ದೀಪಗಳ ಹಬ್ಬ ದೀಪಾವಳಿ ಸಡಗರ ಎಲ್ಲೆಡೆ ಮನೆ ಮಾಡಿದೆ. ದೀಪಗಳು ಬೆಳಕಿನ ಹಬ್ಬ. ದೀಪಗಳನ್ನ ಬೆಳಗುವಾಗ ಒಂದೇ ಬತ್ತಿ ಹಾಕದೇ ಎರಡು ಬತ್ತಿಗಳನ್ನ ಹಾಕುವಂತೆ ಕಿವಿಮಾತು ಕೇಳಿರುತ್ತಿರಾ. ಕಾರಣ ಇಷ್ಟೇ ಎರಡು ಬತ್ತಿಗಳು ಒಂದು ಪತಿ ಹಾಗೂ ಎರಡನೆಯದು ಪತ್ನಿ ಎಂದು. ಹೀಗೆ ಎರಡು ಜೋಡಿ ಬತ್ತಿಗಳನ್ನ ಉರಿಸುವುದರಿಂದ ಕುಟುಂಬಕ್ಕೆ ಶುಭವಾಗುತ್ತದೆ ಎಂಬ ನಂಬಿಕೆ ಇದೆ. ಹಿಂದಿನಿಂದಲೂ ಸಂಪ್ರದಾಯ, ಆಚರಣೆ, ನಂಬಿಕೆ ಆಧಾರದಲ್ಲಿ ದೀಪಗಳನ್ನ ಬೆಳಗಿಸುವಾಗ ಎರಡು ಬತ್ತಿಗಳನ್ನ ಹಾಕಿ ಬೆಳಗಲಾಗುತ್ತದೆ.