ವಿದೇಶ

ಕೆಲವೇ ವರ್ಷದಲ್ಲಿ ವಿಶ್ವದ ಭೂಪಟದಿಂದ ಕಣ್ಮರೆಯಾಗುತ್ತಾ ದಕ್ಷಿಣ ಕೊರಿಯಾ?

ಕ್ಷಿಪ್ರ ಆಧುನೀಕರಣ ಮತ್ತು ಆರ್ಥಿಕ ಬೆಳವಣಿಗೆಗೆ ದಕ್ಷಿಣ ಕೊರಿಯಾ ದೇಶ ಇನ್ನು ಕೆಲವೇ ವರ್ಷಗಳಲ್ಲಿ ವಿಶ್ವದ ಭೂಪಟದಿಂದಲೇ ಕಣ್ಮರೆಯಾಗುವ ಸಾಧ್ಯತೆ ಇದೆ ಎಂದು ವರದಿಯೊಂದು ಹೇಳಿದೆ.

ಸಿಯೋಲ್‌: ಕ್ಷಿಪ್ರ ಆಧುನೀಕರಣ ಮತ್ತು ಆರ್ಥಿಕ ಬೆಳವಣಿಗೆಗೆ ದಕ್ಷಿಣ ಕೊರಿಯಾ ದೇಶ ಇನ್ನು ಕೆಲವೇ ವರ್ಷಗಳಲ್ಲಿ ವಿಶ್ವದ ಭೂಪಟದಿಂದಲೇ ಕಣ್ಮರೆಯಾಗುವ ಸಾಧ್ಯತೆ ಇದೆ ಎಂದು ವರದಿಯೊಂದು ಹೇಳಿದೆ.

ದಕ್ಷಿಣ ಕೊರಿಯಾ ಈಗ ಫಲವತ್ತತೆ ಬಿಕ್ಕಟ್ಟನ್ನು ಎದುರಿಸುತ್ತಿದೆ. ಇದರಿಂದಾಗಿ ದಕ್ಷಿಣ ಕೊರಿಯಾ ಜನಸಂಖ್ಯೆಯಲ್ಲಿ ನಿರಂತರವಾಗಿ ಇಳಿಕೆ ಕಂಡುಬರುತ್ತಿದೆ, ದೇಶದಲ್ಲಿ ಫಲವತ್ತತೆ ಬಿಕ್ಕಟ್ಟು ಇದೇ ಪ್ರಮಾಣದಲ್ಲಿ ಮುಂದುವರೆದರೆ ಯುವ ಸಮೂಹದ ಜನಸಂಖ್ಯೆ ಗಣನೀಯ ಪ್ರಮಾಣದಲ್ಲಿ ಕುಸಿಯಲಿದೆ. ಇದರಿಂದಾಗಿ ಮುಂದೊಂದು ದಿನ ದಕ್ಷಿಣ ಕೊರಿಯಾ ವಿಶ್ವದ ಭೂಪಟದಿಂದ ನಶಿಸಿ ಹೋಗುವ ಆತಂಕ ಎದುರಾಗಿದೆ ಎಂದು ವರದಿ ಹೇಳುತ್ತಿದೆ.

1960 ದಶಕದಲ್ಲಿ ಆರಂಭವಾದ ಕುಟುಂಬ ಯೋಜನಾ ನೀತಿಯೇ ಇದಕ್ಕೆಲ್ಲಾ ಕಾರಣ. ಜನನ ಪ್ರಮಾಣ ಕಡಿಮೆ ಮಾಡಲು ಸಾಕಷ್ಟು ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಸಮಯದಲ್ಲಿ ದಕ್ಷಿಣ ಕೊರಿಯಾದ ತಲಾ ಆದಾಯ ಜಾಗತಿಕ ಸರಾಸರಿಯ ಕೇವಲ 20 ಪ್ರತಿಶತದಷ್ಟಿತ್ತು. ಫಲವತ್ತತೆಯ ದರವು ಪ್ರತಿ ಒಬ್ಬ ಮಹಿಳೆ 6ಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿರುತ್ತಿದ್ದರು. 1982 ಹೊತ್ತಿಗೆ, ಆರ್ಥಿಕ ಬೆಳವಣಿಗೆಯೊಂದಿಗೆ, ಫಲವತ್ತತೆಯ ದರವು 2.4 ಕ್ಕೆ ಇಳಿಯಿತು.

