ಕರ್ನಾಟಕ

ಮಾರುತ ಹಾಡುಗಳಿಗೆ ಧ್ವನಿಯಾದ ಸೋನು ನಿಗಮ್

ಖ್ಯಾತ ಗಾಯಕ ಸೋನು ನಿಗಮ್ ಮುಂಬೈನ ಯಶ್ ರಾಜ್ ಸ್ಟುಡಿಯೋದಲ್ಲಿ ಚಿತ್ರದ ಹಾಡೊಂದನ್ನು ಹಾಡಿದ್ದಾರೆ. ಉಳಿದ ಹಾಡುಗಳ ವಾಯ್ಸ್ ಮಿಕ್ಸ್ ಬೆಂಗಳೂರಿನ ರೇಣು ಸ್ಟುಡಿಯೋದಲ್ಲಿ ನಡೆದಿದ್ದು, ಹರಿಚರಣ್, ಅನುರಾಧ ಭಟ್,‌ಅನನ್ಯ ಭಟ್, ಶಮಿತಾ ಮಲ್ನಾಡ್ ಹಾಗೂ ಚಂದನ್ ಶೆಟ್ಟಿ "ಮಾರುತ" ಚಿತ್ರದ ಹಾಡುಗಳನ್ನು ಮಧುರವಾಗಿ ಹಾಡಿದ್ದಾರೆ.

ಆರಂಭದಿಂದಲೂ ಸಾಕಷ್ಟು ಕುತೂಹಲ ಮೂಡಿಸಿರುವ, ಡಾ||ಎಸ್ ನಾರಾಯಣ್ ನಿರ್ದೇಶನದ,  ದುನಿಯಾ ವಿಜಯ್ ಹಾಗೂ ಶ್ರೇಯಸ್ ಮಂಜು ಪ್ರಮುಖಪಾತ್ರದಲ್ಲಿ ನಟಿಸಿರುವ ಚಿತ್ರ ಮಾರುತ. ಹಾಗೂ ಕೆ.ಮಂಜು - ರಮೇಶ್ ಯಾದವ್ ಈಶಾ ಪ್ರೊಡಕ್ಷನ್ಸ್ ಲಾಂಛನದಲ್ಲಿ ನಿರ್ಮಿಸುತ್ತಿರುವ ಬಹು ನಿರೀಕ್ಷಿತ ಚಿತ್ರ ಇದಾಗಿದ್ದು, ಜೆಸ್ಸಿಗಿಫ್ಟ್ ಸಂಗೀತ ನೀಡಿರುವ ಹಾಗೂ ಎಸ್ ನಾರಾಯಣ್ ಬರೆದಿರುವ ಐದು ಹಾಡುಗಳು "ಮಾರುತ" ಚಿತ್ರದಲ್ಲಿದೆ. 

ಖ್ಯಾತ ಗಾಯಕ ಸೋನು ನಿಗಮ್ ಮುಂಬೈನ ಯಶ್ ರಾಜ್ ಸ್ಟುಡಿಯೋದಲ್ಲಿ ಚಿತ್ರದ ಹಾಡೊಂದನ್ನು ಹಾಡಿದ್ದಾರೆ. ಉಳಿದ ಹಾಡುಗಳ ವಾಯ್ಸ್ ಮಿಕ್ಸ್ ಬೆಂಗಳೂರಿನ ರೇಣು ಸ್ಟುಡಿಯೋದಲ್ಲಿ ನಡೆದಿದ್ದು, ಹರಿಚರಣ್, ಅನುರಾಧ ಭಟ್,‌ಅನನ್ಯ ಭಟ್, ಶಮಿತಾ ಮಲ್ನಾಡ್ ಹಾಗೂ ಚಂದನ್ ಶೆಟ್ಟಿ "ಮಾರುತ" ಚಿತ್ರದ ಹಾಡುಗಳನ್ನು ಮಧುರವಾಗಿ ಹಾಡಿದ್ದಾರೆ.  

ಅಪಾರ ವೆಚ್ಚದಲ್ಲಿ ಅದ್ದೂರಿಯಾಗಿ ಮೂಡಿ ಬರುತ್ತಿರುವ "ಮಾರುತ" ಚಿತ್ರದ‌ ಬಗ್ಗೆ ಸಾಕಷ್ಟು ನಿರೀಕ್ಷೆ ಇದೆ.‌ ಸೂಪರ್ ಹಿಟ್ ಚಿತ್ರಗಳ ನಿರ್ದೇಶಕ ಎಸ್ ನಾರಾಯಣ್, ತಮ್ಮ ಅಮೋಘ ಅಭಿನಯದಿಂದಲೇ ಅಭಿಮಾನಿಗಳ ಗೆದ್ದಿರುವ ದುನಿಯಾ ವಿಜಯ್ ಹಾಗೂ ಯುವನಟ ಶ್ರೇಯಸ್ ಮಂಜು ಕಾಂಬಿನೇಶನ್ ನಲ್ಲಿ ಬರುತ್ತಿರುವ ಈ ಚಿತ್ರದ ಬಿಡುಗಡೆಗಾಗಿ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.  

ದುನಿಯಾ ವಿಜಯ್, ಶ್ರೇಯಸ್ ಕೆ ಮಂಜು‌, ಬೃಂದಾ ,ಸಾಧುಕೋಕಿಲ,  ನಿಶ್ವಿಕಾ ನಾಯ್ಡು, ರಂಗಾಯಣ ರಘು, ತಾರಾ ಅನುರಾಧ, ಶರತ್ ಲೋಹಿತಾಶ್ವ, ಪ್ರಮೋದ್ ಶೆಟ್ಟಿ, ಮಂಜು ಪಾವಗಡ , ಚಿತ್ರಾ ಶೆಣೈ, ಸುಜಯ್ ಶಾಸ್ತ್ರಿ ಮುಂತಾದವರ ತಾರಾಬಳಗವಿರುವ ಈ ಚಿತ್ರದ ವಿಶೇಷಪಾತ್ರದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಅವರು ನಟಿಸಿದ್ದಾರೆ..