತೆಗೆದುಕೊಳ್ಳುದು ಯಾಕೆ, ವರದಿ ಬಂದು ಎಷ್ಟು ವರ್ಷ ಆಯ್ತು. ಅವತ್ತೇ ಮಾಡಬೇಕಿತ್ತು, ಏನೋ‌ ಗೊಂದಲ ಬಂದಿದೆ ಅದನ್ನ ಡೈವರ್ಟ್ ಮಾಡೊಕ್ಕೆ ಹೀಗೆ ಮಾಡ್ತಾರೆ. ಬುಟ್ಟಿಯಲ್ಲಿ ಹಲ್ಲಿಲ್ಲದ ಹಾವು ಇಟ್ಕೊಂಡು ಕಚ್ಚುತ್ತೆ ಕಚ್ಚುತ್ತೆ ಅಂತಿದ್ದಾರೆ. ದೇಶದಲ್ಲಿ ಜನಗಣತಿ ನಡೆಯುತ್ತಿದೆ.
ಆಗ ಮಾಡಿಸಿ ಯಾರು ಬೇಡ ಅಂತಾರೆ, ಕ್ಲೀನ್ ಆಗಿ ಆಗಲಿ, ವೈಜ್ಞಾನಿಕವಾಗಿಲ್ಲ ಅಂತಾ ತುಂಬಾ ಜನ ಬುದ್ದಿಜೀವಿಗಳು ಹೇಳ್ತಿದ್ದಾರೆ. ಅದನ್ನ ಪುನರ್ ಪರಿಶೀಲನೆ ಮಾಡಿದ್ರೆ ದೇಶ ಏನು ಮುಳುಗಿ ಹೋಗಲ್ಲ, ಶಾಸಕ ಶ್ರೀನಿವಾಸ್ ಹೇಳಿಕೆ ಕೇಳಿ ಖುಷಿ ಆಯ್ತು, ಬೇಕಿತ್ತೇನ್ರಿ ಇದೆಲ್ಲಾ, ಒಂದು ಕಣ್ಣಿಗೆ ಬೆಣ್ಣೆ ಮತ್ತೊಂದು ಕಣ್ಣಿಗೆ ಸುಣ್ಣ ಮಾಡಬಾರ್ದು. ಸರ್ಕಾರ ಅಂದ್ಮೇಲೆ ಎಲ್ಲಾರನ್ನ ಸಮಾನವಾಗಿ ನೋಡಿಕೊಳ್ಳಬೇಕು ಎಂದು ಸಿಎಂಗೆ ಟಾಂಗ್ ಕೊಟ್ಟಿದ್ದಾರೆ.  

ರತನ್ ಟಾಟಾ ವಿಧಿವಶ ವಿಚಾರದ ಬಗ್ಗೆ ಮಾತನಾಡಿದ ಅವರು, ಈ ದೇಶ ಕಂಡ ಒಬ್ಬ ಅಪ್ರತಿಮಿ ಉದ್ಯಮಿ. ದೇಶವನ್ನ ಅಭಿವೃದ್ಧಿಯತ್ತ ಕೊಂಡೊಯ್ಯುವಲ್ಲಿ ಮೊದಲಿಗರಾಗಿದ್ದಾರೆ. ಕೈಗಾರಿಕೋದ್ಯಮಿಯಾಗಿ ಬೇರೆ ಬೇರೆ ದೇಶಗಳ ಜೊತೆಗೆ ಸೆಣಸಾಟ ಮಾಡಿ, ಭಾರತೀಯರು ಯಾವುದರಲ್ಲೂ ಕಡಿಮೆಯಿಲ್ಲ ಅಂತ ತೋರಿಸಿದವರಲ್ಲಿ ರತನ್ ಟಾಟಾ ಒಬ್ಬರು. ಇತ್ತಿಚೀನ ದಿನಗಳಲ್ಲಿ ಅವರ ಇಡೀ ಅಸೆಟ್ ನ್ನ ದಾನ ಮಾಡುವ ನಿರ್ಧಾರ ತೆಗೆದುಕೊಂಡಿದ್ದರು. ಈ ತೀರ್ಮಾನ ಸೂರ್ಯಚಂದ್ರ ಇರೋ ತನಕ ಉಳಿಯುತ್ತೆ. ಇಂತಹ ಪುಣ್ಯಾತ್ಮಕರು ಬದುಕಿ ಬೆಳೆದ್ರಿಂದಲ್ಲೇ ಮೋದಿಯವರಿಗೆ ಶಕ್ತಿ ಬಂದಿದ್ದು,  ಅವರ ಆತ್ಮಕ್ಕೆ ಶಾಂತಿ ಕೋರೋಣ.ಇನ್ನೊಬ್ಬ ರತನ್ ಟಾಟಾ ಭಾರತದಲ್ಲಿ ಹುಟ್ಟಿ ಬರಲಿ ಅಂತ ಭಗವಂತನಲ್ಲಿ ಪ್ರಾರ್ಥನೆ ಮಾಡ್ತೀವಿ‌ ಎಂದು ಹೇಳಿದರು. 