1983ರಿಂದ ಫಲವತ್ತತೆ ದರ ನಿಯಂತ್ರಣದಲ್ಲಿತ್ತು, ಆದರೆ ಈಗ ಫಲವತ್ತತೆ ಪ್ರಮಾಣ ಕಡಿಮೆಯಾಗುತ್ತಿದ್ದು, ಇದರ ಪರಿಣಾಮ ದಕ್ಷಿಣ ಕೊರಿಯಾವು ತನ್ನ ಜನಸಂಖ್ಯೆಯ ಶೇ.70ರಷ್ಟು ಕಳೆದುಕೊಳ್ಳಬಹುದು ಎಂದು ಹೇಳಲಾಗುತ್ತಿದೆ. ಜನಸಂಖ್ಯೆ ಕಡಿಮೆಯಾದರೆ ಯುವ ಸಮೂಹದ ಪ್ರಮಾಣ ಕಡಿಮೆಯಾಗುತ್ತೆ ಮತ್ತು ವಯಸ್ಸಾದವರ ಸಂಖ್ಯೆ ಹೆಚ್ಚುತ್ತೆ. ಇದರಿಂದಾಗಿ ಸಾಮಾಜಿಕ ಅಸಮತೋಲನ ಉಂಟಾಗುತ್ತೆ. ಜತೆಗೆ ದೇಶದ ಆರ್ಥಿಕತೆಯ ಮೇಲೂ ಸಹ ಗಂಭೀರ ಪರಿಣಾಮ ಬೀರುತ್ತೆ ಎಂದು ವಿಶ್ಲೇಷಕರು ಅಭಿಪ್ರಾಯ ಪಡುತ್ತಿದ್ದಾರೆ.

ಇನ್ನು ಈ ಸಮಸ್ಯೆ ಹೆಚ್ಚಲು ಕಾರಣ ಇಂದಿನ ಯುವ ಸಮೂಹದ ಆದ್ಯತೆಗಳಾಗಿವೆ. ಯುವ ಸಮೂಹ ಮದುವೆಗಿಂತಲೂ ತಮ್ಮ ಕೆರಿಯರ್ ಬಗ್ಗೆ ಹೆಚ್ಚಿನ ಗಮನವಹಿಸುತ್ತಿದ್ದಾರೆ. 2024 ಸಮೀಕ್ಷೆಯಲ್ಲಿ, ಮೂರನೇ ಒಂದು ಭಾಗದಷ್ಟು ಮಹಿಳೆಯರು ಮದುವೆಯಾಗಲು ಬಯಸುತ್ತಿಲ್ಲ,

ಈ ಹಿನ್ನೆಲೆಯಲ್ಲಿ ದಕ್ಷಿಣ ಕೊರಿಯಾ ಸರ್ಕಾರ ದೇಶದಲ್ಲಿ ಫಲವತ್ತತೆ ಪ್ರಮಾಣವನ್ನು ಹೆಚ್ಚಿಸಲು ಮಕ್ಕಳನ್ನು ನೋಡಿಕೊಳ್ಳಲು ವಿದೇಶಿ ಮನೆಗೆಲಸಗಾರರನ್ನು ನೇಮಿಸಿಕೊಳ್ಳುವುದು, ತೆರಿಗೆಯಿಂದ ವಿನಾಯಿತಿ, 30 ವರ್ಷದೊಳಗಿನ ಪುರುಷರು 3 ಅಥವಾ ಅದಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿದರೆ ಕಡ್ಡಾಯ ಮಿಲಿಟರಿ ಸೇವೆಯಿಂದ ವಿನಾಯಿತಿ ನೀಡುವುದು ಸೇರಿ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದೆ.

ಭಾರತದಲ್ಲೂ ಸಹ ಫಲವತ್ತತೆ ಪ್ರಮಾಣ ಕಡಿಮೆಯಾಗುತ್ತಿದ್ದು, ನಮ್ಮಲ್ಲೂ ಇದೇ ಪರಿಸ್ಥಿತಿ ಮುಂದುವರೆದರೆ ಮುಂದಿನ ದಿನಗಳಲ್ಲಿ ಗಂಭೀರ ಪರಿಣಾಮ ಎದುರಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.