ಕರ್ನಾಟಕ

ಇಂದು ಕೃಷ್ಣ ಜನ್ಮಾಷ್ಟಮಿ.. ಏನಿದರ ಮಹತ್ವ.!

ಭಗವಾನ್ ಶ್ರೀಕೃಷ್ಣ ಪರಮಾತ್ಮನು ಅಷ್ಟಮಿ ತಿಥಿ ಮತ್ತು ರೋಹಿಣಿ ನಕ್ಷತ್ರ ಬರುವ ಸಮಯದಲ್ಲಿ ಮಥುರಾದಲ್ಲಿ ಜನಿಸಿದನು. ಈ ದಿನ ಕೃಷ್ಣನ ಬಾಲ ರೂಪವನ್ನ ಪೂಜಿಸುವುದರಿಂದ ಮಗುವನ್ನು ಏಕವಚನದಲ್ಲಿ ಪ್ರೀತಿಯಿಂದ ಕರೆಯುವಂತೆ, ಕೃಷ್ಣನನ್ನು ಸಂಭೋದಿಸುತ್ತಾರೆ.

ಎಲ್ಲರಿಗೂ ಕೃಷ್ಣ ಜನ್ಮಾಷ್ಟಮಿಯ ಶುಭಾಶಯಗಳು. ಭಾದ್ರಪದ ಮಾಸದ ಕೃಷ್ಣ ಪಕ್ಷದ ಅಷ್ಟಮಿ ತಿಥಿ ದಿನ ದೇಶಾದ್ಯಂತ ಕೃಷ್ಣ ಜನ್ಮಾಷ್ಟಮಿ ಹಬ್ಬವನ್ನ ಆಚರಿಸಲಾಗುತ್ತದೆ. ಭಗವಾನ್ ಶ್ರೀಕೃಷ್ಣ ಪರಮಾತ್ಮನು ಅಷ್ಟಮಿ ತಿಥಿ ಮತ್ತು ರೋಹಿಣಿ ನಕ್ಷತ್ರ ಬರುವ ಸಮಯದಲ್ಲಿ ಮಥುರಾದಲ್ಲಿ ಜನಿಸಿದನು. ಈ ದಿನ ಕೃಷ್ಣನ ಬಾಲ ರೂಪವನ್ನ ಪೂಜಿಸುವುದರಿಂದ ಮಗುವನ್ನು ಏಕವಚನದಲ್ಲಿ ಪ್ರೀತಿಯಿಂದ ಕರೆಯುವಂತೆ, ಕೃಷ್ಣನನ್ನು ಸಂಭೋದಿಸುತ್ತಾರೆ.  ಶಾಸ್ತ್ರಗಳ ಪ್ರಕಾರ  ದ್ವಾಪರ ಯುಗದಲ್ಲಿ ಈ ದಿನದಂದು ಭಗವಾನ್ ವಿಷ್ಣು ಶ್ರೀಕೃಷ್ಣನಾಗಿ ಅವತರಿಸಿದನು. ಕೃಷ್ಣ ಜನ್ಮಾಷ್ಟಮಿಗೆ ಕೃಷ್ಣಾಷ್ಟಮಿ, ಜನ್ಮಾಷ್ಟಮಿ, ಸತತ ಆಟಂ, ಅಷ್ಟಮಿ ರೋಹಿಣಿ, ಗೋಕುಲಾಷ್ಟಮಿ, ಶ್ರೀ ಜಯಂತಿ, ನಂದೋತ್ಸವ ಇತ್ಯಾದಿ ಹೆಸರುಗಳಿವೆ.

ಕೃಷ್ಣ ಜನ್ಮಾಷ್ಟಮಿಯ ಪೌರಾಣಿಕ ಹಿನ್ನಲೆ

ಪುರಾಣಗಳ ಪ್ರಕಾರ, ಕೃಷ್ಣ ಮಥುರಾದ ಯಾದವ ಕುಲಕ್ಕೆ ಸೇರಿದ, ರಾಜಕುಮಾರಿ ದೇವಕಿ ಮತ್ತು ಪತಿ ವಸುದೇವನ ಎಂಟನೇ ಮಗ. ಆ ಸಮಯದಲ್ಲಿ ಮಥುರಾದ ರಾಜನಾಗಿದ್ದ ದೇವಕಿಯ ಸಹೋದರ ಕಂಸನು, ದೇವಕಿಯ ಎಂಟನೇ ಮಗನಿಂದ ಕಂಸನನ್ನು ಕೊಲ್ಲುತ್ತಾನೆ ಎಂದು ಹೇಳಲಾದ ಭವಿಷ್ಯವಾಣಿಯನ್ನು ತಡೆಯಲು, ದೇವಕಿಯಿಂದ ಜನ್ಮ ನೀಡಿದ ಎಲ್ಲಾ ಮಕ್ಕಳನ್ನು ಕೊಂದನು. ಕೃಷ್ಣ ಜನಿಸಿದಾಗ, ವಾಸುದೇವನು ಮಥುರಾದ ಜಿಲ್ಲೆಯ ಗೋಕುಲದಲ್ಲಿರುವ, ತನ್ನ ಸ್ನೇಹಿತನ ಮನೆಗೆ ಕೃಷ್ಣನನ್ನು ಕರೆದುಕೊಂಡು ಹೋದನು. ನಂತರ, ಕೃಷ್ಣನನ್ನು ನಂದ ಮತ್ತು ಅವನ ಹೆಂಡತಿ ಯಶೋಧೆ ಗೋಕುಲದಲ್ಲಿ ಬೆಳೆಸಿದರು. ಯಶೋಧೆ ಅದೇಷ್ಟು ತಪಸ್ಸು ಮಾಡಿದ್ದಳೋ.. ಜನುಮ ಕೊಡದೆ ಇದ್ದರು ಭಗವಾನ್ ಶ್ರೀ ಕೃಷ್ಣನಿಗೆ ತಾಯಿಯಾದಳು. 

ಇನ್ನು ಕೃಷ್ಣನನ್ನು ಹೀಗೆಯೇ ಪೂಜಿಸಬೇಕೆಂಬ ನಿಯಮವಿಲ್ಲ. ಕೃಷ್ಣನಿಗೆ ಪ್ರೀತಿ, ಭಕ್ತಿ ಮುಖ್ಯ. ಇವತ್ತು ಭಕ್ತಿಯಿಂದ ಎಲ್ಲರು ಹರೇ ಕೃಷ್ಣ ಮಹಾಮಂತ್ರ ಜಪ ಮಾಡೊಣ, ಯಾಕೆಂದರೆ ಕೃಷ್ಣ ನಾಮ ಪ್ರಿಯ.

ಹರೇ ಕೃಷ್ಣ ,ಹರೇ ಕೃಷ್ಣ  ಕೃಷ್ಣ ಕೃಷ್ಣ ಹರೇ ಹರೇ.

ಹರೇ ರಾಮ, ಹರೇ ರಾಮ ರಾಮ ರಾಮ ಹರೇ ಹರೇ.