ಕರ್ನಾಟಕ
ಚಿತ್ರಮಂದಿರಗಳಲ್ಲಿ 50ದಿನ ಘರ್ಜಿಸಿ ಮುನ್ನುಗುತ್ತಿರುವ ಸಿಂಹರೂಪಿಣಿ..!
ಪ್ರೇಕ್ಷಕರನ್ನು ಸೆಳೆಯುವ ಸಲುವಾಗಿ ಚಿತ್ರತಂಡ ಹೊಸ ಆಫರ್ ನೀಡಿದೆ. ಇಂದು ರಾಜ್ಯದ ಎಲ್ಲಾ ಮಲ್ಟಿಪ್ಲೆಕ್ಸ್‌ಗಳಲ್ಲೂ ಚಿತ್ರವನ್ನು ಕೇವಲ 99 ರೂಗಳಿಗೆ ನೋಡಬಹುದು. ಈ ಆಫರ್ ಇದೊಂದು ದಿನ ಮಾತ್ರ. ನಾಳೆಯಿಂದ ಯಥಾಪ್ರಕಾರ, ಮಾಮೂಲೀ ದರವೇ ಇರುತ್ತದೆ. ಬರೀ ಮಲ್ಟಿಪ್ಲೆಕ್ಸ್‌ನಲ್ಲಿ ಇಂದು ಬೆಲೆ ಕಡಿಮೆ ಆಗುತ್ತಿರುವುದಷ್ಟೇ ಅಲ್ಲ, ಚಿತ್ರ ಇಂದು ತೆಲುಗು ಮತ್ತು ತಮಿಳಿನಲ್ಲಿ ಬಿಡುಗಡೆಯಾಗುತ್ತಿದೆ
ಭಕ್ತಿಯ ಜೊತೆಗೆ ಒಂದು ಪ್ರೇಮಕತೆ, ಆ ಪ್ರೇಮಕ್ಕೆ ವಿಘ್ನ, ಭಕ್ತಿಪ್ರಧಾನ ಸಿನಿಮಾಗಳ ಪರಂಪರೆಯೇ ಇದೆ. ಸಿಂಹರೂಪಿಣಿ ಆ ಸಾಲಿಗೆ ಸೇರುವ ಆಧುನಿಕ ಕಾಲದ ಭಕ್ತಿ ಪ್ರಧಾನ ಸಿನಿಮಾ.
ಕೆಜಿಎಫ್, ಭೈರತಿ ರಣಗಲ್, ಬಘೀರ, ಅಂಜನೀಪುತ್ರ ಸೇರಿದಂತೆ ಸುಮಾರು 50ಕ್ಕು ಹೆಚ್ಚು ಸಿನಿಮಾ 150ಕ್ಕು ಹೆಚ್ಚು ಹಾಡುಗಳನ್ನು ರಚಿಸಿ ಇಂದಿಗೂ ಮುನ್ನುಗುತ್ತಿರುವ ಪವರ್ ಫುಲ್ ರೈಟರ್ ಕಿನ್ನಾಲ್ ರಾಜ್ ನಿರ್ದೇಶಿಸಿರುವ ಸಿಂಹರೂಪಿಣಿ ಸಿನಿಮಾ ಅಕ್ಟೋಬರ್ 17ರಂದು ರಾಜ್ಯದ್ಯಂತ ತೆರೆಗೆ ಕಂಡಿತ್ತು. ಸದ್ಯ ಈ ಚಿತ್ರ ಇಂದಿಗೆ 50ನೇ ದಿನ ಪೂರೈಸಿ ಥಿಯೇಟರ್ ಗಳಲ್ಲಿ ಮುನ್ನುಗುತ್ತಿದೆ. ಇಂದಿನಿಂದ ಉತ್ತರ ಕರ್ನಾಟಕ ಜಿಲ್ಲೆಗಳಲ್ಲೂ ಸಿಂಹರೂಪಿಣಿ ಗೆ ಗ್ರ್ಯಾಂಡ್ ವೆಲ್ ಕಮ್ ಸಿಕ್ಕಿದೆ.
ಚಿತ್ರಕ್ಕೆ ಕಿನ್ನಾಳ್ ರಾಜ್ ಅವರ ಚಿತ್ರಕಥೆ, ಸಂಭಾಷಣೆ, ಸಾಹಿತ್ಯದ ಜೊತೆಗೆ ನಿರ್ದೇಶನವಿದೆ. ದೊಡ್ಡಬಳ್ಳಾಪುರ ಕೆ.ಎಂ.ನಂಜುಂಡೇಶ್ವರ ಕಥೆ ಬರೆದು ಶ್ರೀ ಚಕ್ರ ಫಿಲಂಸ್ ಅಡಿಯಲ್ಲಿ ನಿರ್ಮಾಣ ಮಾಡಿದ್ದಾರೆ.