ಮುಡಾ ಹಗರಣ ರಾಜ್ಯದಲ್ಲೇ ದೊಡ್ಡ ಸಂಚಲನ ಸೃಷ್ಟಿಸಿದೆ. ದೂರುದಾರ ಸ್ನೇಹಮಯಿ ಕೃಷ್ಣ ಇದೀಗ ಮತ್ತೊಂದು ಗಂಭೀರ ಆರೋಪ ಮಾಡಿದ್ದಾರೆ. ಅದೇನಂದ್ರೆ ಮುಡಾ ಅಕ್ರಮದಲ್ಲಿ ಸಿಎಂ ಹಾದಿಯಾಗಿ ಪ್ರಭಾವಿ ರಾಜಕಾರಣಿಗಳ ಹೆಸರು ಕೇಳಿ ಬಂದಿದೆ. ಹೀಗಾಗಿಯೇ ಮುಡಾದಲ್ಲಿ ಕಡತಗಳನ್ನು ನಾಶಪಡಿಸಲಾಗಿದೆ ಎಂದು ಹೇಳಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಅವರು, ನಾನು ಮುಡಾ ಅಕ್ರಮ ಬಗ್ಗೆ ದೂರು ನೀಡುವ ಮುನ್ನವೇ, ಲೋಕಾಯುಕ್ತ ಅಧಿಕಾರಿಗಳು ಮಾಹಿತಿ ನೀಡಿದ್ರು. ಮುಡಾ ಮೇಲೆ ದಾಳಿ ಮಾಡಿ ದಾಖಲೆ ವಶಪಡಿಸಿಕೊಳ್ಳಲಿಕ್ಕೆ ಮುಂದಾಗಿದ್ರು. ಅಂದರೆ ಹಿಂದಿನ ಲೋಕಾಯುಕ್ತ ಅಧಿಕಾರಿ ಸಜಿತ್ ರವರು ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಗೆ ಇದರ ಮಾಹಿತಿ ನೀಡುತ್ತಾರೆ. ಆಗ ಭೈರತಿ ಸುರೇಶ್ ರವರು ಮುಡಾ ದಲ್ಲಿನ ಕಡತಗಳನ್ನ ತೆಗೆದುಕೊಂಡು ಹೋಗಿದ್ದಾರೆ. ಈ ಬಗ್ಗೆ ಈಡಿ ಅಧಿಕಾರಿಗಳಿಗೆ ಮಾಹಿತಿ ನೀಡುತ್ತೇನೆ. ಮುಡಾದಲ್ಲಿನ ಕಡತ ನಾಪತ್ತೆ ಮಾಡಿರೋ ಅಧಿಕಾರಿಗಳು, ಜನಪ್ರತಿನಿದಿನಗಳ ವಿರುದ್ಧ ಕಾನೂನು ಕ್ರಮ ಆಗಬೇಕು ಎಂದು ಸ್ನೇಹಮಯಿ ಕೃಷ್ಣ ಆಗ್ರಹಿಸಿದ್ದಾರೆ.