ಪ್ರಧಾನಿ ಮೋದಿಯೊಂದಿಗೆ ಭೇಟಿವಿಚಾರವನ್ನು ಪ್ರಸ್ತಾಪಿಸಿದ ಅವರು, ರಾಷ್ಟ್ರದ ಪ್ರಧಾನಿಗಳ ಜೊತೆಗೆ ಸುಮಾರು ಟೈಮ್ ನ್ನ ಕಳೆದಿದ್ದೇನೆ. ನನ್ನ ಕಲ್ಪನೆಯ ದಕ್ಷಿಣ ಭಾರತವನ್ನ ನಿರ್ಮಾಣ ಮಾಡಬೇಕು ಅನ್ನೋದು ಅವರ ಬಯಕೆ‌. ನನಗೆ ಕೆಲವು ನಿರ್ದೇಶನ ನೀಡಿದ್ದಾರೆ. ದಕ್ಷಿಣ ಭಾರತದಲ್ಲಿ ಕನಿಷ್ಟ 50 ಲೋಕಸಭಾ ಕ್ಷೇತ್ರದಲ್ಲಿ ದೊಡ್ಡ ತಂಡದೊಂದಿಗೆ ಕೆಲಸ ಮಾಡಿ, ಬಡವರು, ಧ್ವನಿ ಇಲ್ಲದವರನ್ನ ಗುರುತಿಸಿ, ಯಾವ ಜಾತಿ ಕುಲ ಅನ್ನದೆ ಸವಲತ್ತು ನೀಡಿ ಎಂದು ತಿಳಿಸಿದರು.

ರಾಯಚೂರು, ಮಧುಗಿರಿ ಎರಡು ಜಿಲ್ಲೆಗಳನ್ನ ಕೊಟ್ಟಿದ್ದಾರೆ. ಅವೆಲ್ಲಾವೂ ಮಾಹಿತಿ ಇದೆ ಅವರಿಗೆ, ನಾನು ಹೇಳೊಕ್ಕೆ ಹೋದ್ರೆ, ಮಜೇ ಸಬ್ ಮಾಲೂಮ್ ಹೇ, ಮೇರಾ ಪಾಸ್ ಬಿ ಹೇ, ಆಪ್ ಕಾ ಚಿಂತಾ ಕ್ಯಾ ಬಾತ್ ಕೀ ಜೀಯೇ ಅಂತಾರೆ. ಭಾರತ ದೇಶಕ್ಕೆ ಭವಿಷ್ಯವಿದೆ. ದೇಶದ ಎಲ್ಲಾ ಕಡೆ ಓಡಾಡಿಕೊಂಡು ಬಂದೆ. ನಾಲ್ಕುವರೆ ಗಂಟೆ ಕಾಲ ಮೋದಿ ಜೊತೆಗಿದ್ದೆ, ಮೋದಿಯವರ ಹತ್ತು ವರ್ಷಗಳ ಆಡಳಿತ ಸಾಮಾನ್ಯರಿಗೆ ಖುಷಿ‌ಕೊಟ್ಟಿದೆ.

ಹರಿಯಾಣ,ಜಮ್ಮು ಕಾಶ್ಮೀರಾ ಚುನಾವಣೆ ಮುಖೇನ ಭಾರತದ ಸಾರ್ವಭೌಮತೆಗೆ ಮೋದಿಯವರ ಅಪಾರ ಕೊಡುಗೆ ಇದೆ ಅನ್ನೋದನ್ನ ಪಕ್ಷಾತೀತವಾಗಿ ಒಪ್ಪಿಕೊಂಡಿದ್ದಾರೆ. ಇನ್ಮುಂದೆ ನಡೆಯುವ ಮಹಾರಾಷ್ಟ್ರ, ಜಾರ್ಖಂಡ್, ಬಿಹಾರ ಚುನಾವಣೆ ಇದೇ ರೀತಿ ನಡೆಯುತ್ತೆ ಅನ್ನೋದು ಸಾಮಾನ್ಯ ಜನರ ನಂಬಿಕೆ, ಅದು ನನ್ನ ನಂಬಿಕೆ‌ ಕೂಡ ಎಂದಿದ್ದಾರೆ.

