ಕರ್ನಾಟಕ
HDKನ ಕರಿಯ ಎಂದಿದ್ದಕ್ಕೆ ಸಿಎಂ ಏನಂದ್ರು ಗೊತ್ತಾ..?
ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿಗೆ ಜಮೀರ್ ಕರಿಯ ಎಂದಿದ್ದನ್ನು ಸಿಎಂ ಸಿದ್ದರಾಮಯ್ಯ ಸಮರ್ಥನೆ ಮಾಡಿಕೊಂಡಿದ್ದಾರೆ.
ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿಗೆ ಜಮೀರ್ ಕರಿಯ ಎಂದಿದ್ದನ್ನು ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು, ನನಗೆ ದೇವೇಗೌಡರು ಸೊಕ್ಕು ಮುರಿಯಿತ್ತೀನಿ, ಗರ್ವಭಂಗ ಮಾಡುತ್ತೇನೆ ಎಂದು ಹೇಳಿದ್ದು ಸರಿನಾ? ಎಂದು ಪ್ರಶ್ನಿಸುವ ಮೂಲಕ, ಜಮೀರ್ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ..ಅಲ್ಲದೇ ಕರಿಯಾ ಎಂದಿದ್ದು ಎಲೆಕ್ಷನ್ ಮೇಲೆ ಪರಿಣಾಮ ಬೀರಲ್ಲ ಎಂದಿದ್ದಾರೆ..