ಕರ್ನಾಟಕ

ಲೋಕಾಯುಕ್ತ ಕಚೇರಿಗೆ ಸ್ನೇಹಮಯಿ‌ ಕೃಷ್ಣ ಭೇಟಿ

ಇಂದು ಲೋಕಾಯುಕ್ತ ಕಚೇರಿಗೆ ಸ್ನೇಹಮಯಿ‌ ಕೃಷ್ಣ ಭೇಟಿ ನೀಡಿದ್ದಾರೆ. ಹಿಂದಿನ ಆಯುಕ್ತ ಡಿ.ಬಿ.ನಟೇಶ್ ವಿರುದ್ದ ಸ್ನೇಹಮಯಿ‌ ಕೃಷ್ಣ ದೂರು ನೀಡಿದ್ದಾರೆ.

ಮೈಸೂರು : ಇಂದು ಲೋಕಾಯುಕ್ತ ಕಚೇರಿಗೆ ಸ್ನೇಹಮಯಿ‌ ಕೃಷ್ಣ ಭೇಟಿ ನೀಡಿದ್ದಾರೆ. ಹಿಂದಿನ ಆಯುಕ್ತ ಡಿ.ಬಿ.ನಟೇಶ್ ವಿರುದ್ದ ಸ್ನೇಹಮಯಿ‌ ಕೃಷ್ಣ ದೂರು ನೀಡಿದ್ದಾರೆ. ನಟೇಶ್ ಹೆಂಡತಿ ಡಿ.ಸಿ. ರಶ್ಮಿರವರನ್ನು ಹಲವಾರು ಸಂಸ್ಥೆಗಳಲ್ಲಿ ನಿರ್ದೇಶಕಿಯನ್ನಾಗಿಸಿ ಸದರಿ ಸಂಸ್ಥೆಗಳಲ್ಲಿ ಅಕ್ರಮ ಹಣ ಹೂಡಿದ್ದಾರೆಂದು ಆರೋಪಿಸಿ ದೂರು ದಾಖಲಿಸಿದ್ದಾರೆ. ಆ ಸಂಸ್ಥೆಗಳ ಹೆಸರಿನಲ್ಲಿ ಆಸ್ತಿಗಳನ್ನು ಖರೀದಿ ಮಾಡಿರುವುದಕ್ಕೆ ಸಂಬಂಧಿಸಿದ ಮಾಹಿತಿ ಮತ್ತು ದಾಖಲೆಯನ್ನ ಸ್ನೇಹಮಯಿ‌ ಕೃಷ್ಣ ನೀಡಿದ್ದಾರೆ. ಈ ಬಗ್ಗೆ ತನಿಖೆ ನಡೆಸುವಂತೆ ಲೋಕಾಯುಕ್ತ ಎಸ್.ಪಿ.ಟಿ.ಜೆ ಉದೇಶ್‌ಗೆ ಸ್ನೇಹಮಯಿ‌ ಕೃಷ್ಣ  ದೂರು ನೀಡಿ,  ಮನವಿ ಮಾಡಿದ್ದಾರೆ.