ಕರ್ನಾಟಕ
ಸಾವಿನ ನಾಲೆಯಾಯ್ತ ಪ್ರತಿಷ್ಠಿತ ವಿಸಿ ನಾಲೆ!? 2018 ರಿಂದ ಬರೋಬ್ಬರಿ 46 ಮಂದಿ ಬಲಿ
ಸಾಲು ಸಾಲು ದುರಂತಗಳು ನಡೆದರೂ ಕೂಡ ಜಿಲ್ಲಾಡಳಿತ, ಜನಪ್ರತಿನಿಧಿಗಳು ಎಚ್ಚೆತ್ತುಕೊಳ್ಳುತ್ತಿಲ್ಲ. ಸಾಲು ಸಾಲು ದುರಂತಗಳಿಂದ ಕಂಗೆಟ್ಟ ಸಾರ್ವಜನಿಕರು ಇನ್ನೆಷ್ಟು ಪ್ರಾಣ ಬಲಿ ಬೇಕು ಸ್ವಾಮಿ ಎಂದು ಹಿಡಿಶಾಪ ಹಾಕ್ತಿದ್ದಾರೆ.
ನಿನ್ನೆ (ಸೋಮವಾರ ) ಮಂಡ್ಯದ ವಿಸಿ ನಾಲೆಗೆ ವೇಗವಾಗಿ ಚಲಿಸುತ್ತಿದ್ದ ಕಾರು ಪಲ್ಟಿಯಾಗಿ, ಮೂವರು ಮೃತಪಟ್ಟಿದ್ದು, ಓರ್ವ ಆಸ್ಪತ್ರೆ ಪಾಲಾಗಿದ್ದಾರೆ. ಆದ್ರೆ, ರೈತರ ಬದುಕನ್ನ ಹಸನಾಗಿಸಬೇಕಿದ್ದ ವಿಸಿ ನಾಲೆ ಯಮ ಸ್ವರೂಪಿಯಾಗಿ ಬದಲಾಗ್ತಿದೆ. 2018ರಿಂದ ಇಲ್ಲಿಯವರೆಗೆ ವಿಸಿ ನಾಲೆಯಲ್ಲಿ ನಡೆದಿರುವ ದುರಂತಗಳು ಮೈನಡುಗಿಸುವಂತಿವೆ. 6 ವರ್ಷದ ಅವಧಿಯಲ್ಲಿ ಬರೋಬ್ಬರಿ 46 ಮಂದಿ ವಿಶ್ವೇಶ್ವರಯ್ಯ ನಾಲೆಗೆ ಬಲಿಯಾಗಿದ್ದಾರೆ. ಸಾಲು ಸಾಲು ದುರಂತಗಳು ನಡೆದರೂ ಕೂಡ ಜಿಲ್ಲಾಡಳಿತ, ಜನಪ್ರತಿನಿಧಿಗಳು ಎಚ್ಚೆತ್ತುಕೊಳ್ಳುತ್ತಿಲ್ಲ. ಸಾಲು ಸಾಲು ದುರಂತಗಳಿಂದ ಕಂಗೆಟ್ಟ ಸಾರ್ವಜನಿಕರು ಇನ್ನೆಷ್ಟು ಪ್ರಾಣ ಬಲಿ ಬೇಕು ಸ್ವಾಮಿ ಎಂದು ಹಿಡಿಶಾಪ ಹಾಕ್ತಿದ್ದಾರೆ.
2018 ರಿಂದ ವಿಸಿ ನಾಲೆಯಲ್ಲಿ ನಡೆದ ದುರಂತಗಳ ವಿವರಗಳು :
- 2018ರ ನ.24 ರಂದು ಪಾಂಡವಪುರ ತಾಲೂಕಿನ ಕನಕನನರಡಿ ಬಳಿ ವಿಸಿ ನಾಲೆಗೆ ಬಸ್ ಬಿದ್ದು 31 ಜನರು ಜಲಸಮಾಧಿ.
- 2023ರ ಜು.27 ರಂದು ಮಂಡ್ಯ ತಾಲೂಕಿನ ತಿಬ್ಬನಹಳ್ಳಿ ಬಳಿಯ ವಿಸಿ ನಾಲೆಗೆ ಕಾರು ಪಲ್ಟಿಯಾಗಿ ಓರ್ವ ಸಾವು.
- 2023ರ ಜು.29ರಂದು ಶ್ರೀರಂಗಪಟ್ಟಣ ತಾಲೂಕಿನ ಗಾಮನಹಳ್ಳಿ ಬಳಿ ವಿಸಿ ನಾಲೆಗೆ ಕಾರು ಬಿದ್ದು ನಾಲ್ವರ ಸಾವು.
- 2023ರ ನ.8ರಂದು ಪಾಂಡವಪುರ ತಾಲೂಕಿನ ಬನಘಟ್ಟ ಬಳಿ ವಿಸಿ ನಾಲೆಗೆ ಕಾರು ಬಿದ್ದು ತುಮಕೂರು ಮೂಲದ ಐವರ ದುರ್ಮರಣ.
- 2024ರ ಮಾ.12ರಂದು ಮಂಡ್ಯ ತಾಲೂಕಿನ ಅವ್ವೇರಹಳ್ಳಿ ಗ್ರಾಮದ ಬಳಿ ವಿಸಿ ನಾಲೆಗೆ ಕಾರು ಉರುಳಿ ಓರ್ವ ಸಾವು.
- 2024ರ ಆ.5ರಂದು ಪಾಂಡವಪುರ ತಾಲೂಕಿನ ಕಾಳೇನಳ್ಳಿ ಬಳಿ ವಿಸಿ ನಾಲೆಗೆ ಟ್ರಾಕ್ಟರ್ ಪಲ್ಟಿಯಾಗಿ ಓರ್ವ ಸಾವು.
- 2025ರ ಫೆ.3ರಂದು ಮಂಡ್ಯ ತಾ. ಮಾಚಹಳ್ಳಿ ಬಳಿಯ ವಿಸಿ ನಾಲೆಗೆ ಕಾರು ಉರುಳಿ ಬಿದ್ದು ಮೂವರ ದುರ್ಮರಣ.