ಮೈಸೂರು - ಮೂಡಾ ಹಗರಣ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಸತತ 2 ಗಂಟೆಗಳ ಕಾಲ ನಿರಂತರವಾಗಿ ವಿಚಾರಣೆಯನ್ನ ಎದುರಿಸಿದ್ದಾರೆ. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ನಿವೇಶನಗಳ ಹಂಚಿಕೆಯಲ್ಲಿ ಸಿಎಂ ಪ್ರಭಾವ ಬೀರಿದ್ದಾರೆ ಎಂದು ಆರೋಪಿಸಿ ಇಂದು ಲೋಕಾಯುಕ್ತ ಕಚೇರಿಯಲ್ಲಿ ತನಿಖೆ ನಡೆಸಲಾಯಿತು.
ಬೆಳಿಗ್ಗೆ 10.10ಕ್ಕೆ ಸಿಎಂ ಸಿದ್ದರಾಮಯ್ಯ ಲೋಕಾಯುಕ್ತ ಕಚೇರಿಯಲ್ಲಿ ತನಿಖೆಗೆ ಒಳಪಟ್ಟು , ನಂತರ ಸತತ ಸಾಲು ಸಾಲು ಪ್ರಶ್ನೆಗಳ ಸುರಿಮಳೆಯನ್ನ ಎದುರಿಸಿದ್ದಾರೆ.
ಸಿಎಂ ಸಿದ್ದರಾಮಯ್ಯಗೆ ಲೋಕಾಯುಕ್ತ ಎಸ್ಪಿಯ ಪ್ರಶ್ನೆಗಳು ಹೀಗಿವೆ.
1. ನಿಮಗೆ ಮೈಸೂರು ಅಭಿವೃದ್ಧಿ ಪ್ರಾಧಿಕಾರದ ನಿವೇಶನ ಹಂಚಿಕೆ ಬಗ್ಗೆ ಮಾಹಿತಿ ಇತ್ತಾ?
2. ನಿಮ್ಮ ಪತ್ನಿ ಪಾರ್ವತಿ ಹೆಸರಲ್ಲಿ ಎಷ್ಟು ಸೈಟ್ಗಳು ಇವೆ?
3. ಈ ಸೈಟ್ಗಳು ಹೇಗೆ ಬಂದಿದೆ ಎಂದು ನಿಮಗೆ ಮಾಹಿತಿ ಇದೆಯಾ?
4.ಬದಲಿ ನಿವೇಶನಗಳನ್ನ ಪಡೆಯಲು ಸಿದ್ದರಾಮಯ್ಯ ಆದ ನೀವು ಶಿಫಾರಸ್ಸು ಮಾಡಿದ್ದೀರಾ?
5.ಮುಡಾಗೆ ಯಾವುದೇ ಶಿಫಾರಸ್ಸು ಪತ್ರ , ಸಹಿ ಹಾಕಿದ ಅರ್ಜಿ ನಿಮ್ಮ ಕಡೆಯಿಂದ ಸಲ್ಲಿಕೆ ಆಗಿದ್ದೇಯಾ?
6.ನಿವೇಶನ ಹಂಚಿಕೆಯಲ್ಲಿ ನಿಮ್ಮ ಪುತ್ರನ ಪಾತ್ರ ಏನಿದೆ?
7.ಅಧಿಕಾರಿಗಳು ,ಜನಪ್ರತಿನಿಧಿಗಳಿಗೆ ದೂರವಾಣಿ ಕರೆ ಮಾಡಿದ್ದೀರಾ?
8.ಮುಡಾ ಸೈಟ್ಗಳು ನಿಮ್ಮ ಪತ್ನಿ ಹೆಸರಿಗೆ ಆಗುವಾಗ ನೀವು ಯಾವ ಅಧಿಕಾರದಲ್ಲಿದ್ರಿ?
9.ಸೈಟ್ಗಳು ನೀಡಬೇಕೆಂದು ಯಾವುದೇ ಪರಬಾರೆ ನಿಮ್ಮ ಕಡೆಯಿಂದ ಆಗಿದ್ದೇಯಾ?
10.ನಿಮ್ಮ ಪತ್ನಿಗೆ ಈ ಸೈಟ್ಗಳು ಹೇಗೆ ಬಂದಿದೆ?
ಹೀಗೆ ಮುಡಾ ಸೈಟ್ ಸಂಬಂಧ ಹತ್ತಾರು ಪ್ರಶ್ನೆಗಳನ್ನ ಕೇಳಿದು ಸಿಎಂ ಸಿದ್ದರಾಮಯ್ಯ ತಾವು ಕೋರ್ಟ್ನಲ್ಲಿ ನೀಡಿದ್ದ ಹೇಳಿಕೆಯನ್ನೇ ಮತ್ತೊಮ್ಮೆ ಪುನರ್ ಉಚ್ಚರಿಸಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈ ಎಲ್ಲ ಪ್ರಶ್ನೆಗಳಿಗೆ ಸಿಎಂ ಸಿದ್ದರಾಮಯ್ಯ ಉತ್ತರ ನೀಡಿ ಮಧ್ಯಾಹ್ನ 11.59ಕ್ಕೆ ಲೋಕಾಯುಕ್ತ ಕಚೇರಿಯಿಂದ ಹೊರ ನಡೆದರು. ಈ ಪ್ರಕಾರ ಸಿಎಂ ಸಿದ್ದರಾಮಯ್ಯ ಬರೋಬ್ಬರಿ 1 ಗಂಟೆ 59 ನಿಮಿಷಗಳ ಕಾಲ ವಿಚಾರಣೆಯನ್ನ ಎದುರಿಸಿದರು.