ಇಂದು ರೆಬೆಲ್ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಟೀಂ ದೆಹಲಿಗೆ ತೆರಳಲಿದ್ದಾರೆ. ಯತ್ನಾಳ್ ಜೊತೆ ರಮೇಶ್ ಜಾರಕಿಹೊಳಿ, ಕುಮಾರ್ ಬಂಗಾರಪ್ಪ, ಬಿಪಿ ಹರೀಶ್, ಜಿಎಂ ಸಿದ್ದೇಶ್ವರ್ ಸೇರಿದಂತೆ ಹಲವರು ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ. ಈ ಹಿಂದೆ ಹೈಕಮಾಂಡ್ ನಾಯಕರ ಭೇಟಿ ಅವಕಾಶ ಕೇಳಿದ್ದ ಅತೃಪ್ತ ನಾಯಕರೆಲ್ಲಾ ಒಂದಾಗಿ ಇಂದು ದೆಹಲಿಗೆ ತರಳಲಿದ್ದು, ಸುಮಾರು 3-4 ನಾಲ್ಕು ದಿನ ದೆಹಲಿಯಲ್ಲೇ ಇದ್ದು ವರಿಷ್ಠರ ಜೊತೆ ಚರ್ಚೆ ನಡೆಸಲಿದ್ದಾರೆ.
ಜಿಲ್ಲಾಧ್ಯಕ್ಷರ ನೇಮಕ ವಿಚಾರ ಏಕಪಕ್ಷೀಯವಾಗಿ ನಿರ್ಧಾರವಾಗಿದೆ ಎಂದು ವರಿಷ್ಠರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ವಿರುದ್ಧ ಅತೃಪ್ತರು ದೂರು ನೀಡಲಿದ್ದಾರೆ. ಮೊದಲಿನಿಂದ ಜಿಲ್ಲಾಧ್ಯಕ್ಷರ ನೇಮಕ ಆಗಬೇಕೆಂದು ಕೇಂದ್ರ ನಾಯಕರ ಬಳಿ ಮನವಿ ಮಾಡಿದ್ದು, ಅದೇ ರೀತಿ ರಾಜ್ಯಾಧ್ಯಕ್ಷ ಬದಲಾವಣೆ ಆಗಲೇ ಬೇಕು ಎಂದು ವರಿಷ್ಠರ ಬಳಿ ಒತ್ತಾಯ ಹೇರುವ ಸಾಧ್ಯತೆ ಹೆಚ್ಚಿದೆ.