ಕರ್ನಾಟಕ

ಸಿಎಂ ಸುಳ್ಳು ಹೇಳಿಲ್ಲ.. ಕಂಡವರ ಆಸ್ತಿ ಹೊಡೆದಿಲ್ಲ; ಸಿದ್ದರಾಮಯ್ಯ ರಾಜೀನಾಮೆ ಕೊಡಲ್ಲ: ಜಿ. ಪರಮೇಶ್ವರ್

ತುಮಕೂರಿನಲ್ಲಿ ನಡೆದ ಕಾಂಗ್ರೆಸ್ ಸಭೆಯಲ್ಲಿ ಮಾತನಾಡಿದ ಗೃಹ ಸಚಿವ ಜಿ. ಪರಮೇಶ್ವರ್, ಮುಡಾ ಪ್ರಕರಣ ಸಿವಿಲ್ ಮ್ಯಾಟ್ರು ರೀ, 14 ಸೈಟಿ ಹಾಗೂ 3 ಎಕರೆ ಜಮೀನಿನ ವಿಷ್ಯ ಇದು. ಹಣ ಏನಾದ್ರೂ ಎಕ್ಸ್ ಚೇಂಜ್ ಆಗಿದೆಯಾ ಎಂದು ಪ್ರಶ್ನೆ ಮಾಡಿದ್ದಾರೆ.

ತುಮಕೂರು : ಸಿಎಂ ರಾಜೀನಾಮೆ ಯಾತಕ್ಕೆ ಕೊಡಬೇಕು. ರಾಜೀನಾಮೆ ನೀಡೋಕೆ ಕಳ್ಳತನ ಮಾಡಿರಬೇಕು, ಸುಳ್ಳು ಹೇಳಿರಬೇಕು..ಆಸ್ತಿ ಹೊಡೆದಿರಬೇಕು. ಈ ರೀತಿಯ ಅಪರಾಧಗಳನ್ನ ಏನಾದದರು ಮಾಡಿರಬೇಕು. ಆದ್ರೆ ಸಿಎಂ ಸಿದ್ದರಾಮಯ್ಯನವರು ಯಾವುದನ್ನೂ ಮಾಡಿಲ್ಲ ಎಂದು ಸಿಎಂ ಪರ ಸಚಿವ ಪರಮೇಶ್ವರ್ ಬ್ಯಾಟ್ ಬೀಸಿದ್ದಾರೆ. 

ತುಮಕೂರಿನಲ್ಲಿ  ನಡೆದ ಕಾಂಗ್ರೆಸ್ ಸಭೆಯಲ್ಲಿ ಮಾತನಾಡಿದ ಗೃಹ ಸಚಿವ ಜಿ. ಪರಮೇಶ್ವರ್,  ಮುಡಾ ಪ್ರಕರಣ ಸಿವಿಲ್ ಮ್ಯಾಟ್ರು ರೀ, 14 ಸೈಟಿ ಹಾಗೂ 3 ಎಕರೆ ಜಮೀನಿನ ವಿಷ್ಯ ಇದು. ಹಣ ಏನಾದ್ರೂ ಎಕ್ಸ್ ಚೇಂಜ್ ಆಗಿದೆಯಾ ಎಂದು ಪ್ರಶ್ನೆ ಮಾಡಿದ್ದಾರೆ. 

62 ಕೋಟಿ ಬೆಲೆ ಬಾಳುವ ಪ್ರಾಪರ್ಟಿ ಅಂತ ಯಾರೋ ಸ್ಟೇಟ್ಮೆಂಟ್ ಕೊಟ್ರು. ಹಾಗಂತ ಹೇಳಿದಾಕ್ಷಣವೇ 62 ಕೋಟಿ ಕೊಟ್ಟು ಬಿಟ್ಟಿದ್ದಾರಾ. ಇದು ಸಿವಿಲ್ ಮ್ಯಾಟರ್. ಇದನ್ನ  ಇಡೀ ದೇಶ ನೋಡುವ ಹಾಗೆ ಇಡೀ ಪ್ರಪಂಚ ನೋಡುವಹಾಗೇ ಲೈವ್ ಟೆಲಿಕಾಸ್ಟ್ ಮಾಡಿದ್ರು. ಅಬ್ಬಬ್ಬಾ  ಅಮೇರಿಕಾದಲ್ಲಿ ಒಬಾಮ ಇದ್ದಾಗಲೂ ಅಂತಹದ್ದು ಆಗಲಿಲ್ಲವೇನೋ. ಲೈವ್ ಟೆಲಿಕಾಸ್ಟ್ ಕೋರ್ಟಿನಿಂದ‌ ಮಾಡಿಸಿ, ತಪ್ಪು ಕಲ್ಪನೆಯನ್ನ ಜನ ಸಮುದಾಯಲ್ಲಿ ಬರುವಂತೆ ಮಾಡಿದ್ದಾರೆ.  ಇದಕ್ಕೆ ಉತ್ತರ ಕೊಡಬೇಕು ಅಲ್ವಾ? ಅದಕ್ಕಾಗಿ ನಾವು ಬೀದಿಗೆ ಇಳಿಯುವ ಕೆಲಸ ಆಗಬೇಕಿದೆ ಎಂದಿದ್ದಾರೆ.