ಶಾಸಕ ಜಿ.ಟಿ.ದೇವೇಗೌಡ ತಮ್ಮ ಪ್ರಭಾವದಿಂದ ಮಹೇಂದ್ರ ಎಂಬುವರಿಗೆ ನಿವೇಶನ ಕೊಡಿಸಿದ್ದಾರೆ ಎಂದು, ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಆರೋಪ ಮಾಡಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು, ದೇವನೂರು ಗ್ರಾಮದ ಸರ್ವೆ ನಂ. 81/2ರ ಜಮೀನನ್ನು ಮುಡಾ ಬದಲಾವಣೆ ಮಾಡಿತ್ತು. ಅದಾದಮೇಲೂ ಕೃಷಿ ಭೂಮಿ ಎಂದು ಮುಡಾದಲ್ಲಿ ತೋರಿಸಲಾಗಿದೆ ಎಂದು ಹೇಳಿದ್ದಾರೆ. ಅಲ್ಲದೇ ಸುಳ್ಳು ದಾಖಲೆ ಸೃಷ್ಟಿಸಿ ನಿವೇಷನ ಪಡೆದುಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.
ಹಾಗೂ ಇಲ್ಲಿ ಮಹೇಂದ್ರ ಎಂಬಾತನ ಜಮೀನು ಯಾವಾಗ ಮುಡಾ ವಶ ಮಾಡಿಕೊಂಡಿದೆ ಎಂಬುದಕ್ಕೆ ದಾಖಲೆ ಇಲ್ಲ. ಆದರೂ ಬದಲಿಯಾಗಿ ನಿವೇಶನ ಪಡೆದಿದ್ದಾರೆ. ಜಿ.ಟಿ ದೇವೇಗೌಡರ ತಂಗಿ ಮಗ ಮಹೇಂದ್ರರಿಗೆ ನಿವೇಶನ ನೀಡಲಾಗಿದೆ. ದೇವನೂರು ಸರ್ವೇ ನಂಬರ್‌ನಲ್ಲಿ ಮಹೇಂದ್ರಗೆ ಜಮೀನು ಇದ್ದ ದಾಖಲೆ ಇಲ್ಲ. ಮುಡಾ ವಶಪಡಿಸಿಕೊಂಡ ದಾಖಲೆಯು ಇಲ್ಲ. 50:50 ಅನುಪಾತದಲ್ಲಿ ಮಾತ್ರ ವಿಜಯನಗರದಲ್ಲಿ ನಿವೇಶನ ನೀಡಿದ್ದಾರೆ. ಇದು ಮುಖ್ಯಮಂತ್ರಿ ಸಿದ್ದರಾಮಯ್ಯ ಕುಟುಂಬಕ್ಕೆ ಸಂಬಂಧಿಸಿದ 14 ನಿವೇಶನಗಳಿಗಿಂತಲೂ ದೊಡ್ಡ ಅಕ್ರಮ. ಇದರ ತನಿಖೆ ಆಗಬೇಕು ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು. ಈ ಬಗ್ಗೆ ಈಗಾಗಲೇ ದೂರು ನೀಡಿದ್ದೇನೆ ಎಂದು ಹೇಳಿದ್ದಾರೆ