ಕರ್ನಾಟಕ

ʼಗಾಂಧಿ ಭಾರತʼ ಕಾರ್ಯಕ್ರಮಕ್ಕೆ ಸೋನಿಯಾ, ಪ್ರಿಯಾಂಕಾನೇ ಗೈರು..!

ಬೆಳಗಾವಿಯಲ್ಲಿ ಇಂದು ಮತ್ತು ನಾಳೆ ಕಾಂಗ್ರೆಸ್‌ನ ʼಗಾಂಧಿ ಭಾರತʼ ಕಾರ್ಯಕ್ರಮ ನಡೆಯುತ್ತಿದೆ..

ಬೆಳಗಾವಿಯಲ್ಲಿ ಇಂದು ಮತ್ತು ನಾಳೆ ಕಾಂಗ್ರೆಸ್‌ನ ʼಗಾಂಧಿ ಭಾರತʼ ಕಾರ್ಯಕ್ರಮ ನಡೆಯುತ್ತಿದೆ..  100 ವರ್ಷಗಳ ಹಿಂದೆ ಮಹಾತ್ಮಗಾಂಧಿ ಅವರ ಅಧ್ಯಕ್ಷತೆಯಲ್ಲಿ ನಡೆದಿದ್ದ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ ಸ್ಮರಣಾರ್ಥ ಸಮಾರಂಭ ನಡೆಯುತ್ತಿದ್ದು, ಮಹತ್ವದ ಸಮಾವೇಶಕ್ಕೆ ಕಾಂಗ್ರೆಸ್‌ನ ಅಧಿನಾಯಕಿ ಸೋನಿಯಾಗಾಂಧಿ ಮತ್ತು ವಯನಾಡು ಸಂಸದೆ ಪ್ರಿಯಾಂಕಾ ಗಾಂಧಿ ಗೈರಾಗಿದ್ದಾರೆ.. ಬೆಳಗಾವಿ ಕಾಂಗ್ರೆಸ್‌ ಅಧಿವೇಶನಕ್ಕೆ ಸೋನಿಯಾ ಗಾಂಧಿ ಮತ್ತು ‌ಪ್ರಿಯಾಂಕಾ ಗಾಂಧಿ ಬರೋದಿಲ್ಲ ಅಂತ ಗೃಹ ಸಚಿವ ಜಿ.ಪರಮೇಶ್ವರ್‌ ಹೇಳಿದ್ದಾರೆ.. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್‌ ಸಂಸದ, ವಿಪಕ್ಷ ನಾಯಕ ರಾಹುಲ್‌ ಗಾಂಧಿ ಸೇರಿ ಎಲ್ಲಾ ‌ರಾಜ್ಯದ ವರ್ಕಿಂಗ್ ಕಮಿಟಿ ಸದಸ್ಯರು, ಎಲ್ಲಾ ರಾಜ್ಯದ ಪಿಸಿಸಿ ಅಧ್ಯಕ್ಷರು, ಸಿಎಲ್‌ಪಿ ನಾಯಕರು ಬಂದಿದ್ದಾರೆ ಅಂತಾ ಹೇಳಿದ್ದಾರೆ..