ಸಾರಿಗೆ ನಿಗಮದ ಹೊರ ಗುತ್ತಿಗೆ ನೌಕರರು ಧಿಡೀರ್ನೆ ಕೆಲಸ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಿದ್ದಾರೆ. ಏಜೆನ್ಸಿಯಿಂದ ಆಯ್ಕೆಯಾದ ನೂರಾರು ಹೊರಗುತ್ತಿಗೆ ನೌಕರರು ತುಮಕೂರಿನ ಅಂತರಸನಹಳ್ಳಿ ಬಳಿಯ ಕೆಎಸ್‌ಅರ್‌ಟಿಸಿಯ ಡಿಪೋದ ಮುಂದೆ ಪ್ರತಿಭಟನೆ ನಡೆಸಿದ್ದಾರೆ.. ಏಜೆಸ್ಸಿ ರದ್ದು ಮಾಡಿ, ನಿಗಮದಿಂದಲೇ ಹೊರಗುತ್ತಿಗೆ ಕೆಲಸ ನೀಡಿ ಎಂದು ಒತ್ತಾಯಿಸಿದ್ದಾರೆ. ಏಜೆನ್ಸಿಯಿಂದ ವೇತನ ಕಡಿಮೆ ಮಾಡಿ ನಮಗೆ ಅನ್ಯಾಯ ಮಾಡಲಾಗ್ತಿದೆ. ಸಿಎಂ ಸಿದ್ದರಾಮಯ್ಯರವರು ಹಲವು ಗ್ಯಾರಂಟಿ ಕೊಟ್ಟು ಜನ್ರಿಗೆ ಸಾಕಷ್ಟು ಅನುಕೂಲ ಮಾಡಿದ್ದಾರೆ. ಗ್ಯಾರಂಟಿ ಮಾದರಿ ನಮಗೂ ಏಜನ್ಸಿ ರದ್ದು ಮಾಡಿ ನಿಗಮದಿಂದಲೇ ಹೊರಗುತ್ತಿಗೆ ನೀಡಿ ಎಂದು ಪ್ರತಿಭಟನೆ ಮೂಲಕ ಸಿಎಂ ಸಿದ್ದರಾಮಯ್ಯಗೆ ಮನವಿ ಮಾಡಿದ್ದಾರೆ. ಅಷ್ಟೆ ಅಲ್ಲಾ ಈ ಹಿಂದೆ 23 ಸಾವಿರ ವೇತನ ಕೊಡುತ್ತಿದ್ದರು, ಈಗ 15 ಸಾವಿರಕ್ಕೆ ಕಡಿತ ಮಾಡಿದ್ದಾರೆ. ಅಪಘಾತದಲ್ಲಿ ಸತ್ತರೆ 20 ಸಾವಿರ ಕೊಡ್ತಾರೆ, ಹಾಗಾದ್ರೆ ನೌಕರರ ಜೀವಕ್ಕೆ ಬೆಲೆ ಇಲ್ವಾ ಅಂತಾ ಏಜೆನ್ಸಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಇನ್ನು ಸಮಸ್ಯೆ ಕೇಳಲು ಹೋದ್ರೆ ಕೆಲಸ ತೆಗೆಯುವ ಬೆದರಿಕೆ ಹಾಕ್ತಾರೆ ಅಂತ ಆರೋಪಿಸಿದ್ದಾರೆ.