ಕರ್ನಾಟಕ

ಮುಡಾ ಕೇಸ್... ಎ4 ದೇವರಾಜು ವಿರುದ್ಧ ದೂರು ಬೆನ್ನಲ್ಲೇ ಸ್ನೇಹಮಯಿ ಕೃಷ್ಣ ಹೇಳಿದ್ದು ಹೀಗೆ..!

ಕೆಸರೆ ಗ್ರಾಮದ ಸರ್ವೇ ನಂ 464 ರ 3ಎಕರೆ 16 ದೇವರಾಜುಗೆ ಸೇರಿದ್ದಲ್ಲ. ಅದು ದೇವರಾಜು ಅಣ್ಣ ಮೈಲಾರಯ್ಯ ಮಕ್ಕಳಿಗೆ ಸೇರಬೇಕು. ಮೂಲ ಮಾಲೀಕ ಮೈಲಾರಯ್ಯ ಎಂದು ಸ್ನೇಹಮಯಿ ಕೃಷ್ಣ ಹೇಳಿದ್ದಾರೆ.

ಮುಡಾ ಹಗರಣ ಸಂಬಂಧ 4ನೇ ಆರೋಪಿ ದೇವರಾಜು ಮೇಲೆ ಅವರ ಅಣ್ಣನ ಮಗಳೇ ದೂರು ದಾಖಲಿಸಿರುವ ಬಗ್ಗೆ, ಸ್ನೇಹಮಯಿ ಕೃಷ್ಣ ಪ್ರತಿಕ್ರಿಯೆ ನೀಡಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು, ಕೆಸರೆ ಗ್ರಾಮದ ಸರ್ವೇ ನಂ 464 ರ 3ಎಕರೆ 16 ದೇವರಾಜುಗೆ ಸೇರಿದ್ದಲ್ಲ. ಅದು ದೇವರಾಜು ಅಣ್ಣ ಮೈಲಾರಯ್ಯ ಮಕ್ಕಳಿಗೆ ಸೇರಬೇಕು. ಮೂಲ ಮಾಲೀಕ ಮೈಲಾರಯ್ಯ. ಆದ್ರೆ ಇಲ್ಲಿ ದೇವರಾಜು ತನ್ನ ಅಣ್ಣ ಮೈಲಾರಯ್ಯ ಹಾಗೂ ಅಣ್ಣನ ಮಕ್ಕಳಾದ ಜಮುನಾ ಮಂಜುನಾಥ ಸ್ವಾಮಿಗೆ ಸೇರಬೇಕಾದ ಜಮೀನನ್ನ ಸುಳ್ಳು ದಾಖಲೆ ಸೃಷ್ಟಿಸಿ ತನ್ನ ಹೆಸರಿಗೆ ಮಾಡಿಕೊಂಡು ನಂತರ ಮಲ್ಲಿಕಾರ್ಜುನಸ್ವಾಮಿಗೆ ಮಾರಾಟ ಮಾಡಿದ್ದಾರೆ ಎಂದು ಆರೋಪ ಮಾಡಿದ್ದಾರೆ. 

ಮೂಲ ದಾಖಲೆಗಳನ್ನು ಅಧಿಕಾರಿಗಳು ಪರಿಶೀಲಿಸದೇ ರಿಜಿಸ್ಟರ್‌ ಮಾಡಿ ಕೊಟ್ಟಿದ್ದಾರೆ. ಆದಾದ ಬಳಿಕ ಮಲ್ಲಿಕಾರ್ಜುನಸ್ವಾಮಿ ತೆಗೆದುಕೊಂಡಿದ್ದಾರೆ. ಇಲ್ಲಿ ಸಿಎಂ ಪ್ರಭಾವ ಇದೆ. ಜಮೀನಿಗೆ ಸಂಬಂಧಿಸಿದ ಎಲ್ಲವೂ ವಿವರ ಗೊತ್ತಿದ್ದು, ಕೋಟಿ ಕೋಟಿ ಮಾಡುವ ಸಲುವಾಗಿ ಜಮೀನು ಕೊಂಡಿದ್ದಾರೆ. ಈಗ ನನಗೆ ಸಿಕ್ಕಿರುವ ದಾಖಲೆ ಪ್ರಕಾರ ಇದು ಪಿತ್ರಾರ್ಜಿತವಾಗಿ ಜಮುನಾರಿಗೆ ಬರಬೇಕು. ಅದನ್ನ ಮೂಲ ಮಾಲೀಕರಾಗಬೇಕಿರುವವರಿಗೆ ತಿಳಿಸಿದ್ದೇನೆ ನ್ಯಾಯಾಲಯದಲ್ಲಿ ದೂರು ದಾಖಲಾಗಿದೆ. ಇದರಲ್ಲಿ ಜಮುನಾಗೆ ನ್ಯಾಯ ಸಿಗುವ ನಂಬಿಕೆ ಇದೆ ಎಂದಿದ್ದಾರೆ.