 

ಒಂದು ದೇಶ ಒಂದು ಚುನಾವಣೆ ಜಾರಿ ಸಂಬಂಧಿಸಿದಂತೆ ಮಾತನಾಡಿದ ವಿ.ಸೋಮಣ್ಣ ಅವರು, ಚರ್ಚೆಯಾಗುತ್ತಿದೆ, ಲೋಕಸಭೆಯಲ್ಲಿ ಮಂಡನೆಯಾಗಲಿದೆ. ಈ ಬಗ್ಗೆ ನನಗೆ ಸಂಪೂರ್ಣ ಮಾಹಿತಿಯಿಲ್ಲ, ಇದು ಜಾರಿಯಾದ್ರೆ ಅನಾನೂಕುಲ ಅನ್ನೋದಕ್ಕಿಂತ ಅನುಕೂಲವೇ ಜಾಸ್ತಿ. ಒಂದೇ ಸಲ ಎಲೆಕ್ಷನ್ ನಡೆದರೆ ಎಷ್ಟು ಮಟ್ಟಿಗೆ ಅವ್ಯವಸ್ಥೆ ಕಡಿಮೆಯಾಗುತ್ತೆ. ಖರ್ಚು ಒಂದು ಕಡೆ, ಟೈಂ, ಮೂರು ತಿಂಗಳಿಗೆ, 6 ತಿಂಗಳಿಗೆ 2 ವರ್ಷಕ್ಕೆ ಚುನಾವಣೆ ಆಗ್ತಿದ್ರೆ, ಯಾವ ಮಟ್ಟಕ್ಕೆ ಹೊಗುತ್ತೆ ಅದು, ದೇಶದ ಸಂಪತ್ತು ಯಾವ ರೀತಿ ಪೋಲ್ ಆಗುತ್ತೆ. ಈ ತೀರ್ಮಾನ ತೆಗೆದುಕೊಂಡಿದ್ದು ಮೊದಲು ಕಾಂಗ್ರೆಸ್.

33% ಪರ್ಸೆಂಟ್ ಮೀಸಲಾತಿ ನಿರ್ಧಾರ ತೆಗೆದುಕೊಂಡಿದ್ದು, ಕಾಂಗ್ರೆಸ್ ಸರ್ಕಾರ, ಇಂದು ಅನ್ ಟಚಬಲ್ ಅನ್ನುತ್ತಾರೆ. ಅದು ಆಗಬಾರದು, ನರೇಂದ್ರ ಮೋದಿ ಯಾರನ್ನೂ ದ್ವೇಷ ಮಾಡಿದವರಲ್ಲ, ಇನ್ನೊಬ್ಬರ ಬಗ್ಗೆ ಗದ್ದಲ‌ ಮಾಡಿದವರಲ್ಲ. ಅವರ ಕೊಟ್ಟಿರುವ ಸಜೆಷನ್ ಒಳ್ಳೆದು ಇದ್ರೆ ಅದನ್ನ ಮಾಡಬಾರದು ಅನ್ನಲ್ಲ ಎಂದು ಹೇಳಿದ್ದಾರೆ.

96 ರಿಂದಲ್ಲೂ ರೈಲ್ವೆ ಇಲಾಖೆಯಲ್ಲಿ ಕೆಲವು ಯೋಜನೆಗಳು ಹಾಗೇ ಇದ್ದವು, ಅದು ನಮ್ಮ ಕಾಲದ್ದ, ನಾವು ಹೇಳ್ಬಹುದಿತ್ತು, ನಾವು ಮಾಡಲ್ಲ,  ಹೊಸ ಲೈನ್ ಮಾಡ್ಕೊಂಡು ಹೋಗ್ತಿವಿ ಅಂತ  ನಮಗೆ ಅದೇ ಬೇಕು ಅಂದಿದ್ರೆ ಯಾರು ಏನು ಮಾಡ್ತಿರಲಿಲ್ಲ. ಅದು ಮಾಡಿಲ್ಲ, ಹಳೇ ಪ್ರಾಜೆಕ್ಟ್ ಗಳು ಅವಶ್ಯಕತೆಯಿದೆ ಅದನ್ನ ಮುಗಿಸಿ ಅಂತ 43 ಸಾವಿರ ಕೋಟಿ ಹಣ ಬಿಡುಗಡೆ ಮಾಡಿದ್ದಾರೆ ಎಂದು ಹೇಳಿದ್ಧಾರೆ.