ಕ್ರೀಡೆಗಳು

ರೋಹಿತ್‌ ಶರ್ಮಾಗಿಂತ ಜಸ್‌ಪ್ರೀತ್‌ ಬುಮ್ರಾ ಉತ್ತಮ ನಾಯಕ… ಸೈಮನ್‌ ಕಾಟಿಚ್‌

ಪರ್ತ್‌ ಟೆಸ್ಟ್‌ ಪಂದ್ಯದಲ್ಲಿ ಭಾರತ ತಂಡವನ್ನು ಮುನ್ನಡೆಸಿ ತಂಡಕ್ಕೆ ಜಯ ತಂದುಕೊಟ್ಟಿದ್ದ ಜಸ್‌ಪ್ರೀತ್‌ ಬುಮ್ರಾ ನಾಯಕತ್ವ ರೋಹಿತ್‌ ಶರ್ಮಾ ನಾಯಕತ್ವಕ್ಕಿಂತ ಉತ್ತಮವಾಗಿದೆ ಎಂದು ಆಸ್ಟ್ರೇಲಿಯಾ ಮಾಜಿ ಕ್ರಿಕೆಟಿಗ ಸೈಮನ್‌ ಕಾಟಿಚ್‌ ತಿಳಿಸಿದ್ದಾರೆ.

ಬ್ರಿಸ್ಬೇನ್‌: ಪರ್ತ್‌ ಟೆಸ್ಟ್‌ ಪಂದ್ಯದಲ್ಲಿ ಭಾರತ ತಂಡವನ್ನು ಮುನ್ನಡೆಸಿ ತಂಡಕ್ಕೆ ಜಯ ತಂದುಕೊಟ್ಟಿದ್ದ ಜಸ್‌ಪ್ರೀತ್‌ ಬುಮ್ರಾ ನಾಯಕತ್ವ ರೋಹಿತ್‌ ಶರ್ಮಾ ನಾಯಕತ್ವಕ್ಕಿಂತ ಉತ್ತಮವಾಗಿದೆ ಎಂದು ಆಸ್ಟ್ರೇಲಿಯಾ ಮಾಜಿ ಕ್ರಿಕೆಟಿಗ ಸೈಮನ್‌ ಕಾಟಿಚ್‌ ತಿಳಿಸಿದ್ದಾರೆ.

ಪಾಡ್‌ ಕಾಸ್ಟ್‌ವೊಂದರಲ್ಲಿ ಮಾತನಾಡಿದ್ದ ಸೈಮನ್‌ ಕಾಟಿಚ್‌, ರೋಹಿತ್‌ ಶರ್ಮಾ ಅವರಿಗಿಂತ ಜಸ್‌ಪ್ರೀತ್‌ ಬುಮ್ರಾ ಭಾರತ ತಂಡದ ಬೌಲರ್‌ಗಳನ್ನು ಅತ್ಯುತ್ತಮವಾಗಿ ಬಳಸಿಕೊಂಡಿದ್ದಾರೆ. ಬೌಲರ್‌ಗಳಿಗೆ ದೀರ್ಘಾವಧಿ ಸ್ಪೆಲ್‌ ನೀಡಿದ್ದರು. ಆದರೆ, ರೋಹಿತ್‌ ಶರ್ಮಾ ಈ ವಿಷಯದಲ್ಲಿ ಎಡವಿದ್ದಾರೆ ಎಂದು ಸೈಮನ್‌ ಕಾಟಿಚ್‌ ಅಭಿಪ್ರಾಯಪಟ್ಟಿದ್ದಾರೆ.

ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದ ರೋಹಿತ್‌ ಶರ್ಮಾ ಮೊದಲನೇ ಟೆಸ್ಟ್‌ ಪಂದ್ಯಕ್ಕೆ ಅಲಭ್ಯರಾಗಿದ್ದರು. ಈ ಹಿನ್ನೆಲೆಯಲ್ಲಿ ಭಾರತ ತಂಡವನ್ನು ಹಿರಿಯ ವೇಗಿ ಜಸ್‌ಪ್ರೀತ್‌ ಬುಮ್ರಾ ಮುನ್ನಡೆಸಿದ್ದರು ಹಾಗೂ ಈ ಪಂದ್ಯದಲ್ಲಿ ಟೀಮ್‌ ಇಂಡಿಯಾ 295 ರನ್‌ಗಳಿಂದ ಭರ್ಜರಿ ಗೆಲುವು ಪಡೆದಿತ್ತು. ಈ ಪಂದ್ಯದಲ್ಲಿ ಬುಮ್ರಾ ವೈಯಕ್ತಿಕವಾಗಿ ಉತ್ತಮ ಪ್ರದರ್ಶನ ತೋರುವುದರ ಜೊತೆಗೆ ಬೌಲರ್‌ಗಳನ್ನು ಅತ್ಯುತ್ತಮವಾಗಿ ಬಳಿಸಿಕೊಂಡಿದ್ದರು.

ಆದರೆ, ಎರಡನೇ ಹಾಗೂ ಪಿಂಕ್‌ ಬಾಲ್‌ ಟೆಸ್ಟ್‌ಗೆ ಮರಳಿದ್ದ ರೋಹಿತ್‌ ಶರ್ಮಾ ಬ್ಯಾಟಿಂಗ್‌ ವೈಫಲ್ಯ ಅನುಭವಿಸುವುದರ ಜೊತೆಗೆ ನಾಯಕತ್ವದಲ್ಲಿಯೂ ಎಡವಿದ್ದರು. ಈ ಪಂದ್ಯದಲ್ಲಿ ಭಾರತ ತಂಡ 10 ವಿಕೆಟ್‌ಗಳಿಂದ ಸೋಲು ಅನುಭವಿಸಿತ್ತು.