ಇನ್ಸುರೆನ್ಸ್‌ ಹಣಕ್ಕೋಸ್ಕರ ತಂದೆಯನ್ನೇ ಕೊಂದ ಪಾಪಿ ಮಗ..!

ಎಲ್‌ಐಸಿ ಹಣದ ಆಸೆಗಾಗಿ ಪಾಪಿ ಮಗನೊಬ್ಬ ತನ್ನ ತಂದೆಯನ್ನೇ ಕೊಲೆ ಮಾಡಿರುವ ಘಟನೆ, ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕಿನ ಕೊಪ್ಪ ಗ್ರಾಮದ ಗೆರೋಸಿ ಕಾಲೋನಿಯಲ್ಲಿ ನಡೆದಿದೆ.

ಎಲ್‌ಐಸಿ ಹಣದ ಆಸೆಗಾಗಿ ಪಾಪಿ ಮಗನೊಬ್ಬ ತನ್ನ ತಂದೆಯನ್ನೇ ಕೊಲೆ ಮಾಡಿರುವ ಘಟನೆ, ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕಿನ ಕೊಪ್ಪ ಗ್ರಾಮದ ಗೆರೋಸಿ ಕಾಲೋನಿಯಲ್ಲಿ ನಡೆದಿದೆ. ತಂದೆಯನ್ನು ಡಿಬೆಟಿಯನ್‌ ಕ್ಯಾಂಪ್‌ನಲ್ಲಿ ಕೆಲಸ ಇದೆ ಹೋಗು ಎಂದು ಕಳುಹಿಸಿದ ಮಗ, ಹಿಂಬದಿಯಿಂದ ಫಾಲೋ ಮಾಡಿ ಅಪ್ಪನ ತಲೆ ಭಾಗಕ್ಕೆ ದೊಣ್ಣೆಯಿಂದ ಹೊಡೆದಿದ್ದಾನೆ. ಕೊಲೆ ಮಾಡಿ ಬಿಎಂ ರಸ್ತೆಯ ಮಂಚ ದೇವನಹಳ್ಳಿ ಸಮೀಪ ಶವ ಬಿಸಾಡಿದ್ದಾನೆ. ನಂತರ ಬೈಲುಕುಪ್ಪೆ ಪೊಲೀಸರಿಗೆ ನಮ್ಮ ಅಪ್ಪನಿಎ ಅಪರಿಚಿತವಾದ ವಾಹನ ಡಿಕ್ಕಿಯಾಗಿ ಸಾವನ್ನಪ್ಪಿದ್ದಾರೆ ಎಂದು ಮಾಹಿತಿ ನೀಡಿದ್ದಾನೆ. ಅನುಮಾನಗೊಂಡು ತನಿಖೆ ನಡೆಸಿದ ಸಬ್ ಇನ್ಸ್ಪೆಕ್ಟರ್ ಅಜಯ್ ಕುಮಾರ್ ಮತ್ತು ತಂಡಕ್ಕೆ ಸತ್ಯ ತಿಳಿದು ಶಾಕ್‌ ಆಗಿದೆ. ವಿಚಾರಣೆ ನಡೆಸಿದಾಗ  ಆರೋಪಿ ಕೊಲೆ ಮಾಡಿರೋದಾಗಿ ಒಪ್ಪಿಕೊಂಡಿರುವ ಪಾಂಡು, ನನ್ನ ತಂದೆ ಹೆಸರಿನಲ್ಲಿ  ಇನ್ಸೂರೆನ್ಸ್ ವಿಮೆಯಿದೆ. ಅದ್ರಿಂದ ಅಪಘಾತದಲ್ಲಿ ಸಾವನಪ್ಪಿದ್ರೆ ಡಬಲ್ ಹಣ ಸಿಗುವ ಆಸೆಯಲ್ಲಿ ಈ ಕೃತ್ಯ ಮಾಡಿದ್ದೇನೆ ಎಂದು ತಿಳಿಸಿದ್ದಾನೆ.