ಚಿತ್ರದುರ್ಗ : ಕ್ಷುಲ್ಲಕ ಕಾರಣಕ್ಕೆ ತಂದೆ-ಮಗನ ನಡುವೆ ಶುರುವಾಗಿದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ಮಗನೇ ತಂದೆಯನ್ನೇ ಕೊಲೆಮಾಡಿದ ದುರ್ಘಟನೆಯೊಂದು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಕುಂದಲಗುರ ಗ್ರಾಮದಲ್ಲಿ ನಡೆದಿದೆ. ರಂಗಸ್ವಾಮಿ (50) ಎಂಬ ವ್ಯಕ್ತಿ ಮಗನಿಂದಲೇ ಕೊಲೆಯಾದ ದುರ್ಧೈವಿ.
ಊಟದ ವಿಚಾರಕ್ಕೆ ಆರೋಪಿ ಮಗ ದೇವರಾಜ್ ತಂದೆಯ ಜತೆ ಜಗಳ ಆರಂಭಿಸಿದ್ದ. ಈ ವೇಳೆ ಗಲಾಟೆ ವಿಕೋಪಕ್ಕೆ ತಿರುಗಿ, ತಂದೆಯನ್ನು ದೇವರಾಜ್ ಕೆಳಗೆ ಬೀಳಿಸಿದ್ದಾನೆ. ಬಿದ್ದ ರಭಸಕ್ಕೆ ಗಂಭೀರ ಗಾಯಗೊಂಡು ಮೃತಪಟ್ಟಿದ್ದಾರೆ. ಸ್ಥಳಕ್ಕೆ ಸಿಪಿಐ (CPI) ಗುಡ್ಡಪ್ಪ, ಹಾಗೂ ಅಬ್ಬಿನಹೊಳೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಅಬ್ಬಿನಹೊಳೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.