ಕ್ರೀಡೆಗಳು

ಸಿರಾಜ್ ಈಸ್ ಇನ್ ಲವ್..ವೇಗದ ಬೌಲರ್ ಹೃದಯ ಕದ್ದವಳು ಯಾರು..?

ಬಾಲಿವುಡ್ನಲ್ಲಿ ಮತ್ತೊಂದು ಪ್ರೇಮಕತೆಗೆ ಮುನ್ನುಡಿ ಬರೆದಿದೆ ಅಂತಾ ಹೇಳಲಾಗ್ತಿದೆ, ಕಾಶ್ಮೀರಿ ಚೆಲುವೆಯ ಎಸತಕ್ಕೆ ಸಿರಾಜ್ ಕ್ಲೀನ್ ಬೋಲ್ಡ್..

ವಿರಾಟ್ ಕೊಯ್ಲಿ, ಕೆ.ಎಲ್ ರಾಹುಲ್ ನಿಂದ ಹಿಡಿದು ಕ್ರಿಕೆಟರ್ಗಳು ಬಾಲಿವುಡ್ ಬಾಲೆಯರ ಜೊತೆ ಸಪ್ತಪದಿ ತುಳಿದ ಸಾಕಷ್ಟು ಉದಾಹರಣೆಗಳಿವೆ, ಇದೀಗ  ಈ ಲಿಸ್ಟ್ ನಲ್ಲಿ ಮತ್ತೊಂದು ಹೊಸ ಜೋಡಿಯ ಸೇರ್ಪಡೆಯಾಗೋ ಎಲ್ಲಾ ಸಾಧ್ಯತೆಗಳು ಎದ್ದು ಕಾಣುತ್ತಿವೆ, ಟೀಮ್ ಇಂಡಿಯಾದ ವೇಗದ ಬೋಲರ್ ಮೊಹಮ್ಮದ್ ಸಿರಾಜ್ ಹೆಸರು ಈಗ ಬಾಲಿವುಡ್ ಅಂಗಳದಲ್ಲಿ ಸಖತ್ ಸೌಂಡ್ ಮಾಡ್ತಿದೆ..
ಒಂದೆಡೆ ಐಪಿಎಲ್ ಮೆಗಾ ಹರಾಜಿನಲ್ಲಿ ಸಿರಾಜ್ ಜಾಕ್ಪಾಟ್ ಹೊಡೆದಿದ್ದು ₹12 ಕೋಟಿ, 25 ಲಕ್ಷಕ್ಕೆ ಗುಜರಾತ್ ಟೈಟನ್ಸ್ ಪಾಲಾಗಿದ್ದಾರೆ. ಇನ್ನೊಂದೆಡೆ ಆರ್ಸಿಬಿ ತೊರೆದ ಬೇಸರದಲ್ಲಿ ಸಿರಾಜ್ ಭಾವನಾತ್ಮಕ ಬರಹ ಬರೆದು, ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿರೋ ವಿಡಿಯೋ ಕೂಡ ವೈರಲ್ ಆಗಿದೆ. ಇದರ ನಡುವೆ ಸಿರಾಜ್ ಡೇಟಿಂಗ್ ಗಾಸಿಪ್ ಸೆನ್ಸೇಷನ್ ಸೃಷ್ಟಿಸಿದೆ.
ಹೌದು ಸದ್ಯ ಬಾಲಿವುಡ್ ಅಂಗಳದಲ್ಲಿ ಈ ಸುದ್ದಿ ಸಖತ್ ಸೌಂಡ್ ಮಾಡುತ್ತಿದೆ. ಟೀಮ್ ಇಂಡಿಯಾ ವೇಗಿ ಬಾಲಿವುಡ್ನ ಬ್ಯೂಟಿಗೆ ಕ್ಲೀನ್ ಬೋಲ್ಡ್ ಆಗಿದ್ದಾರೆ ಅನ್ನೋ ಸುದ್ದಿ ಬಿಟೌನ್ನಲ್ಲಿ ಹರಿದಾಡುತ್ತಿದೆ. ಅಂದ್ಹಾಗೆ ಸಿರಾಜ್ ಜೊತೆಗೆ ತಳುಕು ಹಾಕಿಕೊಂಡಿರುವ ಬೆಡಗಿಯ ಹೆಸರು ಮಾಹಿರಾ ಶರ್ಮಾ. ಮಾಹಿರಾ ಶರ್ಮಾ ಜೊತೆಗೆ ಸದ್ಯ ಸಿರಾಜು ಹೆಸರು ಸುದ್ದಿಯಲ್ಲಿರೋದು. ಹಿಂದಿಯ ಬಿಗ್ ಬಾಸ್ 13ನೇ ಸೀಸನ್ ಸ್ಪರ್ಧಿಯಾಗಿದ್ದ ಈ ಮಾಹಿರಾ ಶರ್ಮಾ. ಈಕೆಯ ಜೊತೆಗೆ ವೇಗಿ ಮೊಹಮ್ಮದ್ ಸಿರಾಜ್ ಡೇಟಿಂಗ್ ಮಾಡುತ್ತಿದ್ದಾರೆ ಅನ್ನೋ ಗಾಸಿಪ್ ಈಗ ಬೀ ಟೌನ್ ಅಂಗಳದಲ್ಲಿ ಸಖತ್ ಸದ್ದು ಮಾಡ್ತಿದೆ,