ದೇಶ

ಸಂಗೀತ ಕಾರ್ಯಕ್ರಮದ ವೇದಿಕೆಯಲ್ಲೇ ಬೆನ್ನುನೋವಿಂದ ಒದ್ದಾಡಿದ ಸೋನು ನಿಗಮ್‌

ಬೆನ್ನುನೋವು ಹೆಚ್ಚಾಗಿ ಕುಸಿದೆ ಎಂದು ಹೇಳಿಕೊಂಡಿದ್ದಾರೆ. ಸದ್ಯ ಸೋನು ನಿಗಮ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರ ಆರೋಗ್ಯ ಸುಧಾರಿಸಿದೆ ಎನ್ನಲಾಗಿದೆ.

ಖ್ಯಾತ ಗಾಯಕ ಸೋನು ನಿಗಮ್ ಆರೋಗ್ಯದಲ್ಲಿ ದಿಢೀರ್ ಏರುಪೇರಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಪುಣೆಯಲ್ಲಿ ಆಯೋಜಿಸಲಾಗಿದ್ದ ಸಂಗೀತ ಕಾರ್ಯಕ್ರಮದ ವೇಳೆ ಸೋನು ನಿಗಮ್ ಅವರಿಗೆ ತೀವ್ರ ಬೆನ್ನು ನೋವು ಕಾಡಿದೆ. ಈ ಬಗ್ಗೆ ಖುದ್ದು ಸೋನು ನಿಗಮ್ ಮಾಹಿತಿ ನೀಡಿದ್ದು, ನಾನು ಸಂಗೀತ ಕಾರ್ಯಕ್ರಮದ ವೇಳೆ ವೇದಿಕೆಯ ಮೇಲೆ ತುಂಬಾ ಓಡಾಡಿ ಹಾಡುತ್ತೇನೆ. ಅದೇ ರೀತಿ ಈ ಕಾರ್ಯಕ್ರಮದಲ್ಲೂ ವೇದಿಕೆ ತುಂಬೆಲ್ಲಾ ಓಡಾಡಿಕೊಂಡು ಹಾಡುತ್ತಿದ್ದೆ. ಆಗ ಒಮ್ಮೆಲೆ ಬೆನ್ನು ಕಾಣಿಸಿಕೊಂಡಿತು. ಆದರೆ, ಅದನ್ನು ಗಂಭೀರವಾಗಿ ಪರಿಗಣಿಸದೆ ಸಂಗೀತ ಕಾರ್ಯಕ್ರಮವನ್ನು ಮುಂದುವರಿಸಿದೆ. ಆದರೆ, ಬೆನ್ನುನೋವು ಹೆಚ್ಚಾಗಿ ಕುಸಿದೆ ಎಂದು ಹೇಳಿಕೊಂಡಿದ್ದಾರೆ. ಸದ್ಯ ಸೋನು ನಿಗಮ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರ ಆರೋಗ್ಯ ಸುಧಾರಿಸಿದೆ ಎನ್ನಲಾಗಿದೆ.