ಬೆಳಗಾವಿ : ರಾಜ್ಯ ಬಿಜೆಪಿ ಸಂಸದರ ವಿರುದ್ಧ ರಾಜ್ಯ ಬಿಜೆಪಿ ಸಂಸದರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಕಳಸಾ-ಬಂಡೂರಿ ಮಹದಾಯಿ ಯೋಜನೆ ಸ್ವರೂಪ ಬದಲಾಯಿಸಿದ್ರು. ರಾಜಕೀಯ ಇಚ್ಛಾಶಕ್ತಿ ಕೊರತೆಯಿಂದ ಮಹದಾಯಿ ಯೋಜನೆ ಕಗ್ಗಂಟಾಗಿದೆ. ಕೇಂದ್ರದಲ್ಲಿ ರಾಜ್ಯದ ಇಬ್ಬರೂ ಮಾಜಿ ಸಿಎಂ, ಓರ್ವ ಪ್ರಭಾವಿ ಕೇಂದ್ರ ಸಚಿವ ಇದ್ದರೂ ಪ್ರಯೋಜನವಿಲ್ಲ ಮಾಜಿ ಸಿಎಂ, ಸಂಸದರಾದ ಬಸವರಾಜ್ ಬೋಮ್ಮಾಯಿ, ಜಗದೀಶ್ ಶೆಟ್ಟರ್, ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅಂತಾ ಘಟಾನುಘಟಿ ನಾಯಕರಿದ್ದಾರೆ ಸಂಸದರಾಗಿ ಗೆದ್ದು ಬಂದಿರೋ ನಾಯಕರಿಂದಲೇ ಯೋಜನೆಗೆ ನಿರ್ಲಕ್ಷ್ಯ ಎಂದು ಹೋರಾಟಗಾರ ಅಶೋಕ ಚಂದರಗಿ ಕಿಡಿಕಾರಿದ್ದಾರೆ.
ಬೆಳಗಾವಿಯಲ್ಲಿ ಮಾತನಾಡಿದ ಅಶೋಕ್ ಚಂದರಗಿ, ಸಂಸದರಿಗೆ ಪ್ರತಿ ಬಾರಿಯೂ ಮಹದಾಯಿಗೆ ಅಡ್ಡಗಾಲು ಹಾಕ್ತಿರೋ ಗೋವಾ ವನ್ಯಜೀವಿ ಮಂಡಳಿಯಿಂದ ಅನುಮತಿ ಕೊಡಿಸಲು ಆಗ್ತಿಲ್ಲ. ಚತ್ತೀಘಡದಿಂದ ಗೋವಾ ವರೆಗೂ ವಿದ್ಯುತ್ ಯೋಜನೆಗೆ ವನ್ಯಜೀವಿ ಮಂಡಳಿ ಅನುಮತಿ ಕೊಡುತ್ತೆ. ಅದೇ ಮಹದಾಯಿ ಯೋಜನೆಗೆ ಯಾಕೇ ಕೊಡ್ತಿಲ್ಲ. ಮಹದಾಯಿ ಹೋರಾಟದಿಂದಲೇ ರಾಜಕೀಯದಲ್ಲಿ ಬೆಳೆದಿರೋ ಈ ನಾಯಕರು ಯೋಜನೆಯ ಅನುಷ್ಠಾನಕ್ಕೆ ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದಿದ್ದಾರೆ.
201 ರಲ್ಲೇ ಮಹದಾಯಿ ನ್ಯಾಯಾಧೀಕರಣದಿಂದ ತೀರ್ಪು ನೀಡಿದೆ. ಮಹದಾಯಿ ತೀರ್ಪು ಬಂದ್ರು ನಾಲ್ಕು ಜಿಲ್ಲೆ ಜನರಿಗೆ ಕುಡಿಯುವ ನೀರು ಸಿಗುತ್ತಿಲ್ಲ. ಬೆಳಗಾವಿ, ಬಾಗಲಕೋಟೆ, ಗದಗ, ಧಾರವಾಡ ಜಿಲ್ಲೆ ರೈತರು, ಜನರ ಬಹುವರ್ಷಗಳಿಂದ ಹೋರಾಟ ಮಾಡುತ್ತಿದ್ದಾರೆ. ಆದ್ರೆ ಮಹದಾಯಿ ಹೆಸರಿನಲ್ಲಿ ರಾಜಕೀಯ ಮಾತ್ರ ನಿಂತಿಲ್ಲ ಎಂದು ರಾಜ್ಯ ಬಿಜೆಪಿ ಸಂಸದರ ವಿರುದ್ಧ ಹೋರಾಟಗಾರ ಅಶೋಕ ಚಂದರಗಿ ವಾಗ್ದಾಳಿ ನಡೆಸಿದ್ದಾರೆ.