ಕರ್ನಾಟಕ
ಎಸ್.ಎಂ. ಕೃಷ್ಣ ಸಹಾಯ ನೆನೆದು ಭಾವುಕರಾದ ಶಿವಣ್ಣ
ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರ ಅಂತಿಮ ದರ್ಶನವನ್ನ ಹಿರಿಯ ನಟ ಶಿವರಾಜ್ ಕುಮಾರ್ ಪಡೆದಿದ್ದಾರೆ..
ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರ ಅಂತಿಮ ದರ್ಶನವನ್ನ ಹಿರಿಯ ನಟ ಶಿವರಾಜ್ ಕುಮಾರ್ ಪಡೆದಿದ್ದಾರೆ.. ಬೆಂಗಳೂರಿನ ಸದಾಶಿವನಗರದ S.M. ಕೃಷ್ಣ ನಿವಾಸದಲ್ಲಿ ಹಿರಿಯ ಮುತ್ಸದ್ಧಿಯ ಒಡನಾಟವನ್ನ ನೆನೆದು ಶಿವಣ್ಣ ಭಾವುಕರಾಗಿದ್ದಾರೆ.. ಡಾ.ರಾಜ್‌ಕುಮಾರ್ ಅಪಹರಣ ವೇಳೆ ಮುಖ್ಯಮಂತ್ರಿ ಆಗಿದ್ದ ಎಸ್.ಎಂ. ಕೃಷ್ಣ, ಆಗಿನ ಉದ್ವಿಗ್ನ ಪರಿಸ್ಥಿತಿಯನ್ನ ಹೇಗೆ ನಿರ್ವಹಿಸಿದ್ದರು ಎನ್ನುವುದನ್ನ ಹೇಳಿದ್ದಾರೆ.. ವೀರಪ್ಪನ್ ಅಪ್ಪನ ಅಪಹರಣ ಮಾಡಿದ ವೇಳೆ ಎಸ್.ಎಂ. ಕೃಷ್ಣ ಅವರು ನಮ್ಮ ಕುಟುಂಬದ ಜೊತೆ ನಿಂತಿದ್ದರು, ಅದನ್ನು ನಾವು ಯಾವತ್ತು ಮರೆಯೋದಿಲ್ಲ. ವೈಯಕ್ತಿಕವಾಗಿ ನಮಗೂ ಅವರೊಂದಿಗೆ ಒಡನಾಟವಿದೆ. ಅವರ ಇಡೀ ಕುಟುಂಬದ ಜೊತೆ ಒಳ್ಳೆಯ ಬಾಂಧವ್ಯವಿದೆ ಎಂದಿದ್ದಾರೆ..