ಬೆಳಗಾವಿ: ಕುಂದಾನಗರಿ ಬೆಳಗಾವಿಯಲ್ಲೊಂದು ಅಮಾನವೀಯ ಘಟನೆ ನಡೆದಿದೆ. ಹೆತ್ತ ಎರಡು ತಿಂಗಳ ಹೆಣ್ಣು ಹಸುಗೂಸನ್ನೇ ಕ್ರೂರಿ ತಾಯಿ ಕೆರೆಗೆ ಎಸೆದಿದ್ದಾಳೆ. ಬೆಳಗಾವಿಯ ಕಣಬರಗಿ ಗ್ರಾಮದಲ್ಲಿ ಈ ಅಂತಃಕರಣ ಘಟನೆ ನಡೆದಿದ್ದು, ಮಗು ಕೆರೆಗೆ ಎಸೆಯುವುದನ್ನ ನೋಡಿದ ಸ್ಥಳೀಯ ಯುವಕರು ತಕ್ಷಣವೇ ಕೆರೆಗೆ ಹಾರಿ ಮಗು ರಕ್ಷಣೆ ಮಾಡಿದ್ದಾರೆ. ಹೊತ್ತು ಹೆತ್ತ ಎರಡು ತಿಂಗಳ ಹೆಣ್ಣು ಮಗುವನ್ನ ಗ್ರಾಮದ ನಿವಾಸಿ ಶಾಂತಿ ಎಂಬಾಕೆ ಕೊಲ್ಲೋಕೆ ಸ್ಖೇಚ್ ಹಾಕಿ ಕೆರೆಗೆ ಎಸೆದು ಪರಾರಿಯಾಗಲು ಯತ್ನಿಸಿದ್ದಾಳೆ.
ಆದ್ರೆ ಓಡಿ ಹೋಗುತ್ತಿದ್ದ ತಾಯಿಯನ್ನ ತಡೆದು ಸ್ಥಳೀಯರು ಬುದ್ದಿ ಹೇಳಿದ್ದಾರೆ. ಮಗುವನ್ನ ರಕ್ಷಣೆ ಮಾಡಿ ಅವಳ ಕೈಗೆ ಯುವಕರು ನೀಡಿದ್ದಾರೆ. ಬಳಿಕ ಜಿಲ್ಲೆಯ ಮಕ್ಕಳ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗ್ತಿದೆ. ಬೆಳಗಾವಿ ಮಾಳಮಾರುತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ವಿಷಯ ತಿಳಿದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಪೊಲೀಸರು ಬಳಿಕ ಆಸ್ಪತ್ರೆಗೆ ಹೋಗಿ ಮಗುವಿನ ಆರೋಗ್ಯದ ಕುರಿತು ವಿಚಾರಿಸಿ ಅಲ್ಲೇ ಇದ್ದ ತಾಯಿ ಶಾಂತಿಯನ್ನ ಬಂಧಿಸಿದ್ದಾರೆ.